ಬೆಳಗಾವಿ

ಕಿತ್ತೂರು ಉತ್ಸವದಲ್ಲಿ ಕುಸ್ತಿ ಕಲಿಗಳ ಅಬ್ಬರ : ಕಣ್ಮನ ಸೆಳೆದ ದೇಶಿ ಕ್ರೀಡೆ

ಕಿತ್ತೂರು ಉತ್ಸವದಲ್ಲಿ ಕುಸ್ತಿ ಕಲಿಗಳ ಅಬ್ಬರ : ಕಣ್ಮನ ಸೆಳೆದ ದೇಶಿ ಕ್ರೀಡೆ

ಬೆಳಗಾವಿ : ಕಿತ್ತೂರು ಉತ್ಸವದ ಕೊನೆಯ ದಿನವಾದ ರವಿವಾರ ಕಿತ್ತೂರಿನಲ್ಲಿ ಕುಸ್ತಿ ಕಲಿಗಳ ಅಬ್ಬರದ‌ ನಡುವೆ ಕುಸ್ತಿ ಪಂದ್ಯಾವಳಿಗೆ ಅದ್ದೂರಿ ಚಾಲನೆ ನೀಡಲಾಯಿತು. 

   ವಿವಿಧ ಜಿಲ್ಲೆಗಳು, ರಾಜ್ಯಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಕುಸ್ತಿಪಟುಗಳು ತಮ್ಮ ಪಟ್ಟುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

    ಕಿತ್ತೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಅದ್ದೂರಿಯಾಗಿ ನಡೆಯುತ್ತಿರುವ ಉತ್ಸವದಲ್ಲಿ ಇಂದು ಕೂಡ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳು ಜರುಗಿದವು. ಅದರಲ್ಲೂ ದೇಶಿ ಕುಸ್ತಿ ಪಂದ್ಯಾವಳಿ ಜನರ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು.

 ಕುಸ್ತಿ ಪಂದ್ಯಗಳನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಕುಸ್ತಿಪಟುಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಹರ್ಷೋದ್ಗಾರಗಳ ಮೂಲಕ ಉತ್ತೇಜನ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರಯ್ಯ ಕಾಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಉತ್ಸವದ ಕೊನೆಯ ದಿನ ಕುಸ್ತಿ ಪಂದ್ಯಾವಳಿಯೊಂದಿಗೆ ಕಿತ್ತೂರಿನ ಸಾಂಪ್ರದಾಯಿಕ ಕ್ರೀಡಾ ವೈಭವ ಅನಾವರಣಗೊಂಡಿತು.

ಸುದ್ದಿ ಓದಿ