ಹಾವೇರಿ

ಬ್ಯಾಡಗಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶೇ. 81.61ರಷ್ಟು ಮತದಾನ

ಬ್ಯಾಡಗಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶೇ. 81.61ರಷ್ಟು ಮತದಾನ

ಬ್ಯಾಡಗಿ 23:  ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬ್ಯಾಡಗಿ ತಾಲೂಕಿನಲ್ಲಿ ಶೇ. 81.61ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.  

 ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಪದವೀಧರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.  

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಎರಡು ಮತಗಟ್ಟೆ ಹಾಗೂ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಒಂದು ಮತ ಗಟ್ಟೆ ಮಾಡಲಾಗಿತ್ತು ಒಟ್ಟು 2262 ಮತದಾರರನ್ನು ಹೊಂದಿದ್ದು ಈ ಪೈಕಿ ಮತಗಟ್ಟೆ 79 ರಲ್ಲಿ 693 ಮತದಾರರು ಹೊಂದಿದ್ದು ಈ ಪೈಕಿ 588 ಮತದಾರರು ಮತ ಚಲಾವಣೆ ಮಾಡಿದ್ದಾರೆ ಮತ್ತು ಮತಗಟ್ಟೆ ಸಂಖ್ಯೆ 78 ರಲ್ಲಿ 800 ಮತದಾರರನ್ನು ಹೊಂದಿದ್ದು ಈ ಪೈಕಿ 665 ಮತದಾರರು ಮತದಾನ ಮಾಡಿದ್ದಾರೆ.ಹಾಗೂ ಮತಗಟ್ಟೆ 78ಅ ಪೈಕಿ 769 ಮತದಾರರನ್ನು ಹೊಂದಿದ್ದು ಈ ಪೈಕಿ 593 ಮತದಾರರು ಮತದಾನ ಮಾಡಲಿದ್ದಾರೆ.ಒಟ್ಟು  ಹೆಣ್ಣು ಮಕ್ಕಳ 602 ಮತದಾರರು ಹಾಗೂ  ಗಂಡು 1244 ಮತದಾರರು ಮತದಾನ ಮಾಡಿದರು.  

ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಚುನಾವಣೆಯನ್ನು ಸುಗಮವಾಗಿ ನಡೆಸಲು ಮತಗಟ್ಟೆಗಳಲ್ಲಿ ಅಗತ್ಯ ವ್ಯವಸ್ಥೆ ಹಾಗೂ ಭದ್ರತೆ ಕೈಗೊಳ್ಳಲಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪ್ರಮುಖ ಪೈಪೋಟಿ ಏರ​‍್ಪಟಟಿದ್ದು, ಮತದಾರರ ತೀಪು ಯಾರ ಪರವಾಗಿರಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.  ಅ. 27ರಂದು ಮತ ಎಣಿಕೆ  ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 27ರಂದು ನಡೆಯಲಿದ್ದು, ಫಲಿತಾಂಶದತ್ತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಗಮನ ನೆಟ್ಟಿದೆ. ಮತ ಎಣಿಕೆಯ ಬಳಿಕ ಕ್ಷೇತ್ರದ ಮುಂದಿನ ಪ್ರತಿನಿಧಿ ಯಾರು ಎಂಬುದು ಸ್ಪಷ್ಟವಾಗಲಿದೆ. 


ಸುದ್ದಿ ಓದಿ