ಬಡಿಗವಾಡದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಗುರ್ಲಾಪೂರ 26 : ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಬಡಿಗವಾಡದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸ ಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಮುಖ್ಯೋಪಾಧ್ಯಾಯರಾದ ಬಿ ಬಿ ಸಸಾಲಟ್ಟಿ ಮಹರ್ಷಿ ವಾಲ್ಮೀಕಿಯವರು ಮನುಷ್ಯನ ಹಿಂದಿನ ಜೀವನ ಎಷ್ಟೇ ತಪ್ಪುಗಳಿಂದ ಕೂಡಿದ್ದರೂ ತನ್ನನ್ನು ತಾನು ಬದಲಾಯಿಸಿ ಕೊಳ್ಳುವ ದೃಢ ನಿರ್ಧಾರ ಅವನ ಬದುಕಿಗೆ ಹೊಸದಾಗಿ ತೋರಿಸ ಬಲ್ಲದು ಎಂದು ಹೇಳಿದರು. ಶಿಕ್ಷಕರು ಮಕ್ಕಳು ವಾಲ್ಮೀಕಿಯವರನ್ನು ಕುರಿತು ಮಾತನಾಡಿದರು. ಆರ್ ಎಸ್ ದಡ್ಡೀಕಾರ ಸ್ವಾಗತಿಸಿದರು. ಆನಂದ ಕುಮಾರ ಬಿ ಆರ್ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳಾದ ಸಿದ್ದಾ ಮ ನಲ್ಲಾ ನಟ್ಟಿ ಶಿಕ್ಷಕಿಯರಾದ ರೇಖಾ ಉಪ್ಪಾರ ಗೀತಾ ಕೊಂಕಣಿ ಕಾವೇರಿ ವಗ್ಗರ ಹಾಜರಿದ್ದರು. ಎಂ ಎಲ್ ಶಿಂತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.