ಬೆಳಗಾವಿ

ತಾಲ್ಲೂಕು ಮಟ್ಟಕ್ಕೂ ವ್ಯಾಪಿಸಿದ ಅನ್ನದಾತರ ಅಹೋರಾತ್ರಿ ಧರಣಿ : ದಾರಿಯಿಲ್ಲದೆ ಯಲ್ಲಮ್ಮನ ಭಕ್ತರ ಪರದಾಟ

ತಾಲ್ಲೂಕು ಮಟ್ಟಕ್ಕೂ ವ್ಯಾಪಿಸಿದ ಅನ್ನದಾತರ ಅಹೋರಾತ್ರಿ ಧರಣಿ :  ದಾರಿಯಿಲ್ಲದೆ ಯಲ್ಲಮ್ಮನ ಭಕ್ತರ ಪರದಾಟ

ಬೆಳಗಾವಿ : ಎಂಎಸ್ ಪಿ ಹಾಗೂ ಎಫ್ ಆರ್ ಪಿ ದರ ನಡುವೆ ನಿಗದಿ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ಅನ್ನದಾತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ಮುಂದೆವರೆದಿದ್ದು, ಈ ಹೋರಾಟವು ತಾಲ್ಲೂಕು ಮಟ್ಟಕ್ಕೂ ವ್ಯಾಪಿಸಿದೆ. ಅಲ್ಲದೆ ಅನ್ನದಾತರ ಹೋರಾಟದಲ್ಲಿ ಯಲ್ಲಮ್ಮನ ಭಕ್ತರು ಅರ್ಧ ದಾರಿಯಲ್ಲಿ ಸಿಕ್ಕು ಗೋಳಾಡುತ್ತಿರುವ ಘಟನೆ ಸವದತ್ತಿಯ ಮುನ್ನೋಳಿ ಬಳಿ ನಡೆದಿದೆ. 

    ದಸರಾ ಹಬ್ಬದ ನಿಯಮಿತ ಯಲ್ಲಮ್ಮನ ದೇವಿಯ ದರ್ಶನ ಹಾಗೂ ಹರಿಕೆ ತೀರಿಸಲು ಹುಕ್ಕೇರಿ ತಾಲೂಕಿನ ಸಾವಿರಾರು ಭಕ್ತರು ಸವದತ್ತಿಯ ಯಲ್ಲಮ್ಮನ ದೇವಸ್ಥಾನ ಕಡೆಗೆ ಬುಧವಾರ ಪ್ರಯಾಣ ಬೆಳಿಸಿದ್ದರು. 

    ಆದರೆ ಅನ್ನದಾತರು ಸವದತ್ತಿ ಬಳಿಯ ಮುನ್ನೊಳಿ ಹತ್ತಿರ ಸರ್ಕಲ್ ದಲ್ಲಿ ರೈತ ಮುಖಂಡ ಶೇಖರ್ ಗೋಕಾವಿ ಅವರ ನೇತೃತ್ವದಲ್ಲಿ ಬಾರಕೋಲ್ ಚಳುವಳಿ ನಡೆಸುತ್ತಿದ್ದಾರೆ. ಯಲ್ಲಮ್ಮನ ಭಕ್ತರ ಮೇಲೂ ಅನ್ನದಾತರ ಹೋರಾಟದ ಪರಿಣಾಮ ಬೀರಿದ್ದು ಯಲ್ಲಮ್ಮನ ಭಕ್ತರಿಗೆ ದಾರಿ ಇಲ್ಲದೆ ನಡು ರಸ್ತೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. 

ಸುದ್ದಿ ಓದಿ