ಕಿತ್ತೂರು ಸಂಭ್ರಮಾಚರಣೆಗೆ ಅದ್ದೂರಿ ಚಾಲನೆ
ಯಮಕನಮರಡಿ 23: ಇವತ್ತು ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಸತೀಶ್ ಅಣ್ಣಾ ಜಾರಕಿಹೊಳಿ ಅವರು ವೀರನಾರಿ ರಾಣಿ ಕಿತ್ತೂರು ಚನ್ನಮ್ಮನವರ ಧೈರ್ಯ, ತ್ಯಾಗ ಮತ್ತು ನಾಡಪ್ರೇಮದ ಸ್ಮರಣಾರ್ಥ ಹಾಗೂ 202ನೇ ಕಿತ್ತೂರು ವಿಜಯೋತ್ಸವದ ಅಂಗವಾಗಿ, ಚೆನ್ನಮ್ಮನವರ ಜನ್ಮಸ್ಥಳವಾದ ನಮ್ಮ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿಯಲ್ಲಿ ಕಿತ್ತೂರು ಸಂಭ್ರಮಾಚರಣೆಗೆ ಅದ್ದೂರಿಯಾಗಿ ಚಾಲನೆ ನೀಡಿದರು. ಕಾಕತಿಯು ರಾಣಿ ಚೆನ್ನಮ್ಮನ ಇತಿಹಾಸದ ಪಾವನ ನೆಲವಾಗಿರುವ ಹಿನ್ನಲೆಯಲ್ಲಿ, ಪ್ರತಿವರ್ಷದಂತೆ ಕಿತ್ತೂರು ಉತ್ಸವದ ಸಾಂಕೇತಿಕ ಆರಂಭ ಇಲ್ಲಿ ನಡೆಯುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಬಾರಿ ಉತ್ಸವವನ್ನು ವೈಭವದಿಂದ ಆಯೋಜಿಸಲಾಗಿದೆ. ಉತ್ಸವದ ಅಂಗವಾಗಿ ಸಾಂಸ್ಕೃತಿಕ ಪ್ರದರ್ಶನಗಳು, ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾ ಕಾರ್ಯಕ್ರಮಗಳು ಹಾಗೂ ಕನ್ನಡ ನೆಲ-ಜಲ-ಸಂಸ್ಕೃತಿಯ ಹಿರಿಮೆಯನ್ನು ಬಿಂಬಿಸುವ ಹತ್ತು ಹಲವು ಕಾರ್ಯಕ್ರಮಗಳು ಜರುಗಲಿವೆ. ಈ ಸಂದರ್ಭದಲ್ಲಿ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕರಾದ ಆಸೀಫ್ ಸೇಠ್, ಗ್ರಾ.ಪಂ. ಅಧ್ಯಕ್ಷೆ ವರ್ಷಾ ಮುಚ್ಚಂಡಿಕರ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಬೆಳಗಾವಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಕತಿ ಗ್ರಾ.ಪಂ. ಸದಸ್ಯರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.