ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ಅರಿಹಂತ ಫೌಂಡೇಶನ್ನಿಂದ ಸನ್ಮಾನ
ರಾಯಬಾಗ 11: ಜೈನ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಸಾಧಕರನ್ನು ಗುರುತಿಸಿ ಪುರಸ್ಕಾರ ನೀಡಿ ಗೌರವಿಸುವ ಕೆಲಸ ಮಾಡುತ್ತಿರುವ ಅರಿಹಂತ ಚಾರಿಟೇಬಲ್ ಫೌಂಡೇಶನ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕಿ ಡಾ.ಭಾರತಿ ಸವದತ್ತಿ ಹೇಳಿದರು.ಭಾನುವಾರ ಪಟ್ಟಣದ ಮಹಾವೀರ ಸಮುದಾಯ ಭವನದಲ್ಲಿ ಅರಿಹಂತ ಚಾರಿಟೇಬಲ್ ಫೌಂಡೇಶನ ಇದರ 12ನೇ ವರ್ಷದ ತಾಲೂಕಾ ಜೈನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಬೇಕು. ಪ್ರತಿಭಾವಂತರಿಗೆ ಮಾತ್ರ ಪುರಸ್ಕಾರ, ಸತ್ಕಾರ, ಗೌರವ ದೊರೆಯುತ್ತದೆ.
ಜೈನ ಸಮುದಾಯ ಮಾಡುವ ದಾನ, ಧರ್ಮ, ಸಮಾಜ ಸೇವೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ಫೌಂಡೇಶನ ಅಧ್ಯಕ್ಷ ಡಿ.ಸಿ.ಸದಲಗಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಾಧಕರಿಗೆ ಸತ್ಕಾರ, ದಾನಿಗಳಿಗೆ ಗೌರವ ಸಮರೆ್ಣ ಮಾಡುವುದು ಫೌಂಡೇಶನ ಮುಖ್ಯ ಉದ್ದೇಶವಾಗಿದೆ ಎಂದರು.ಪುರಸ್ಕಾರ ದಾನಿಗಳಾದ ಡಾ.ಅಜೀತ ಮತ್ತು ಶೋಭಾ ನಾಯಿಕ ದಂಪತಿಗಳನ್ನು ಸತ್ಕಾರಿಸಿ, ವೈದ್ಯ ಡಾ.ಅಜೀತ ನಾಯಿಕ ಅವರಿಗೆ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಧಕರಾದ ಎಲ್.ಎಲ್.ಬಿ ಪದವಿಯಲ್ಲಿ ಚಿನ್ನದ ಪದಕ ಪಡೆದ ಪೂನಮ ಹಂಜೆ, ಸೌಮ್ಯಾ ಶೆಟ್ಟಿ, ಸೆಂಟ್ರಲ್ ಎಕ್ ಸೈಜ್ ಅಧಿಕಾರಿ ಅಮೃತ ಚೌಗುಲೆ,
ಶಿಕ್ಷಕ ಪಾರೀಸ ಗೌಡಕೆಂಚಕ್ಕಗೋಳ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಫೌಂಡೇಶನ ಉಪಾಧ್ಯಕ್ಷ ಸಂಜಯ ಬಡೋರೆ, ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ, ನಿರ್ದೇಶಕರಾದ ಈರಗೌಡ ಪಾಟೀಲ, ದಶರಥ ಶೆಟ್ಟಿ, ಶೀತಲ ಬೇಡಿಕಿಹಾಳೆ, ಸಂಜಯ ಹಂಜೆ, ಪಾರೀಶ ಉಗಾರೆ, ಭರತೇಶ ಪಾಟೀಲ, ನೇಮಿನಾಥ ಅಸ್ಕಿ, ವರ್ಧಮಾನ ಬಣವಣೆ ಹಾಗೂ ಯುವ ಧುರೀಣ ಧುಳಗೌಡ ಪಾಟೀಲ,
ತಾ.ಪಂ.ಮಾಜಿ ಅಧ್ಯಕ್ಷೆಸುಜಾತ ಪಾಟೀಲ, ಜಯಪಾಲ ಬಣವಣೆ ಹಾಗೂ ಜೈನ ಸಮುದಾಯದ ಮುಖಂಡರು ಸೇರಿ ಅನೇಕರು ಇದ್ದರು.ಫೋಟೊ: 11 ರಾಯಬಾಗ 3ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಮಹಾವೀರ ಸಮುದಾಯ ಭವನದಲ್ಲಿ ಅರಿಹಂತ ಚಾರಿಟೇಬಲ್ ಫೌಂಡೇಶನ ಇದರ 12ನೇ ವರ್ಷದ ತಾಲೂಕಾ ಜೈನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು.