ಬೆಳಗಾವಿ

ಐಸಿಎಆರ್‌ಹಿಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ವತಿಯಿಂದ “ಹಿಂಗಾರು ಕ್ಷೇತ್ರ ಬಚಾವೋ ಅಭಿಯಾನಹಿ2026 ಕ್ಕೆ ಚಾಲನೆ

ಐಸಿಎಆರ್‌ಹಿಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ವತಿಯಿಂದ “ಹಿಂಗಾರು ಕ್ಷೇತ್ರ ಬಚಾವೋ ಅಭಿಯಾನಹಿ2026  ಕ್ಕೆ ಚಾಲನೆ
ICAR-KLE Krishi Vigyan Kendra, Mattikoppa, launches the “Hingaru Kshetra Bachavo Abhiyan 2026” (Save

ನೇಸರಗಿ 23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕೃಷಿ ಇಲಾಖೆ, ಬೆಳಗಾವಿ ಹಾಗೂ ಐಸಿಎಆರ್‌ಹಿಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ  ಇವರ ಸಹಯೋಗದಲ್ಲಿ ಜಿಲ್ಲೆಯ ರೈತರಿಗೆ ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಕುರಿತು ಜಾಗೃತಿ ಮೂಡಿಸುವುದು, ಬಿತ್ತನೆಗೆ ಯೋಗ್ಯವಾದ ಕೃಷಿ ಭೂಮಿಯನ್ನು ಸದ್ಬಳಕೆ ಮಾಡುವುದು ಹಾಗೂ ಹಿಂಗಾರು ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ದಿನಾಂಕ 22 ಅಕ್ಟೋಬರ್ 2026 ರಿಂದ 30 ನವಂಬರ್ 2026 ರವರೆಗೆ ದೇಶಾದ್ಯಂತ ನಡೆಯುವ ಹಿಂಗಾರು ಕ್ಷೇತ್ರ ಬಚಾವೋ ಅಭಿಯಾನಹಿ2026” ಕ್ಕೆ ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕ ಹೆಚ್‌. ಡಿ. ಕೋಳೇಕರ ಇವರು ಕೃಷಿ ಇಲಾಖೆಯ ಆವರಣದಲ್ಲಿ ಚಾಲನೆ ನೀಡಿದರು. ಅಭಿಯಾನದ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕ   ಹೆಚ್‌. ಡಿ. ಕೋಳೇಕರ ಇವರು, ಈ ಅಭಿಯಾನದ ಮುಖ್ಯ ಉದ್ದೇಶ ಹಿಂಗಾರು ಹಂಗಾಮಿನಲ್ಲಿ ಕೃಷಿ ಭೂಮಿ ಪಾಳು ಬೀಳದಂತೆ ತಡೆಯುವುದು, ಲಭ್ಯವಿರುವ ಭೂಮಿ, ನೀರು ಮತ್ತು ಇತರ ಕೃಷಿ ಸಂಪನ್ಮೂಲಗಳನ್ನು ಸಮರ​‍್ಕವಾಗಿ ಬಳಸಿಕೊಳ್ಳುವುದು ಹಾಗೂ ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸುವುದಾಗಿದೆ.   ಬೆಳಗಾವಿಯ ಉಪ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ ಇವರು ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ ಕೃಷಿ ಭೂಮಿಯ ಸಮರ​‍್ಕ ಬಳಕೆ, ಸಕಾಲಿಕ ಬಿತ್ತನೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳ ಅಳವಡಿಕೆ ರೈತರ ಉತ್ಪಾದನೆ ಹಾಗೂ ಆದಾಯ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿವರಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಮತ್ತು ರೈತರು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.  ಚಿಕ್ಕೋಡಿಯ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಇವರು ಮಾತನಾಡಿ, ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಸಮತೋಲಿತ ಮತ್ತು ವಿವೇಚನಾಯುಕ್ತ ರಸಗೊಬ್ಬರಗಳನ್ನು ಬಳಸುವಂತೆ ಸಲಹೆ ನೀಡಿದರು.   

ಐಸಿಎಆರ್‌ಹಿಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿಯವರು, ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಸಿಬ್ಬಂದಿ, ಜಂಟಿಯಾಗಿ ಎರಡು ತಂಡಗಳಲ್ಲಿ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಹಿಂಗಾರು ಹಂಗಾಮಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾದ ಬೆಳೆ ಪದ್ಧತಿಗಳನ್ನು ಪರಿಚಯಿಸುವುದು ಮತ್ತು ಕೃಷಿ ಕ್ಷೇತ್ರದಲ್ಲಿ ಲಭ್ಯವಿರುವ ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವ ಮಹತ್ವವನ್ನು ವಿವರಿಸಿದರು. ಈ ಅಭಿಯಾನವು ರೈತರಲ್ಲಿ ವೈಜ್ಞಾನಿಕ ಕೃಷಿಯ ಕುರಿತು ಅರಿವು ಮೂಡಿಸಿ, ಹಿಂಗಾರು ಹಂಗಾಮಿನಲ್ಲಿ ಕೃಷಿ ಭೂಮಿಯ ಸದ್ಬಳಕೆ, ಉತ್ಪಾದಕತೆಯ ಹೆಚ್ಚಳ ಮತ್ತು ಸುಸ್ಥಿರ ಕೃಷಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. 


ಸುದ್ದಿ ಓದಿ