ನ.28 ರಿಂದ ರುದ್ರಾಕ್ಷಿ ಮಠದಲ್ಲಿ ಅನುಭಾವ ದರ್ಶನ ಪ್ರವಚನ
ಬೆಳಗಾವಿ 26 : ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 137ನೇ ಜಯಂತಿ ಮಹೋತ್ಸವದ ಅಂಗವಾಗಿ ನ. 28 ರಿಂದ ಡಿಸೆಂಬರ್ 5 ರವರೆಗೆ ಬೆಳಗಾವಿಯ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಅನುಭಾವ ದರ್ಶನ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ.
ಅತ್ತಿವೇರಿಯ ಬಸವ ಧಾಮದ ಬಸವೇಶ್ವರಿ ಮಾತಾಜಿಯವರು ಪ್ರವಚನ ನಡೆಸಿಕೊಡಲಿದ್ದಾರೆ. ವಚನ ಕಟ್ಟುಗಳ ಮೆರವಣಿಗೆ : ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ನವಂಬರ್ 28 ರಂದು ಸಾಯಂಕಾಲ 4:00ಗೆ ಶ್ರೀನಗರ ಉಧ್ಯಾನವನದಿಂದ ವಚನ ಕಟ್ಟುಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ನಾಡಿನ ಹರ ಗುರು ಚರಮೂರ್ತಿಗಳು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.
ಬುತ್ತಿ ಜಾತ್ರೆ : ಈ ಬಾರಿಯ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವವನ್ನು ಭಕ್ತರು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದು, ಮಹೋತ್ಸವದ ಅಂಗವಾಗಿ ನ. 29 ರಿಂದ ಡಿ. 2 ರವರೆಗೆ ನಗರದ ವಿವಿಧ ಬಡಾವಣೆಗಳಿಂದ ನಾಗನೂರು ರುದ್ರಾಕ್ಷಿ ಮಠಕ್ಕೆ ಭಕ್ತ ಸಮೂಹ ವಿವಿಧ ಗುಂಪುಗಳಲ್ಲಿ ರೊಟ್ಟಿ ಬುತ್ತಿ ಮೆರವಣಿಗೆ ನಡೆಸಲಿದ್ದಾರೆ. ನ. 29 ರಂದು ಶ್ರೀನಗರ ಉಧ್ಯಾನವನದಿಂದ, ರಾಮತೀರ್ಥ ನಗರ, ಕಣಬರಗಿ, ಕೆ.ಎಚ್.ಬಿ. ಕಾಲೋನಿ, ಬಸವೇಶ್ವರ ಬಡಾವಣೆ ,ಖಾಸಬಾಗ,
ಹಿಂದವಾಡಿ,ವಡಗಾವ್, ಅನಗೋಳ ,ಶಹಾಪುರ್, ಪ್ರದೇಶಗಳಿಂದ ರೊಟ್ಟಿ ಬುತ್ತಿಯೊಂದಿಗೆ ಮಠಕ್ಕೆ ಭಕ್ತರು ಅಗಮಿಸುವರು.ನ. 30 ರಂದು ಮಹಾಂತೇಶ ನಗರ, ಶಿವಬಸವ ನಗರ, ಶ್ರೀನಗರ, ಚೆನ್ನಮ್ಮ ಸೊಸೈಟಿ, ಅಶೋಕನಗರ, ಆಂಜನೇಯ ನಗರ ಪ್ರದೇಶಗಳಿಂದ ಹಾಗೂ ಡಿ. 1 ರಂದು ಕುವೆಂಪು ನಗರ, ಕುಮಾರಸ್ವಾಮಿ ಲೇಓಟ್, ಸದಾಶಿವ ನಗರ, ಹನುಮಾನ ನಗರ, ಸಂಗಮೇಶ್ವರ ನಗರ,
ಮತ್ತು ಸಹ್ಯಾದ್ರಿನಗರ ಪ್ರದೇಶಗಳಿಂದ ಹಾಗೂಡಿ. 2 ರಂದು ವೈಭವ ನಗರ, ವಿದ್ಯಾಗಿರಿ, ಬಸವ ಕಾಲೋನಿ, ಶಾಹುನಗರ ಮತ್ತು ಅನ್ನಪೂರ್ಣವಾಡಿ ಪ್ರದೇಶಗಳಿಂದ ಭಕ್ತರು ರೊಟ್ಟಿ ಬುತ್ತಿಯೊಂದಿಗೆ ರುದ್ರಾಕ್ಷಿ ಮಠಕ್ಕೆ ಆಗಮಿಸಿ ಸಂಜೆ 6:00 ಗಂಟೆಗೆ ಜರುಗುವ ಪ್ರವಚನದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.