ಬೆಳಗಾವಿ

ದಾದಬಾನಹಟ್ಟಿ ಗ್ರಾಮದಲ್ಲಿ ​ನವರಾತ್ರಿ ಉತ್ಸವ ದುರ್ಗಾ ಮಾತ ಪ್ರತಿಷ್ಠಾಪನೆ

ದಾದಬಾನಹಟ್ಟಿ ಗ್ರಾಮದಲ್ಲಿ ​ನವರಾತ್ರಿ ಉತ್ಸವ ದುರ್ಗಾ ಮಾತ ಪ್ರತಿಷ್ಠಾಪನೆ

ಯಮಕನಮರಡಿ 13 : ಸಮೀಪದ ದಾದಬಾನಹಟ್ಟಿ ಗ್ರಾಮದಲ್ಲಿ ನವರಾತ್ರಿ ಉತ್ಸವ ಹಾಗೂ ದುರ್ಗಾ ಮಾತಾ ಮೂರ್ತಿ ಪ್ರತಿಷ್ಠಾಪನೆ ಮಹಿಳೆಯರಿಂದ ಕೋಲಾಟ ಪ್ರದರ್ಶನ ಆಯೋಜಿಸಿದ್ದು ಈ ಎಲ್ಲ ಕಾರ್ಯಕ್ರಮಗಳು ಹತ್ತರಗಿ ಹರಿ ಮಂದಿರದ ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿಯವರ ದಿವ್ಯ ಸಾನಿಧ್ಯದಲ್ಲಿ ಪ್ರತಿನಿತ್ಯವೂ ಮುಂಜಾನೆ ಸಾಯಂಕಾಲ ದುರ್ಗಾ ಮಾತಾ ಪೂಜಾ ಸಮಾರಂಭ ಮಂಗಳಾರತಿ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತಿದ್ದು ಅದರಂತೆ ಗ್ರಾಮದ ಶ್ರೀ ಲಕ್ಷ್ಮಿ ದೇವಿ ಮಂದಿರದಲ್ಲಿ ಪ್ರತಿವರ್ಷದ ಪದ್ಧತಿಯಂತೆ ನವರಾತ್ರಿದೀಪಾ ಆರಾಧನೆ ಕಾರ್ಯಕ್ರಮ ಜರುಗುತ್ತಿದ್ದು ದೇವಸ್ಥಾನದ ಉಸ್ತುವಾರಿ ಕಮಿಟಿ ಸರ್ವ ಸದಸ್ಯರು ಉಪಸ್ಥಿತರಿದ್ದು ಶಿಸ್ತು ಬದ್ಧತೆಯಿಂದ ನವರಾತ್ರಿ ಉತ್ಸವವನ್ನು ಆಚರಿಸಿತ್ತಿರುವುದು ಗ್ರಾಮಕ್ಕೆ ಶೋಭಿತಂದಂತಾಗಿದೆ. 


ಸುದ್ದಿ ಓದಿ