ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಕೊಡಿ ಇಲ್ಲವೇ ಬೆಳ ನಷ್ಟ ಪರಿಹಾರ ಕೊಡಿ : ತಾಳೂರು ಪಿ ರಾಘವೇಂದ್ರ ರೆಡ್ಡಿ ಮನವಿ
ಬಳ್ಳಾರಿ. ನ. 17: ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಸ್ತುತ 2026- 27ರ ಮುಂಗಾರು ಹಂಗಾಮಿನಲ್ಲಿ ರೈತರು ಲಕ್ಷಾಂತರ ಎಕರೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಇವರು ಬೆಳೆದಿರುವ ಬೆಳೆಗಳಿಗೆ ಡಿಸೆಂಬರ್ 15 ರವರೆಗೆ ನೀರು ಹರಿಸಿದರೆ ಮಾತ್ರ ಬೆಳೆಗಳ ಫಸಲು ಕೈಗೆ ಸಿಗಲು ಸಾಧ್ಯವಿದೆ.
ಇಲ್ಲವಾದಲ್ಲಿ ಲಕ್ಷಾಂತರ ರೈತರ ಕೋಟ್ಯಂತರ ರೂಪಾಯಿ ಬಂಡವಾಳ ಮತ್ತು ಶ್ರಮ ವ್ಯರ್ಥವಾಗುವದರ ಜೊತೆಗೆ ಅಪಾರ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. " ಕೈಗೆ ಬಂದ ತುತ್ತು ಬಾಯಿಗೆ ಬರದಂತೆ "ಆಗುತ್ತದೆ. ಆದ್ದರಿಂದ ಸರ್ಕಾರವು ಬೆಳೆದಿರುವ " ಬೆಳೆಗಳಿಗೆ ನೀರು ಕೊಡಿ ಅಥವಾ ಬೆಳೆ ನಷ್ಟ ಪರಿಹಾರ " ಕೊಡಿ ಎಂದು ರಾಘವೇಂದ್ರ ರೆಡ್ಡಿ ಹೊಸ ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳಕಳಿಯ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.