ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
Kannada organizations set a November 1 deadline for the installation of the Chennamma statue.
ಸಂಕೇಶ್ಚರ : ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚ್ಯುಕ್ಕಿಯಾಗಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ಯಾರಪ್ಪನ ಆಸ್ತಿ ಅಲ್ಲ. ನಾಡಿನ ಮಹಾಪುರುಷರನ್ನು ಒಂದು ಸಮಾಜಕ್ಕೆ ಸಿಯಮಿತ ಮಾಡಿದ್ದು ಮೂರ್ಖತನದ ಪರಮಾವಧಿ. ಪಟ್ಟಣದಲ್ಲಿ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ ವಿಳಂಬ ಧೋರಣೆ ಖಂಡನೆಯಾಗಿದ್ದು, ಬರುವ ನ. 1ರ ಒಳಗಾಗಿ ಪ್ರತಿಮೆ ಪ್ರತಿಷ್ಠಾಪಿಸಲು ಆಗದಿದ್ದಲ್ಲಿ ಈ ಕಾರ್ಯವನ್ನು ತಮ್ಮ ಅಧೀನಕ್ಕೆ ಪಡೆಯಬೆಕಾಗುತ್ತದೆ ಎಂದು ಕನ್ನಡಪರ ಹೋರಾಟಗಾರರು ಎಚ್ಚರಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆಯಲಾದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಮಹೇಶ ಹಟ್ಟಿಹೊಳಿ, ದಿಲೀಪ್ ಹೊಸಮನಿ, ಪ್ರಮೋದ ಹೊಸಮನಿ, ಹಾಗೂ ಸಂತೋಷ ಮುಡಸಿ ಅವರುಗಳು ಮಾತನಾಡಿ, ಚನ್ನಮ್ಮ ಪ್ರತಿಮೆ ಕಳೆದ 2023 ರಿಂದ ಈ ವರೆಗೆ ಅಂದರೆ ಮೂರು ವರ್ಷ ಕಳೆದರು ಚೆನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಂಡಿಲ್ಲ. ಈ ಕ್ರಮವನ್ನು ನಾವು ಖಂಡಿಸುತ್ತೇವೆ. ಅಲ್ಲದೆ ಚನ್ನಮ್ಮಾಜಿಯನ್ನು ಒಂದು ಸಮಾಜಕ್ಕೆ ಸಿಯಮಿತ ಮಾಡುತಿರುವದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿದರು.
ಪಟ್ಟಣದ ಯಾವದೇ ಜನರನ್ನು ಈ ಪ್ರತಿಮೆ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ವೀರಶೈವ ಸಮಾಜದ ಕೆಲವು ಮುಖಂಡರು ತಾವೇ ಸಮಾಜದ ಪರವಾಗಿ ಕಾರ್ಯ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಕಾರ್ಯ ಮೂರು ವರ್ಷಗಳಿಂದ ಈ ವರೆಗೆ ಪೂರ್ಣಗೊಂಡಿಲ್ಲ.
ವೀರಶೈವ ಸಮಾಜದಿಂದ ಈ ವರೆಗೆ 20 ಲಕ್ಷ 75 ಸಾವಿರ ಹಣ ಬಿಡಿಗಡೆಯಾಗಿದ್ದು, ಪ್ರತಿಮೆ ನಿರ್ಮಾಣ ಕಾರ್ಯ ಯಾಕೆ ತಡೆಹಿಡಿಯಲಾಗಿದೆ ಎನ್ನುವದನ್ನು ಪ್ರತಿಮೆ ನಿರ್ಮಾಣ ಮಾಡುತ್ತಿರುವ ಮುಖಂಡರು ಸ್ಪಷ್ಟ ಮಾಡಲಿ ಎಂದರು.
ಇಲ್ಲಿನ ಜನರು ಪಟ್ಟಣದಲ್ಲಿ ಮಹಾಪುರುಷರ ಪ್ರತಿಮೆ ಪ್ರತಿಷ್ಠಾಪನೆ ಆಗಲಿ ಎನ್ನುವ ಬಹಳ ದಿನಗಳ ಬೇಡಿಕೆ ಇದೆ. ಅದಕ್ಕಾಗಿ ಬರುವ ನ. 1ರ ವೇಳೆಗೆ ಚನ್ನಮ್ಮ ಪ್ರತಿಮೆ ಲೋಕಾರ್ಪಣೆ ಮಾಡಲಿ. ವೇಳೆ ಬಹಳ ಆಗಿದೆ. ಪ್ರತಿಮೆ ನಿರ್ಮಾಣ ಮಾಡುತ್ತಿರುವ ಮುಖಂಡರ ವಿಚಾರಗಳು ಬೇರೆ ಬೇರೆ ಇವೆ. ಆ ಕಾರಣಕ್ಕಾಗಿ ನಾವು ಇಲ್ಲಿಯ ವರೆಗೆ ಮೌನವಾಗಿದ್ದೇವೆ. ನ.1ರ ವರೆಗೆ ಗಡುವು ನೀಡುತ್ತಿದ್ದೇವೆ ಎಂದು ನುಡಿದರು.
ಕೆಲವರು ವೀರರಾಣಿ ಚನ್ನಮ್ಮಾಜಿಯ ಪ್ರತಿಮೆ ಪ್ರತಿಷ್ಠಾಪನೆ ವಿಷಯ ಒಂದು ಸಮಾಜಕ್ಕೆ ಸಿಯಮಿತ ಮಾಡುತ್ತಿರುವದು ಮೂರ್ಖತನದ ಪರಮಾವಧಿಯಾಗಿದ್ದು ಈ ಕಾರ್ಯ ಆಗಬಾರದು ಎಂದು ನುಡಿದರು.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸಂತೋಷ ಮುಡಶಿ, ಮಹೇಶ ಹಟ್ಟಿಹೋಳಿ, ದಿಲೀಪ ಹೊಸಮನಿ, ಪ್ರಮೋದ ಹೊಸಮನಿ, ಸಂತೋಷ ಪಾಟೀಲ, ಗಣೇಶ ಪಾಟೀಲ, ಪಿಂಟು ಸೂರ್ಯವಂಶಿ, ಸುನೀಲ ಪಾಟೀಲ, ಪ್ರೀತಮ ಸುಮಾರೆ, ಮೋಶಿನ ಪಠಾನ, ಶಿವಶಂಕರ ಭೋಸಲೆ, ಚೇತನ ಚೌಗಲಾ, ದುರದುಂಡಿ ಪಾಟೀಲ, ರಾಹುಲ ಶೇಖನವರ, ಸಂದೀಪ ರಾನವಗೋಳ, ಪ್ರಜ್ವಲ ಸುನದಾಳೆ, ಶಿವು ಸಮ್ಮಕನವರ ಉಪಸ್ಥಿತರಿದ್ದರು.
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ 