ಬೆಳಗಾವಿ

ಮೌಢ್ಯದ ವಿರುದ್ಧ ಸೆಡ್ಡು ಹೊಡೆದ ಸಿಎಂ ಡಿಕೆಶಿ : ಕಿತ್ತೂರು ಉತ್ಸವಕ್ಕೆ ಆಗಮನಕ್ಕೆ ನಿರ್ಧಾರ : ಕಾರಖಾನೆ ಮಾಲಿಕರ, ರೈತರ ಜತೆ ಸಭೆ

ಮೌಢ್ಯದ ವಿರುದ್ಧ ಸೆಡ್ಡು ಹೊಡೆದ ಸಿಎಂ ಡಿಕೆಶಿ : ಕಿತ್ತೂರು ಉತ್ಸವಕ್ಕೆ ಆಗಮನಕ್ಕೆ ನಿರ್ಧಾರ : ಕಾರಖಾನೆ ಮಾಲಿಕರ, ರೈತರ ಜತೆ ಸಭೆ
CM DK Shivakumar challenges superstition; decides to attend Kittur Utsava; holds meeting with factor

ಪಾರೇಶ ಭೋಸಲೆ

ಬೆಳಗಾವಿ : ಕಿತ್ತೂರು ಚೆನ್ನಮ್ಮನ ಉತ್ಸವಕ್ಕೆ ಆಗಮಿಸುವ ರಾಜ್ಯದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಬಿಂಭಿಸಲಾಗುವ ಮೌಢ್ಯದ ವಿರುದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು  ಕಿತ್ತೂರು ಉತ್ಸವ ಸಮಾರೋಪಕ್ಕೆ ಆಗಮಿಸಲು ಸಜ್ಜಾಗಿರುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. 

     ಹೌದು ಓದುಗರೇ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿಯಾಗಿರುವ ಚನ್ನಮ್ಮನ ಉತ್ಸವಕ್ಕೆ ಆಗಮಿಸುವ ಕರ್ನಾಟಕದ ಸಿಎಂಗಳು ತಮ್ಮ ಅಧಿಕಾರಾವಧಿ ಪೂರ್ಣ ಮಾಡುವ ಮೊದಲು ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಕೆಲವರಲ್ಲಿ ಮೂಢನಂಬಿಕೆಯ ಗುಮಾನಿ ಇತ್ತು. ಇದರಿಂದ ಕೆಲ ಮುಖ್ಯಮಂತ್ರಿಗಳು ಚನ್ನಮ್ಮನ ಉತ್ಸವಕ್ಕೆ ಆಗಮಿಸಲು ಹಿಂದೇಟು ಹಾಕುತ್ತಿದ್ದರು. ಇನ್ನೂ ಕೆಲವರು ಉತ್ಸವದಿಂದ ದೂರ ಉಳಿಯುತ್ತಿದ್ದರು.

   ಆದರೆ ಈ ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಸವನ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಅವರು ಕೂಡಾ ಈ ಹಿಂದೆ ಕಿತ್ತೂರು  ಚನ್ನಮ್ಮನ ಉತ್ಸವಕ್ಕೆ ಆಗಮಿಸುವ ಮೂಲಕ ಮೌಢ್ಯದ ವಿರುದ್ದ ತೊಡೆತಟ್ಟಿದ್ದರು. 

    ಅದರ ಬಳಿಕ ಇವಾಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಿತ್ತೂರು ಉತ್ಸವ ಕ್ಕೆ ಆಗಮಿಸುವದರ ಜೊತೆಗೆ ಮೌಢ್ಯದ ವಿರುದ್ದ ಸೆಡ್ಡು ಹೊಡೆದಿದ್ದಾರೆ. 

     ರವಿವಾರ ದಿ. 25ರಂದು ಸಂಜೆ 4.45 ಕ್ಕೆ ವಿಶೇಷ ವಿಮಾನ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಆಗಮಿಸಿ ಬಳಿಕ 5.20ಕ್ಕೆ ಕಿತ್ತೂರಿನ ಕೋಟೆ ಆವರಣದಲ್ಲಿ ನಡೆಯಲಿರುವ ಕಿತ್ತೂರು ಚನ್ನಮ್ಮ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. 

    ಬಳಿಕ 25ರ ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ  ಮಾಡಲಿದ್ದಾರೆ. ನಂತರ ಸೋಮವಾರ ದಿ. 26ರಂದು ಬೆಳಿಗ್ಗೆ 10 ಗಂಟೆಗೆ ಮಹರ್ಷಿ ಶ್ರೀ ವಾಲ್ಮೀಕಿ ಅವರ ಜಯಂತಿ ಹಾಗೂ ಮೆರವಣಿಗೆ ಚಾಲನೆ ನೀಡಲಿದ್ದಾರೆ. 

     ನಂತರ ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲಿಕರ ಸಭೆಯನ್ನು ನಡೆಸಲಿದ್ದಾರೆ. ತದನಂತರ ಮಧ್ಯಾಹ್ನ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೆರಿಸಲಿದ್ದಾರೆ. 

   ಬಳಿಕ ಸಂಜೆ 3.30ಕ್ಕೆ ಸುವರ್ಣ ವಿಧಾನ ಸೌಧದಲ್ಲಿ ಕಬ್ಬು ಬೆಳೆಗಾರರ, ರೈತರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. 

ಸುದ್ದಿ ಓದಿ