ಬಳ್ಳಾರಿ: ವಿದ್ಯಾರ್ಥಿಗಳು ಕನ್ನಡ ಕಾದಂಬರಿ ಓದುವ ಅಭಿರುಚಿ ಬೆಳೆಸಿಕೊಳ್ಳಿ: ರಮೇಶ್

ಬಳ್ಳಾರಿ: ವಿದ್ಯಾರ್ಥಿಗಳು  ಕನ್ನಡ ಕಾದಂಬರಿ ಓದುವ ಅಭಿರುಚಿ ಬೆಳೆಸಿಕೊಳ್ಳಿ: ರಮೇಶ್

ಲೋಕದರ್ಶನ ವರದಿ

ಬಳ್ಳಾರಿ 15: ಕನ್ನಡ ಸಾಹಿತ್ಯದ ಪ್ರಕಾರವಾದ ಕನ್ನಡ ಕಾದಂಬರಿ ಸಾಹಿತ್ಯವು ಅನೇಕ ವಿಷಯ ವಸ್ತುಗಳನ್ನು ಒಳಗೊಂಡು ಅದು ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತದೆ. ಸಮಾಜದಲ್ಲಿ ಅನೇಕ ಬಗೆಯ ತೊಳಲಾಟಗಳು ಇವೆ. ಅವೆಲ್ಲವುಗಳನ್ನು ಕಾದಂಬರಿಕಾರರು ಓದುಗರ ಕಣ್ಣಿಗೆ ಕಟ್ಟುವಂತೆ ಬರೆಯುವ ಸೃಜನಶೀಲತೆಯನ್ನು ಹೊಂದಿರುತ್ತಾರೆ. ಹಾಗಾಗಿ ಕಾದಂಬರಿ ಸಾಹಿತ್ಯವನ್ನು ವಿದ್ಯಾಥರ್ಿಗಳು ಓದುವ ಮೂಲಕ ಸಾಹಿತ್ಯವನ್ನು ಆಸ್ವ್ವಾದಿಸಬೇಕೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ್ ಅವರು ತಿಳಿಸಿದರು. 

ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ ಸ್ವಾಯತ್ತ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಕಾಲೇಜಿನ ಕನ್ನಡ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಹೆಬ್ಬಾಲೆ ಕೆ.ನಾಗೇಶ್ ಅವರ `ಅಗ್ರಹಾರ' ಕಾದಂಬರಿಯ ಬಿಡುಗಡೆ ಸಮಾರಂಭವನ್ನು ಗಿಡಕ್ಕೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ನಾಗೇಶ್ ಅವರ ಅಗ್ರಹಾರ ಕೃತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್, ಜ್ಯೋತಿಬಾಪುಲೆ ಸೇರಿದಂತೆ ಅನೇಕ ಸಮಾಜ ಸುಧಾರಕರ ತತ್ವ ಚಿಂತನೆಗಳು ಅಡಗಿವೆ. ಕೊಡಗು ನೆಲದ ಮಣ್ಣಿನ ಭಾಷೆಯನ್ನು ಬಳಸಿಕೊಂಡು ಕಾದಂಬರಿಯನ್ನು ಬರೆದಿರುವುದು ಆ ಪ್ರದೇಶದ ಭಾಷೆ ಮತ್ತು ಸಾಂಸ್ಕೃತಿಕ ಸೊಗಡನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದರು. 

ಕನ್ನಡ ವಿಶ್ವವಿದ್ಯಾಲಯದ ಆಶಯದ ಕುರಿತು ಮಾತನಾಡಿದ ಕುಲಪತಿಗಳು ಜಗತ್ತಿನಲ್ಲಿಯೇ ಒಂದು ಭಾಷೆಗಾಗಿ ಇರುವ ವಿಶ್ವವಿದ್ಯಾಲಯವೆಂದರೆ ಅದು ಕನ್ನಡ ವಿಶ್ವವಿದ್ಯಾಲಯ ಮಾತ್ರ. ಡಾ.ಚಂದ್ರಶೇಖರ ಕಂಬಾರರಂತಹವರು ನಾಡು ನುಡಿಯ ಕುರಿತು ಸಂಶೋಧನೆ ಮಾಡುವುದಕ್ಕೆ ಕಟ್ಟಿದ ಒಂದು ಕನಸಿನ ವಿಶ್ವವಿದ್ಯಾಲಯವೆಂದರಲ್ಲದೆ, ವಿಶ್ವವಿದ್ಯಾಲಯದ ಪ್ರಸಾರಾಂಗವು ಅತ್ಯುತ್ತಮ ಕೃತಿಗಳನ್ನು ಪ್ರಕಟಿಸುವ ಮೂಲಕ ತನ್ನದೇ ಕೊಡುಗೆಯನ್ನು ಸಾಹಿತ್ಯ ವಲಯಕ್ಕೆ ನೀಡುತ್ತಿದೆ ಎಂದು ಹೇಳಿದರು. 

ಪುಸ್ತಕ ಕುರಿತು ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಸಿ.ನಾಗಣ್ಣ ಅವರು, ಅಗ್ರಹಾರ ಕಾದಂಬರಿಯು ಜಾನಪದ ಹಿನ್ನೆಲೆಯನ್ನು ಹೊಂದಿದೆ. ಭಾಷೆಯು ತಳಸಮುದಾಯದ ಭಾಷೆಯಾಗಿದ್ದು, ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದರೂ ಭಾರತದ ಗ್ರಾಮೀಣ ಬದುಕು ಸುಧಾರಿಸಿಕೊಂಡಿಲ್ಲ. ಜಾತೀಯತೆ ತಾಂಡವವಾಡುತ್ತಿದೆ. ಅಂಬೇಡ್ಕರ್ ಅವರು ಭಾರತ ಹೆಚ್ಚು ನಗರೀಕರಣವಾಗಬೇಕೆಂದು ಹಾಗೂ ಗ್ರಾಮೀಣ ಭಾರತ ಇರಬಾರದು ಎಂದು ಪ್ರತಿಪಾದಿಸುತ್ತಾರೆ. ಕೃತಿಯಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಬೇವಿನ ಮರ ಮತ್ತು ಅರಳಿ ಮರಗಳು ಮಾತನಾಡುವುದನ್ನು ಚಿತ್ರಿಸಲಾಗಿದೆ. ಈ ಕಾದಂಬರಿ ಸೃಜನಶೀಲವಾಗಿ ಮೂಡಿ ಬಂದಿದೆ. ಇದೊಂದು ಯಶಸ್ವಿ ಕೃತಿಯಾಗಿದೆ ಎಂದು ತಿಳಿಸಿದರು. 

ಕೃತಿಯನ್ನು ಸರಳಾದೇವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಯು.ಅಬ್ದುಲ್ ಮುತಾಲಿಬ್ ಅವರು ಮಾತನಾಡಿ ವಿದ್ಯಾಥರ್ಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಾಯಕವಾಗಿವೆ. ವಿದ್ಯಾಥರ್ಿಗಳು ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ. ಮುಂದೊಂದು ದಿನ ನೀವು ಸಹ ಒಬ್ಬ ಲೇಖಕರಾಗುತ್ತೀರಿ. ಸಂಸ್ಕೃತಿ ಚಿಂತಕರಾಗುತ್ತೀರಿ ಎಂದು ತಿಳಿಸಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದರಾಮ ಕಲ್ಮಠ ಅವರು ಮಾತನಾಡಿದರು. 

ವೇದಿಕೆಯ ಮೇಲೆ ಬಳ್ಳಾರಿಯ ಕಥೆಗಾರರಾದ ಡಾ.ಸಂಪಿಗೆ ನಾಗರಾಜ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಆರಂಭದಲ್ಲಿ ಗಾಯಕ ಎಸ್.ಎಂ.ಹಿರೇಮಠ ಅವರು ಪ್ರಾಥರ್ಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಸಿ.ದೇವಣ್ಣ  ಸ್ವಾಗತಿಸಿದರು. ದಿವಾಕರನಾರಾಯಣ ಅವರು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.  

 

ಸುದ್ದಿ ಓದಿ