ಜೀವಾಪೂರದಲ್ಲಿ ಜೋಡಿ ಕೊಲೆ ; ಬೆಚ್ವಿಬಿದ್ದ ಗ್ರಾಮಸ್ಥರು
ಯರಗಟ್ಟಿ : ಆಸ್ತಿ ವಿಚಾರವಾಗಿ ಜೋಡಿ ಕೊಲೆಯಾಗಿರುವ ಘಟನೆ ಯರಗಟ್ಟಿ ತಾಲೂಕಿನ ಜೀವಾಪೂರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿರುವದು ತಿಳಿದುಬಂದಿದೆ.
ಈ ಘಟನೆಯಲ್ಲಿ ರಮೇಶ ಹನಮಂತ ನಾಯ್ಕರ(29) ಹಾಗೂ ಬಸವ್ವ ಭೀಮಪ್ಪ ನಾಯ್ಕರ (60) ಹತ್ಯೆಯಾದ ವ್ಯಕ್ತಿಗಳಾಗಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುರಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಈ ಜೋಡಿ ಕೊಲೆಯು ಮೇಲ್ನೋಟಕೆ ಆಸ್ತಿ ವಿಚಾರವಾಗಿ ನಡೆದಿದೆ ಎಂದು ಹೇಳಲಾಗಿದ್ದು, ಹತ್ಯೆಯ ಕಹಿ ಸತ್ಯ ಪೊಲೀಸ ತನಿಖೆಯಿಂದ ಹೊರಬರಬೇಕಿದೆ.