ತಾಳಿಕೋಟಿ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜುಗೌಡ ಚಾಲನೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜುಗೌಡ ಚಾಲನೆ



ತಾಳಿಕೋಟಿ 25 : ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕು.ಸಾಲವಾಡಗಿ ಅವರು ಬಿ. ಸಾಲವಾಡಗಿ ಜಿ.ಪಂ.ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸುಮಾರು 1.80 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಅವರು ರವಿವಾರ ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಬಿಳೇಭಾವಿ ಗ್ರಾಮದಲ್ಲಿ ರೂ.1.20 ಕೋಟಿ ಮೊತ್ತದ ಸಿಸಿ ರಸ್ತೆ, ಬಿ. ಸಾಲವಾಡಗಿ ಗ್ರಾಮದಲ್ಲಿ ರೂ.20 ಲಕ್ಷ ಮೊತ್ತದ ಡಾ.ಅಂಬೇಡ್ಕರ್ ಭವನ,

ಬಿ.ಸಾಲವಾಡಗಿ ತಾಂಡಾದಲ್ಲಿ ರೂ.5 ಮೊತ್ತದ ಸೇವಾಲಾಲ್ ದೇವಸ್ಥಾನದ ಹತ್ತಿರ ಸಮುದಾಯ ಭವನ, ಬಂಡೆಪ್ಪನಹಳ್ಳಿ ಗ್ರಾಮದಲ್ಲಿ ರೂ. 25 ಲಕ್ಷ ಮೊತ್ತದ ಸಿಸಿ ರಸ್ತೆ ಹಾಗೂ ಎಲ್ಲಮ್ಮನ ಕೊಳ್ಳದಲ್ಲಿ ರೂ.10 ಲಕ್ಷ ಮೊತ್ತದ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದರು. ನಂತರ ಅವರು ಬಿ. ಸಾಲವಾಡಗಿ ಗ್ರಾಮದ ಸಂತ ಸೇವಾಲಾಲ್ ಸಮಾಜದ ವತಿಯಿಂದ ತಾಂಡಾದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸಮಾಜದ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರ ಸಹಕಾರವನ್ನು ಕೋರಿದರು.

ಜೆಡಿಎಸ್ ತಾಲೂಕ ಅಧ್ಯಕ್ಷ ಮಡುಸೌಕಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ರಾಜುಗೌಡ ಕೋಳೂರ, ಪ್ರಭುಗೌಡ ನಾಡಗೌಡ(ಶಳ್ಳಗಿ), ಶ್ರೀಕಾಂತಗೌಡ ದೊಡ್ಡಮನಿ, ನಾನಾಗೌಡ ಅನಂತರೆಡ್ಡಿ, ಸಣ್ಣ ಪೂಜಾರಿ ಮುತ್ಯಾ, ರಾಜುಗೌಡ ಯಾಳಗಿ, ಕಾಡಪ್ಪ ಪೂಜಾರಿ, ಮುತ್ತುಗೌಡ ಅಸ್ಕಿ, ಸಾಹೇಬಗೌಡ ಅನಂತರೆಡ್ಡಿ, ಜಗದೀಶ ದೊಡ್ಡಪೂಜಾರಿ, ನಿಂಗಣ್ಣ ಕಲಬುರ್ಗಿ, ಜಗನ್ನಾಥ ಮಸರಕಲ್ಲ, ಬಸವರಾಜ ಅರಸನಾಳ, ಮಲ್ಲಣ್ಣ ಕೆಸರಟ್ಟಿ, ಶಾಂತಪ್ಪ ಇಣಚಗಲ್, ಬಾಗಪ್ಪ ಬರ್ದೇನಾಳ, ಸೇವಾಲಾಲ್ ಸಮಾಜದ ಅಧ್ಯಕ್ಷ ಬಾಸು ಜಾಧವ, ರಮೇಶ ಚೌವಾಣ, ಹಣಮಂತ ರಾಠೋಡ, ಬಾಬು ಚೌಹಾಣ, ಮೋಹನ ರಾಥೋಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ