ಸಮ್ಮೇದ ಶಿಖರ ಯಾತ್ರೆಗೆ ಹೊರಟ ಬಾವನ ಸೌಂದತ್ತಿ ಜೈನ ಶ್ರಾವಕ-ಶ್ರಾವಕಿಯರು
ರಾಯಬಾಗ 25 : "ಜೈನ ಧರ್ಮದಲ್ಲಿ ತೀರ್ಥಕ್ಷೇತ್ರಗಳ ದರ್ಶನ ಮತ್ತು ಶ್ರದ್ಧಾ ಸ್ಥಾನಗಳ ಯಾತ್ರೆಗೆ ಅತ್ಯಂತ ವಿಶೇಷ ಹಾಗೂ ಪವಿತ್ರ ಸ್ಥಾನವಿದೆ. ಕೇವಲ ಮನಸ್ಸಿನ ಶಾಂತಿಗಷ್ಟೇ ಅಲ್ಲದೆ, ಇಂತಹ ಧಾರ್ಮಿಕ ಕ್ಷೇತ್ರಗಳಿಗೆ ಸಾಧು-ಸಂತರ ಸಾನಿಧ್ಯದಲ್ಲಿ ಪ್ರವಾಸ ಮಾಡುವುದು ಮಾನವ ಜನ್ಮಕ್ಕೆ ಪುಣ್ಯ ತಂದಂತೆ ಆಗುತ್ತದೆ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಕಾಟಿ ಅವರು ಅಭಿಪ್ರಾಯಪಟ್ಟರು.ಬಾವನ ಸೌಂದತ್ತಿ ಗ್ರಾಮದ ಜೈನ ಶ್ರಾವಕ ಮತ್ತು ಶ್ರಾವಕಿಯರು ಜಾರ್ಖಂಡ ರಾಜ್ಯದಲ್ಲಿರುವ ಜೈನ ಧರ್ಮದ ಪರಮ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮಿದ ಶಿಖರಕ್ಕೆ ಯಾತ್ರೆ ಕೈಗೊಂಡಿದ್ದು, ಇಂದು ಬೆಳಗ್ಗೆ ಒಟ್ಟು 80 ಜನ ಯಾತ್ರಾರ್ಥಿಗಳು ಭಕ್ತಿ-ಶ್ರದ್ಧೆಯಿಂದ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮ್ಮಿದ ಶಿಖರವು ಇಪ್ಪತ್ತಕ್ಕೂ ಹೆಚ್ಚು ತೀರ್ಥಂಕರರು ಮೋಕ್ಷ ಪಡೆದ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ಅಲ್ಲಿಗೆ ತೆರಳುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯ. ಪ್ರತಿಯೊಬ್ಬರ ಜೀವನದಲ್ಲಿ ಇಂತಹ ಆಧ್ಯಾತ್ಮಿಕ ಯಾತ್ರೆಗಳು ಸಾರ್ಥಕತೆಯನ್ನು ತಂದುಕೊಡುತ್ತವೆ" ಎಂದರು. ಸುಖಕರ ಪ್ರಯಾಣಕ್ಕೆ ಹಾರೈಕೆ: ಗ್ರಾಮದಿಂದ ಯಾತ್ರೆಗೆ ಹೊರಟ ಶ್ರಾವಕ-ಶ್ರಾವಕಿಯರಿಗೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಚಂದ್ರ ಕಾಟಿ ಅವರು ಹೂಗುಚ್ಛ ನೀಡಿ ಗೌರವಿಸಿ, ನಿಮ್ಮ ಈ ಯಾತ್ರೆಯು ಯಾವುದೇ ವಿಘ್ನಗಳಿಲ್ಲದೆ ಸುಖಕರವಾಗಿ, ಸುರಕ್ಷಿತವಾಗಿ ನೆರವೇರಲಿ ಹಾಗೂ ಭಗವಾನ್ ಮಹಾವೀರರ ಹಾಗೂ ಜೈನ 24 ತೀರ್ಥಂಕರರ ಕೃಪಾಶೀರ್ವಾದ ನಿಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಹಾರೈಸಿ ಮಾತನಾಡಿದರು. ಗಣ್ಯರು ಹಾಗೂ ಶ್ರಾವಕರ ಉಪಸ್ಥಿತಿ: ಈ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಜಿತ್ ಖೇಮಲಾಪುರೆ, ಅನಿಲ್ ಹಂಜೆ, ಅರುಣ್ ಶಿಂಧಿ, ವಿನೋದ್ ಹಿರೇಮಠ, ಲಕ್ಕಪ್ಪ ಅಂಬಿ, ಅಶೋಕ್ ಜನಾಜ, ಅನಿಲ್ ಪಾಟೀಲ, ಅರಿಹಂತ್ ಕಾಮಗೊಂಡ, ಶಾಂತಿನಾಥ ಪಾಟೀಲ, ಅಶೋಕ್ ಕೋಗೆ, ಬಾಬು ಜನಾಜ, ದಾದಾಸಾಹೇಬ್ ಸಾಂಗಲೆ, ಪ್ರಕಾಶ್ ಭೀಷ್ಠೆ, ದೇವಪ್ಪ ಸಾಂಗಲೆ, ಬಾಹುಬಲಿ ಮಗದುಮ್ ಸೇರಿದಂತೆ ಗ್ರಾಮದ ಅನೇಕ ಜೈನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದು ಯಾತ್ರಾರ್ಥಿಗಳನ್ನು ಶುಭ ಹಾರೈಸಿ ಬೀಳ್ಕೊಟ್ಟರು.