ವಿಜಯಪುರ

ಕನಸು ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರಂಭ.

ಕನಸು ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರಂಭ.

 ಆಲಮೇಲ 23:  ತುಳಜಾಪುರ ಅಂಬಾಭವಾನಿ ಪಾದಯಾತ್ರೆಯಲ್ಲಿ ಸಾಗುವ ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ, ಕನಸು ಫೌಂಡೇಶನ್ ವತಿಯಿಂದ ಬಸವರಾಜ್ ಹೂಗಾರ್ ಅವರ ನೇತೃತ್ವದಲ್ಲಿ ಹಲಸಂಗಿ ಕ್ರಾಸ್ನ ಆರ್ಟಿಒ ಚೆಕ್ಪೋಸ್ಟ್‌ ಹತ್ತಿರ, ವಿರಾಮ್ ಹೋಟೆಲ್ ಎದುರು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವೈದ್ಯಕೀಯ ಸೇವೆಯನ್ನು ಆರಂಭಿಸಲಾಯಿತು. ಪಾದಯಾತ್ರೆಯಲ್ಲಿ ಸಾಗುವ ಭಕ್ತಾದಿಗಳಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳ ಆರೋಗ್ಯದ ಕಾಳಜಿ ವಹಿಸುವುದರ ಜೊತೆಗೆ ಮಾನವೀಯತೆ ಮತ್ತು ಸೇವಾ ಮನೋಭಾವವನ್ನು ಸಾರುವ ಉದ್ದೇಶದಿಂದ ಕನಸು ಫೌಂಡೇಶನ್ ಈ ಕಾರ್ಯಕ್ಕೆ ಮುಂದಾಗಿದೆ. 


ಸುದ್ದಿ ಓದಿ