ಕಲ್ಲೋತಿ ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ
ಸಂಬರಗಿ26 : ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಲ್ಲೊತಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ನೀರಿನ ಕೊರತೆ ಇದ್ದು, ಎರಡು ವರ್ಷಗಳಿಂದ ಶುದ್ಧ ನೀರಿನ ಘಟಕ ಮುಚ್ಚಲಾಗಿದ್ದು, ತಾಲೂಕು ಪಂಚಾಯತ್ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಂಡಿಲ್ಲ ನೀರಿನ ಸಮಸ್ಯೆಯನ್ನು ತಕ್ಷಣ ಪರಿಹರಿಸದಿದ್ದರೆ, ಆರಾಧನಾ ಸಮಿತಿಯ ನಿರ್ದೇಶಕ ಕಾಂಗ್ರೆಸ್ ಮುಖಂಡ ಬಸು ನಾಈಕ್,ಎಚ್ಚರಿಸಿದರು.
ಕಲ್ಲೊತಿ ಗ್ರಾಮದಲ್ಲಿತಮ್ಮ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ 2000 ರಿಂದ 2500 ಜನಸಂಖ್ಯೆ ಇದ್ದು, ಹೆಚ್ಚಿನ ಕುಟುಂಬಗಳು ತೋಟದ ವಸ್ತಿಯಲ್ಲಿ ವಾಸಿಸುತ್ತಿವೆ. ನೀರಿನ ಗಂಭೀರ ಸಮಸ್ಯೆ ಇದೆ. ನಾಈಕ್ ಬಡಾವಣೆಯಲ್ಲಿ ಕಳೆದ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಆಗಿದೆ ಮೇಲಾಧಿಕಾರಿ ತಿಳಿಸಿದೆ ಯಾವುದೇ ಕ್ರಮ ಇಲ್ಲ ಶುದ್ಧ ನೀರಿನ ಘಟಕ ಎರಡು ವರ್ಷಗಳಿಂದ ಮುಚ್ಚಲಾಗಿದೆ ಈ ಬಗ್ಗೆ ಗಮನ ಹರಿಸದ ಕಾರಣ ಸಮಸ್ಯೆ ಗಂಭೀರವಾಗಿದೆ.
ನದಿ ನೀರು ಪೂರೈಕೆ ಸ್ಥಗಿತ ಗೋಂಡಿದೆ ಆದ್ದರಿಂದ ಗ್ರಾಮದ ಜನರು ಮತ್ತು ಗ್ರಾಮಸ್ಥರಿಗೆ ನೀರಿಗಾಗಿ ಅಲೆದಾಡಬೇಕಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಗ್ರಾಮ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ. ನೀರನ್ನು ಸಮಸ್ಯೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ ಸಮಸ್ತ ಶೀಘ್ರದಲ್ಲಿ ಪರ್ಯಾಯಗೊಳಿಸಲೆ ವಾದರೆಪ್ರತಿಭಟನೆ ನಡೆಸಲಾಗುವುದುಎಚ್ಚರಿಸಿದರು. ಜಾನವರ ಸಂಖ್ಯೆ ಹೆಚ್ಚಿದ್ದು ಮೇವು ಸಿಗುತ್ತಿಲ್ಲ,
ಅದಕ್ಕಾಗಿ ಮೇವು ಸಂಗ್ರಹ ಕೇಂದ್ರಾ್ರರಂಭಿಸುವಂತೆ ತಾಲೂಕು ಆಡಳಿತಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಗಮನ ಹರಿಸಿಲ್ಲ ಅಥವಾ ನೀರಿನ ಟ್ಯಾಂಕರ್ ಪ್ರಾರಂಭ ಮಾಡಿದೆ ಹೋದರೆಹೋರಾಟ ಮಾಡಲಾಗುವುದುಆಡಳಿತವು ಗ್ರಾಮಕ್ಕೆ ಭೇಟಿ ನೀಡಿ ಪರೀಶೀಲನೆ ಮಾಡಿಟ್ಯಾಂಕರ್ ಅನ್ನು ತಕ್ಷಣವೇ ಪ್ರಾರಂಭಿಸಬೇಕೆಂದು ಒತ್ತಾಯಿಸಬೇಕು.ಈ ಸಮಯದಲ್ಲಿ, ರವಿ ಪಾಟೀಲ್ ಗ್ರಾಮ ಪಂಚಾಯಿತಿ ಸದಸ್ಯ, ಮನೋಹರ್ ನಾಈಕ ಪಿಕೆಪಿಎಸ್ ನಿರ್ದೇಶಕ, ಮುತ್ತಪ್ಪ ನಾಈಕ ಉಪಸ್ಥಿತರಿದ್ದರು.