ಇಂಡಿ

ವಾಲ್ಮೀಕಿ ಜೀವನ ಚರಿತ್ರೆ ಎಲ್ಲರಿಗೂ ಮಾದರಿ: ನಾಗೇಂದ್ರ ಕೊಳಶೆಟ್ಟಿ

ವಾಲ್ಮೀಕಿ ಜೀವನ ಚರಿತ್ರೆ ಎಲ್ಲರಿಗೂ ಮಾದರಿ: ನಾಗೇಂದ್ರ ಕೊಳಶೆಟ್ಟಿ


ಲೋಕದರ್ಶನ ವರದಿ 

            ಇಂಡಿ 26: ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯ ಎಂದು ಇಂಡಿ ತಹಸೀಲ್ದಾರರಾದ ನಾಗೇಂದ್ರ ಕೊಳಶೆಟ್ಟಿ ಅವರು ಹೇಳಿದರು. ಅವರು ಇಂಡಿ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ  ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿ ಜಯಂತಿಯು ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಪವಿತ್ರ ಹಾಗೂ ಮಹತ್ವದ ದಿನವಾಗಿದೆ. '

          ವಾಲ್ಮೀಕಿ ಅವರು ಮಾನವ ಕುಲಕ್ಕೆ ತನ್ನದೇ ಆದ ಕೊಡುಗೆ ನೀಡಿದ ಮಹಾನ್ ಚೇತನ. ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಕೊಡುಗೆ ವಾಲ್ಮೀಕಿಗೆ ಸಲ್ಲುತ್ತದೆ ಎಂದು ಹೇಳಿದರು. ಸುರೇಶ ನಡಗಡ್ಡಿ ಮಾತನಾಡಿವಾಲ್ಮೀಕಿ ರಾಮಾಯಣ ಪ್ರೇರಣೆಯಿಂದಾಗಿ ದೇಶದ ಅನೇಕ ಭಾಷೆಗಳಲ್ಲಿ ರಾಮಾಯಣ ಮಹಾಕಾವ್ಯ ರಚನೆಯಾಯಿತು.

                 ದೇಶ-ವಿದೇಶ ಭಾಷೆಗಳಲ್ಲಿಯೂ ರಚಿಸಲ್ಪಟ್ಟ ಮಹಾ ಗ್ರಂಥವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾದ ಪ್ರೋ ರವಿಕುಮಾರ ಅರಳಿ ಮಾತನಾಡಿಅಜ್ಞಾನ ತಾಂಡವಾಡುತ್ತಿದ್ದ ರತ್ನಾಕರ ನಿನಾದ ಕುಲದಲ್ಲಿ ಹುಟ್ಟಿ ಆದಿ ಕವಿಯಾಗಿ ಭಾನು, ಭೂಮಿ, ಪರ್ವತಗಳು, ಗ್ರಹತಾರೆ ನಕ್ಷತ್ರಗಳು, ಸಾಗರ ಸಮುದ್ರದವರೆಗೂ ರಾಮಾಯಣವು ಜನರ ಮನದಲ್ಲಿ ಮನೆ ಮಾಡುವಂತಹ ಸುಂದರವಾದ ಮಹಾಕಾವ್ಯ ಕಟ್ಟಿಕೊಟ್ಟ ಕೀರ್ತಿ ಮಹರ್ಷಿ ವಾಲ್ಮೀಕಿಯವರದ್ದು ಎಂದರು.

                ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ ಶಿಕ್ಷಣ ಸಂಯೋಜಕರಾದ ಆನಂದ ಹುಣಸಿಗಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಜೀತ ಧನಶೆಟ್ಟಿ. ಹಾಗೂ ಇಂಡಿ ಸಮಾಜ ಕಲ್ಯಾಣ ಇಲಾಖೆ ಸಾಹಯಕ ನಿರ್ದೇಶಕರಾದ ಉಮೇಶ ಲಮಾಣಿ, ಇಂಡಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಅರ್ಜುನ್ ನಾಯ್ಕೋಡಿ ಹಾಗೂ ಇಂಡಿ ತಾಲೂಕು ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಅರ್ಜುನ್ ಬೇರೆಡ ಸಂಜು ನಾಯ್ಕೋಡಿ ನಾಗು ನಾಯ್ಕೋಡಿ ದತ್ತು ನಾಯ್ಕೋಡಿ ಗಂಗಾಧರ ನಾಯ್ಕೋಡಿ ವಿಠಲ್ ನಾಯ್ಕೋಡಿ ರಾಘವೇಂದ್ರ ಜಮಾದಾರ ಪ್ರಕಾಶ್ ಸಣ್ಣಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ