ಸಿಂಧಗಿ

ರೈತರು ಯಾವುದೇ ಕಾಲಕ್ಕೂ ನೋವು ಉಂಟು ಮಾಡುವ ಸ್ಥಿತಿಯನ್ನು ರಾಜ್ಯ ಸರ್ಕಾರ ಉಂಟು ಮಾಡುವುದಿಲ್ಲ; ಶಾಸಕ ಅಶೋಕ ಮನಗೂಳಿ

ರೈತರು ಯಾವುದೇ ಕಾಲಕ್ಕೂ ನೋವು ಉಂಟು ಮಾಡುವ ಸ್ಥಿತಿಯನ್ನು ರಾಜ್ಯ ಸರ್ಕಾರ ಉಂಟು ಮಾಡುವುದಿಲ್ಲ; ಶಾಸಕ ಅಶೋಕ ಮನಗೂಳಿ
The state government will not create any situation that causes distress to farmers; MLA Ashok Managu

ಸಿಂದಗಿ 23 :  ರೈತರು ಯಾವುದೇ ಕಾರಣಕ್ಕೂ ಹಿಂಜರಿಯುವ ಅವಶ್ಯಕತೆ ಇಲ್ಲ ರಾಜ್ಯ ಸರ್ಕಾರ ರೈತರ ಪರವಾಗಿ ಮತ್ತು ಅಭಿವೃದ್ಧಿಯ ಪರವಾಗಿ ನಿಂತಿದೆ ಹಾನಿಗೊಳಗಾದ ರೈತರು ಯಾವುದೇ ಕಾಲಕ್ಕೂ ನೋವು ಉಂಟು ಮಾಡುವ ಸ್ಥಿತಿಯನ್ನು ರಾಜ್ಯ ಸರ್ಕಾರ ಉಂಟು ಮಾಡುವುದಿಲ್ಲ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.  ತಾಲೂಕಿನ ಸೋಂಪುರ ಗ್ರಾಮದ  ಮಹಾದೇವಿ ಶಿವಲಿಂಗಪ್ಪ ಚಳ್ಳಗಿ ಸರ್ವೇ ನಂಬರ್ 77/2 ಅವರಿಗೆ ಹೊಂದಿರುವ 5 ಎಕರೆ ಹೊಲದಲ್ಲಿ ದ್ರಾಕ್ಷಿ ತೋಟಕ್ಕೆ ಯಾರೋ ಕಿಡಿಗೇಡಿಗಳು ನೀರಿನ ಟ್ಯಾಂಕಿನಲ್ಲಿ ವಿಷ ಪೀಡಿತ ಓಷಧಿ ಹಾಕಿರುವ ಹಿನ್ನೆಲೆಯಲ್ಲಿ ದ್ರಾಕ್ಷಿ ಗಿಡ ರೋಗ ಹಿಡಿದು ತನ್ನ ಶಕ್ತಿಯನ್ನು ಕಳೆದುಕೊಂಡ ಕಾರಣದಿಂದ ಜಮೀನಿಗೆ ಭೇಟಿ ನೀಡಿ ಅವರಿಗೆ ಸೂಕ್ತ ರೀತಿಯ ಸಾಂತ್ವಾನ ಹೇಳಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿ ಮಾತನಾಡಿದರು.  ನಮ್ಮ ಭಾಗದ ರೈತರು ಯಾವುದೇ ರೀತಿಯ ಆತಂಕ ಒಳಪಡದೆ ತಮ್ಮ ಕಾರ್ಯ ಚಟುವಟಿಕೆಗಳನ್ನ ನಿರಂತರವಾಗಿ ಮಾಡಿ ಬರಗಾಲದ ನಿಮಿತ್ಯ ರೈತರು ಸಂಕಷ್ಟದಲ್ಲಿ ಇದ್ದಾರೆ ಅನ್ನುವ ನೋವು ನನಗೂ ಮತ್ತು ರಾಜ್ಯ ಸರಕಾರಕ್ಕೂ ಕೂಡ ಇದೆ ಕೂಡಲೇ ಸರ್ಕಾರಕ್ಕೆ ನಾನು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗುತ್ತೇನೆ ಎಂದರು. ಈ ಸಂದರ್ಭದಲ್ಲಿತಹಶೀಲ್ದಾರ ಕರೆಪ್ಪ ಬೆಳ್ಳಿ, ತೋಟಗಾರಿಕೆ ಅಧಿಕಾರ ಆಕಾಶ ಊಟಗಿ,ಕೃಷಿ ಅಧಿಕಾರಿಗಳು ಪ್ರಶಾಂತ್ ಸಾಣೆ, ಇನ್ಸ್ಪೆಕ್ಟರ್ ಸುನೀಲ್ ಹೊಸಮನಿ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ್ ಅತ್ತಾರ, ತಾಲೂಕು ಕೆಡಿಪಿ ಸದಸ್ಯ ಖಾದಿರ್ ಬಂಕಲಗಿ, ಅರವಿಂದ್ ಹಂಗರಗಿ, ಪ್ರವೀಣ್ ಕಂಠಿಗೊಂಡ ಗ್ಯಾರಂಟಿ ಸಮಿತಿ ಸದಸ್ಯ ಸಲೀಂ ಕಣ್ಣಿ, ಶಿವಾನಂದ ಪಟ್ಟಣಶೆಟ್ಟಿ, ಶರಣಬಸು ಪೂಜಾರಿ, ಪ್ರಶಾಂತ್ ಚಳ್ಳಗಿ, ಶ್ರೀ ಶೈಲ್ ಚಳ್ಳಗಿ, ಸಾಹೇಬಗೌಡ ಬಿರಾದಾರ, ಕಾಶೀನಾಥ್ ಜಮಾದಾರ, ರೈತ ಮುಖಂಡರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು 


ಸುದ್ದಿ ಓದಿ