ಬೆಳಗಾವಿ

ರೈತ ಬಣಗಳಲ್ಲಿ ಗಲಾಟೆ : ರಣಾಂಗಣವಾದ ಸುವರ್ಣ ಸೌಧ, ಗಾಜುಗಳು ಧ್ವಂಸ

ರೈತ ಬಣಗಳಲ್ಲಿ ಗಲಾಟೆ : ರಣಾಂಗಣವಾದ ಸುವರ್ಣ ಸೌಧ, ಗಾಜುಗಳು ಧ್ವಂಸ

ಬೆಳಗಾವಿ : ಕಬ್ಬು ಬೆಳೆಗೆ ನಿಗದಿತ ಬೆಲೆ ಸೇರಿದಂತೆ ರೈತರ ಕೆಲವು ಬೇಡಿಕೆಗಳ ಈಡೇರಿಸಲು ರೈತರ ಜೊತೆಗೆ ಸಭೆ ನಡೆಸಲು ಮುಂದಾಗಿದ್ದ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್ ಅವರ ಸಭೆಗೆ ಮುನ್ನ ರೈತ ಸಂಘಟನೆಗಳಲ್ಲಿ ಎರಡು ಬಣಗಳಾಗಿ ಮಾರ್ಪಟ್ಟು, ಸುವರ್ಣ ವಿಧಾನ ಸೌಧವು ರೈತರ ಹೊಡೆದಾಟದ ರಣಾಂಗಣವಾಗಿ ಹೋಗಿದೆ. ಅಲ್ಲದೆ ಕೆಲ ರೈತರ ಆಕ್ರೋಶಕ್ಕೆ ಸುವರ್ಣ ಸೌಧದ ಗಾಜುಗಳು ಧ್ವಂಸಗೊAಡಿವೆ.
ಸೋಮವಾರ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಕಬ್ಬು ಬೆಳೆಗಾರರ ಸಭೆಗೂ ಮುನ್ನವೇ ರೈತರ ಎರಡು ಬಣಗಳ ನಡುವೆ ಗಲಾಟೆ ನಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಭೆ ಆರಂಭವಾಗುವ ಮುನ್ನವೇ ಎರಡು ಬಣಗಳ ರೈತರ ನಡುವೆ ವಾಗ್ವಾದ ತೀವ್ರಗೊಂಡು, ಸಭಾಂಗಣದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರಿಕೆ ವಹಿಸಿದ ಪೊಲೀಸರು, ಎರಡೂ ಬಣಗಳ ತಲಾ ಒಬ್ಬ ರೈತರನ್ನು ಸಭಾಂಗಣದಿAದ ಹೊರಗೆ ಕರೆದೊಯ್ದರು.
ಈ ವೇಳೆ ಪೊಲೀಸರು ರೈತರನ್ನು ಬಲವಂತವಾಗಿ ಹೊರಗೆ ಕರೆದೊಯ್ದಿದ್ದು, ಸುವರ್ಣ ವಿಧಾನಸೌಧದ ಒಳಭಾಗದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಕಬ್ಬು ಬೆಳೆಗಾರರ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳ ಕುರಿತು ಮಹತ್ವದ ಸಭೆ ನಡೆಯಬೇಕಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಕೆಲಕಾಲ ಆತಂಕಕ್ಕೆ ಕಾರಣವಾಯಿತು. ಗಲಾಟೆಯ ವಿಷಯ ಅರಿತ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಹಾಗೂ ಡಿಸಿಪಿ ನಾರಾಯಣ ಬರಮನಿ ಅವರುಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪರದಾಡಿದರು.

ಸುದ್ದಿ ಓದಿ