ವಿಶ್ವ ಹಾಸ್ಪೈಸ್ ಹಾಗೂ ಪ್ಯಾಲಿಯೇಟಿವ್ ಕೇರ್ ದಿನ ಅಂಗವಾಗಿ ಜರುಗಿದ 30 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಧಾರವಾಡ ಅ.13: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕರಿಗಳ ಕಛೇರಿ, ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಪ್ಯಾಲಿಯೇಟಿವ್ ಕೇರ್ ವಿಭಾಗ, ಜಿಲ್ಲಾ ಆಸ್ಪತ್ರೆ ವತಿಯಿಂದ ವಿಶ್ವ ಹಾಸ್ಪೈಸ್ ಹಾಗೂ ಪ್ಯಾಲಿಯೇಟಿವ್ ಕೇರ್ ದಿನದ ಅಂಗವಾಗಿ ಇಂದು (ಅ.13) ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಮಹೇಶ ಚಿತ್ತರಗಿ ಹಾಗೂ ಜಿಲ್ಲಾ ಆಸ್ಪತ್ರೆಯ ಆರ್.ಎಮ್.ಓ ಡಾ. ಮಮತಾ ಪಾಟೀಲ ಅವರು ಚಾಲನೆ ನೀಡಿದರು.
ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ. ಮಹೇಶ ಚಿತ್ತರಗಿ ಅವರು ಮಾತನಾಡಿ, ವಿಶ್ವ ಹಾಸ್ಪೈಸ್ ಹಾಗೂ ಪ್ಯಾಲಿಯೇಟಿವ್ ಕೇರ್ ದಿನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆಸ್ಪತ್ರೆಯ ಎನ್.ಪಿ.ಪಿ.ಸಿ ವಿಭಾಗದ ಫಿಜಿಸಿಯನ ಡಾ. ವಿವೇಕಾನಂದ ಕಾಮತ ಅವರು ಘೋಷವಾಕ್ಯ ಮತ್ತು ಪ್ಯಾಲಿಯೇಟಿವ ಕೇರ್ ಕಾರ್ಯಕ್ರಮ ಹಾಗೂ ಎನ್.ಪಿ.ಪಿ.ಸಿ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಉಚಿತ ಆರೋಗ್ಯ ಸೇವೆಗಳು ಹಾಗೂ ವಿವಿಧ ಸೌಲಭ್ಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಸ್ವಾಮಿ, ಡಾ. ವಾಸಂತಿ ಜೀರಗಲ, ಡಾ. ಸೂರಜ್, ಡಾ. ರಿಂದಾ ನಾವಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಆರ್. ಪಾತ್ರೋಟ, ಎಸ್.ಎಸ್. ತಿವಾರಿ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್, ಎನ್.ಪಿ.ಎಚ್.ಸಿ.ಇ, ಎನ್.ಪಿ.ಪಿ.ಸಿ ಹಾಗೂ ಜಿಲ್ಲಾ ಆಸ್ಪತ್ರೆಯ ಎಲ್ಲ ಸಿಬ್ಬಂದಿಯವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್ ಆಪ್ತಸಮಾಲೋಚಕಿ ನೇತ್ರಾವತಿ ಆಸಂಗಿ ಅವರು ನಿರೂಪಿಸಿದರು.