ಬೆಳಗಾವಿ

ಎನ್ ಡಬ್ಲ್ಯೂ ಕೆಎಸ್ ಆರ್ ಟಿಸಿ ಇನ್ನು ಮುಂದೆ ಚನ್ನಮ್ಮ ಸಾರಿಗೆ ಸಂಸ್ಥೆ ನಾಮಕರಣ : ಸಿಎಂ ಘೋಷಣೆ

ಎನ್ ಡಬ್ಲ್ಯೂ ಕೆಎಸ್ ಆರ್ ಟಿಸಿ ಇನ್ನು ಮುಂದೆ ಚನ್ನಮ್ಮ ಸಾರಿಗೆ ಸಂಸ್ಥೆ ನಾಮಕರಣ : ಸಿಎಂ ಘೋಷಣೆ

 ಕಿತ್ತೂರು ಅಭಿವೃದ್ಧಿಗೆ 40 ಕೋಟಿ ಮಂಜೂರಾತಿಗೆ ಬಜೆಟ್ ನಲ್ಲಿ ಪ್ರಸ್ತಾಪ 


ಬೆಳಗಾವಿ : ಎನ್ ಡಬ್ಲೂ ಕೆಎಸ್ ಆರ್ ಟಿಸಿಗೆ (ರಾಜ್ಯ ಸಾರಿಗೆ ಸಂಸ್ಥೆಗೆ) ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂಬ ನಾಮಕರಣ ಮಾಡಲಾಗುವದು. ಅಲ್ಲದೆ ಕಿತ್ತೂರು ಅಭಿವೃದ್ಧಿಗಾಗಿ 40 ಕೋಟಿ ಬೇಡಿಕೆಯನ್ನು  ಶಾಸಕ ಬಾಬಾಸಾಹೇಬ ಪಾಟೀಲ ಇಟ್ಟಿದ್ದಾರೆ. ಅದರಂತೆ ಮುಂದಿನ ಬಜೇಟ್ ನಲ್ಲಿ 40 ಕೋಟಿ ಮಂಜೂರಿಗಾಗಿ ಈ ವಿಷಯವನ್ನು ಇಡುವದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದರು. 

   ಕಿತ್ತೂರಿನ ಕೋಟೆ ಆವರಣದಲ್ಲಿ ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಕಿತ್ತೂರು ಉತ್ಸವ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, 

ಕಿತ್ತೂರು ಒಂದು ಇತಿಹಾಸ ಪಡೆದುಕೊಂಡಿದೆ. ಚನ್ನಮ್ಮ ಓರ್ವ ದಿಟ್ಟ ಹೋರಾಟಗಾರ್ತಿ. ಕಿತ್ತೂರಿನ ಈ ನೆಲ ಚನ್ನಮ್ನನ ಇತಿಹಾಸ ಸಾರುತ್ತದೆ. ಇದು ಇಂದಿನ ಪೀಳಿಗೆ ಸ್ವಾಭಿಮಾನದ ಸಂದೇಶ. ನಾಡಿನ ಹೆಮ್ಮೆಯ ಸಂಕೇತ. ಚನಮ್ಮನ ತ್ಯಾಗದ ನೆನಪು ಅಜರಾಮರವಾಗಿದೆ. 

ನಾಡಿನ ಸಂಸ್ಕೃತಿಯ ಕೀರ್ತಿ ಇಲ್ಲಿ ಕಾಣುತ್ತಿದೆ. ಇಂದಿನ ಪ್ರಗತಿ ನಾಳಿನ ಪೀಳಿಗೆಗೆ ನೀಡುವದಾಗಬೇಕು. 

ಈ ಕ್ಷೇತ್ರದ ಶಾಸಕರು ನಾನು‌ ಇಲ್ಲಿ ಎನಾದರು ಸಾಕ್ಷಿಗುಡ್ಡೆ ಮಾಡಲು ಕೇಳಿದ್ದಾರೆ. ಅದು ಪ್ರವಾಸಿ ಕೇಂದ್ರ ಮಾಡಲು ಮನವಿ ಮಾಡಿದ್ದಾರೆ. ಅದಕ್ಕೆ ಸರಕಾರ ಬದ್ದವಾಗಿದೆ ಎಂದರು. ಕಿತ್ತೂರಿಗೆ ನಾನು ಏನಾದರು‌ ಕೊಡುಗೆ ಕೊಡುವ ಆಸೆ ಇದೆ ಎಂದರು. ಮೊದಲ ಬಾರಿ ಕಿತ್ತೂರಿನ ಸ್ವಾಭಿಮಾನದ ನೆಲಕ್ಕೆ ನಾಡಿನ ಸೇವಕನಾಗಿ ಇಲ್ಲಿ ಬಂದಿದ್ದೇನೆ. 

ಕಿತ್ತೂರು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಭೂಮಿಯಾಗಿ ಉಳಿದಿದೆ. ಈ ಸರಕಾರ ನಿಮ್ಮ ಜೊತೆಗೆ ನಿಲ್ಲುತ್ತದೆ. ಚನ್ನಮ್ಮನ ನಿಮ್ಮೇಲ್ಲರ ಬದುಕಿಗೆ ಮಾದರಿಯಾಗಿದೆ. ಮಹಿಳೆರುವ ಉದ್ಯಮಿಯಾಗಿ ಬೆಳೆಬೇಕು ಎಂದರು. 

  ತಮ್ಮ ನೇತೃತ್ವದ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಯೋಜನೆಗಳ ಜಾರಿಗೆ ತರುವದರ ಜೊತೆಗೆ ಬಡವರ ಹಿತ ಕಾಪಾಡುವ ಕೆಲಸ ಮಾಡುವದು, ಜನರ ಕಲ್ಯಾಣ ಕೆಲಸ ಮಾಡುತ್ತಿದ್ದೇವೆ ಎಂದರು. 

  ಸಚಿವ ರುದ್ರಪ್ಪ ಲಮಾಣಿ ಅವರು‌ ಮಾತನಾಡಿ, ಪ್ರಥಮ ಬಾರಿ ಈ ಉತ್ಸವ ದಲ್ಲಿ ಭಾಗಿಯಾಗಲು ಹರ್ಷವಾಗಿದೆ. ಕಿತ್ತೂರು ಚನಮ್ಮನ ಹೆಸರು ದೇಶದಲ್ಲಿ ಹೆಸರುವಾಗಿಸಲು ಸ್ವಾತಂತ್ರ್ಯದಲ್ಲಿ ಹೋರಾಡಿದ ಚನ್ನಮ್ಮ ಸ್ವಾಭಿಮಾನ ಅಭಿಮಾನ ಕೊಂಡಾಡಿದರು.

ಪ್ರಾಸ್ತಾವಿಕವಾಗಿ ಶಾಸಕ ಬಾಬಾಸಾಹೇಬ ಪಾಟೀಲ ಅವರು ಮಾತನಾಡುತ್ತ, ಸ್ವಾಭಿಮಾನ ಇದ್ದಿದ್ದರಿಂದ ಹೆಣ್ಣುಮಗಳು ಆಂಗ್ಲರ ವಿರುದ್ಧ ಹೋರಾಡಿದ ಸವಿ ನೆನಪು ಇದಾಗಿದೆ. ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚಿದ ವೀರ‌ಮಹಿಳೆ ಆಗಿದ್ದಾರೆ. ಇತಿಹಾಸ ಸಾರಲು ಪಠ್ಯಪುಸ್ತಕ ದಲ್ಲಿ ಚನ್ನಮ್ಮನ ಇತಿಹಾಸ ಸೇರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದರು. ಕಿತ್ತೂರಿನಲ್ಲಿ ಇತಿಹಾಸ ಉಳಿಸಲು ಹೊಸ ಪೀಳಿಗಾಗಿ ಯೋಜನೆ ರೂಪಿಸಿದ್ದು, ಕಿತ್ತೂರಿನಲ್ಲಿ ಚನ್ನಮ್ಮ ಫ್ರೀಡಂ ಪಾರ್ಕ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿದರು. 

  ಸಾಹಿತಿ ಸವೀತಾ ಬನ್ನಾಡಿ ಅವರು ಮಾತನಾಡಿ, ಕಿತ್ತೂರು ಸಂಸ್ಥಾನದ ವನ್ನು‌ ಕಾಪಾಡಲು ದತ್ತು ಪುತ್ರನನ್ನು ಪಡೆದು ಹೋರಾಡಿದ ಧೀರೆಯಾಗಿದ್ದಾರೆ ಚನ್ನಮ್ಮ. ಶರಣರಂತೆ ಚನ್ನಮ್ಮನಂತೆ ಮಹಿಳೆಯರ ನ್ನು ಬೆಳೆಸುವಂತೆ ಕರೆ ನೀಡಿದರು.

ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳು, ಮಡಿವಾಳ ರಾಜಯೋಗೀಂದ್ರ ಶ್ರೀಗಳು, ನಿಚ್ಚನಿಕೆಯ ಮಡಿವಾಳೇಶ್ವರ ಮಠದ ಶ್ರೀಗಳು, ಪಾಲಾಕ್ಷಾ ಡಾ. ಶಿವಯೋಗಿಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಬಾಬಾಸಾಹೇಬ ಪಾಟೀಲ ವಹಿಸಿದ್ದರು.  

  ಈ ಸಂದರ್ಭದಲ್ಲಿ ಸಚಿವರಾದ ರುದ್ರಪ್ಪ ಲಮಾಣಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಲಕ್ಷ್ಮಿ ಹೆಬ್ಬಾಳಕರ್, ರಾಜು ಸೇಠ್, ಅಶೋಕ ಪಟ್ಟಣ, ವಿಶ್ವಾಸ್ ವೈದ್ಯ, ಎನ. ಎಚ್ ಕೋಣರೆಡ್ಡಿ, ಚನ್ನರಾಜ್ ಹಟ್ಟಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್, ಎಸ್ ಪಿ ರಾಮರಾಜನ್, ಜಿಪಂ ಸಿಇಓ ರಾಹುಲ್ ಶಿಂಧೆ, ಕನ್ನಡ ಸಂಸ್ಕೃತಿ ಇಲಾಖೆಯ ವಿದ್ಯಾವತಿ ಭಜಂತ್ರಿ,  ಮುಖಂಡರಾದ ವಿನಯ ನಾವಲಗಟ್ಟಿ, ಲಕ್ಷ್ಮಣ ಚಿಂಗಳೆ, ಮೊಹನ‌ ಲಿಂಬೇಕಾಯಿ, ಅಡಿವೇಶ ಇಟಗಿ, ಜೈಸಿದ್ದರಾಮ‌ ಮಾನೆ,  ಭರಮನ್ನ ಉಪ್ಪಾರ, ಸಾಹಿತಿ ಸವೀತಾ ಬನ್ನಾಡಿ, ತಹಶಿಲ್ದಾರ ಮಲ್ಲಿಕಾರ್ಜುನ ಹೆಗ್ಗನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ  ಸಂತೋಷ ಹಾನಗಲ್ ಅವರು ಸ್ವಾಗತಿಸಿದರು. 


ಸುದ್ದಿ ಓದಿ