ಬೆಳಗಾವಿ

ಕಬ್ಬು ಬೆಳೆಗಾರರ ಕಿಚ್ಚು ದುಪ್ಪಟ್ಟು: ರಾಷ್ಟ್ರೀಯ ಹೆದ್ದಾರಿ ಬಂದ್ - ರೈತರ ಆಕ್ರೋಶ

ಕಬ್ಬು ಬೆಳೆಗಾರರ ಕಿಚ್ಚು ದುಪ್ಪಟ್ಟು: ರಾಷ್ಟ್ರೀಯ ಹೆದ್ದಾರಿ ಬಂದ್ - ರೈತರ ಆಕ್ರೋಶ

  ಯಮಕನಮರಡಿ 13 :  ಕೇಂದ್ರ ಸರ್ಕಾರದ ಜೊತೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಸಮೀಪದ ಹತ್ತರಗಿ ಟೋಲ್ ಗೇಟ್ ಬಂದ್ ಮಾಡಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಬೆಳಗಾವಿ ಜಿಲ್ಲೆಯ ಹತ್ತರಗಿ ಮತ್ತು ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಸಾವಿರಾರು ರೈತರು ಜಮಾಯಿಸಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ತಡೆದು ಪ್ರತಿಭಟನೆ ನಡೆಸಿದರು. ಎತ್ತು-ಬಂಡಿಗಳನ್ನು ಟೋಲ್ ಗೇಟ್ಗೆ ಅಡ್ಡಲಾಗಿ ಕಟ್ಟಿ, ರಸ್ತೆಯಲ್ಲಿ ಮಲಗಿ, ಪೊರಕೆ ಹಿಡಿದು ಉರುಳು ಸೇವೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.  

ದೆಹಲಿ ಮಾತುಕತೆ ವಿಫಲ: ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರು, ನವದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಹ್ಲಾದ್ ಜೋಶಿ ಅವರೊಂದಿಗೆ ಕರ್ನಾಟಕದ 35 ಜನ ರೈತ ಮುಖಂಡರ ನಿಯೋಗ ನಡೆಸಿದ ಸಭೆ ವಿಫಲವಾಗಿದೆ. ಸಕ್ಕರೆಯ ಒಖಕ ಯನ್ನು 60 ರೂ.ಗೆ ಹೆಚ್ಚಳ, ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಎಥನಾಲ್ ಖರೀದಿ ಬಗ್ಗೆ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ರೈತರು ಮತ್ತೆ ಬೀದಿಗಿಳಿದಿದ್ದೇವೆ, ಎಂದರು.  ಎಚ್ಚರಿಕೆ ನೀಡಿದ ಗುರೂಜಿ: ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ರಾಜ್ಯ ಗೌರವಾಧ್ಯಕ್ಷ  ಶಶಿಕಾಂತ ಗುರೂಜಿ ಅವರು 7 ತಿಂಗಳಿಂದ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದೇವೆ. ಹುಬ್ಬಳ್ಳಿಯಲ್ಲಿ 5-6 ಲಕ್ಷ ರೈತರು ಸೇರಿದ್ದೆವು. ಇವತ್ತು ಸಂಜೆಯೊಳಗೆ ಒಳ್ಳೆಯ ನಿರ್ಧಾರ ಬರದಿದ್ದರೆ, ರಾಜ್ಯದ ಎಲ್ಲಾ ಮುಖಂಡರು ಸೇರಿ ಮುಂದಿನ ತೀವ್ರ ಹೋರಾಟದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದು ಕೇವಲ ಬೆಳಗಾವಿಗೆ ಸೀಮಿತವಲ್ಲ. ಗೋವಾ, ಮಹಾರಾಷ್ಟ್ರದಲ್ಲಿ 7 ಕಡೆ ಹೈವೇ ಬಂದ್ ಆಗಿದೆ.  ಕೃಷಿ ವೆಚ್ಚ, ರಸಗೊಬ್ಬರ, ಕೂಲಿ ವೆಚ್ಚ ಮೂರು ಪಟ್ಟು ಏರಿಕೆಯಾಗಿದ್ದರೂ ಪ್ರಸ್ತುತ ಈಖಕ ದರ ಸಾಲುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.  ಹೋರಾಟದ ಹಿನ್ನೆಲೆಯಲ್ಲಿ ಹತ್ತರಗಿ ಟೋಲ್ ಸುತ್ತ 300ಕ್ಕೂ ಹೆಚ್ಚು ಪೊಲೀಸರು ಹಾಗೂ ಡೈವರ್ಷನ್ ಪಾಯಿಂಟ್ಗಳಲ್ಲಿ 1500 ಪೊಲೀಸರನ್ನು ನಿಯೋಜಿಸಲಾಗಿದ್ದು, ಬಾಗಲಕೋಟೆ, ಹಾವೇರಿ, ಮಂಡ್ಯ, ಧಾರವಾಡ, ವಿಜಯಪುರ ಸೇರಿದಂತೆ ಹಲವೆಡೆ ಹೆದ್ದಾರಿ ಬಂದ್ ಮುಂದುವರಿದಿದೆ. 


ಸುದ್ದಿ ಓದಿ