ಕಾರವಾರ

ಬೃಹತ್ ಆರ್ಥಿಕ ಸೇರೆ​‍್ಡ ಸ್ಯಾಚುರೇಶನ್ ಅಭಿಯಾನ ಯಶಸ್ವಿ

ಬೃಹತ್ ಆರ್ಥಿಕ ಸೇರೆ​‍್ಡ ಸ್ಯಾಚುರೇಶನ್ ಅಭಿಯಾನ ಯಶಸ್ವಿ

ಲೋಕದರ್ಶನ ವರದಿ 


             ಕಾರವಾರ 17 :- ಕೆನರಾ ಬ್ಯಾಂಕ್ ಕಡವಾಡ ಮತ್ತು ಕಡವಾಡ ಗ್ರಾಮ ಪಂಚಯಿತಿ ವತಿಯಿಂದ  ಆಯೋಜಿಸಲಾದ ಬೃಹತ್ ಆರ್ಥಿಕ ಸೇರೆ​‍್ಡ ಸ್ಯಾಚುರೇಶನ್ ಅಭಿಯಾನವು ಸೋಮವಾರ ಯಶಸ್ವಿಯಾಗಿ ನಡೆಯಿತು.  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದೀಲೀಶ್ ಶಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕ್‌ಗಳು ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿವೆ ಎಂದರು.                                 ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತೀಯ ರಿಸರ್ವ್‌ ಬ್ಯಾಂಕನ ಪ್ರಾದೇಶಿಕ ನಿರ್ದೇಶಕಿ ಕಾಯಾ ತ್ರಿಪಾಠಿ, ಆರ್ಥಿಕ ಸೇರೆ​‍್ಡ ಸ್ಯಾಚುರೇಶನ್ ಅಭಿಯಾನದ ಬಗ್ಗೆ ಮಾಹಿತಿಯನ್ನು ನೀಡಿದರು. ಕೆನರಾ ಬ್ಯಾಂಕ್, ಮಣಿಪಾಲ ವೃತ್ತದ ಉಪ ಮಹಾಪ್ರಬಂಧಕಿ ಎಮ್‌. ಮಾಧವಿ ಅವರು ಪಿಎಂಜೆಡಿವೈ, ಪಿಎಂಎಸ್‌ಬಿವೈ, ಪಿಎಂಜೆಜೆಬಿವೈ, ಎಪಿವೈ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. 

             ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಸುರಕ್ಶಾ ವಿಮಾ ಯೋಜನೆಯಡಿಯಲ್ಲಿ ರೈಲ್ವೆ ಅಪಘಾತದಲ್ಲಿ ಶಾಶ್ವತ ಅಂಗವಿಕಲತೆ ಹೊಂದಿದ ಮತ್ತು ಪ್ರಧಾನಮಂತ್ರಿ ಜೀವನ ಜ್ಯೊತಿ ವಿಮಾ ಯೋಜನೆಯಡಿಯಲ್ಲಿ ಸಹಜ ಮರಣ ಹೊಂದಿದವರಿಗೆ ವಿಮಾ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು. ಭಾರತೀಯ ರಿಸರ್ವ್‌ ಬ್ಯಾಂಕ್ ಉಪ ಮಹಾಪ್ರಬಂಧಕ ಸಂತೋಷ್ ಕುಮಾರ್ ಪಟ್ನಾಯಕ್,

           ಕಾರವಾರ  ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ನಾಗರಾಜ ರೆಡ್ಡಿ, ಎಸ್‌.ಬಿ.ಐ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಮುರಳೀಧರ,  ಕರ್ನಾಟಕ ಬ್ಯಾಂಕ್ ಕುಮಟಾ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂದಕ ವಾಸುದೇವ್ ನಾಯಕ್, ನಬಾರ್ಡ್‌ ವ್ಯವಸ್ಥಾಪಕ ಸುಶೀಲ್ ನಾಯ್ಕ, ಚಿತ್ತಾರಾಮ ಮರಾಠಿ ಮತ್ತಿತರರು ಉಪಸ್ಥಿತರಿದ್ದರು.   


ಸುದ್ದಿ ಓದಿ