ತಾಳಿಕೋಟಿ

ತಾಳಿಕೋಟೆಯಲ್ಲಿ ಚೆನ್ನಮ್ಮ ಜಯಂತಿ ಸಡಗರ

ತಾಳಿಕೋಟೆಯಲ್ಲಿ ಚೆನ್ನಮ್ಮ ಜಯಂತಿ ಸಡಗರ

ತಾಳಿಕೋಟಿ  24: ಪಟ್ಟಣದ ಕನ್ನಡ ಪ್ರಾಥಮಿಕ ಶಾಲೆ ಸಭಾಭವನ, ದೇವರ ಹಿಪ್ಪರಗಿ ರಸ್ತೆಯಲ್ಲಿರುವ ರಾಣಿ ಚೆನ್ನಮ್ಮ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಪಂಚಮಸಾಲಿ ಸಮಾಜದ ಸಂಯುಕ್ತ ಆಶ್ರಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಜಯಂತಿಯನ್ನು ಅತ್ಯಂತ ಸಡಗರ ಹಾಗೂ ಅರ್ಥಪೂರ್ಣವಾಗಿ ಶುಕ್ರವಾರ ಆಚರಿಸಲಾಯಿತು. ಕನ್ನಡ ಪ್ರಾಥಮಿಕ ಶಾಲೆ ಸಭಾ ಭವನದಲ್ಲಿ ತಹಸಿಲ್ದಾರ್ ಎಂ.ಎಸ್‌.ಅರಕೇರಿ ಅವರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪ ನಮನ ಸಲ್ಲಿಸಿ ತಾಲೂಕಿನ ಜನತೆಗೆ ಕಿತ್ತೂರು ವೀರರಾಣಿ ಚೆನ್ನಮ್ಮ ಜಯಂತಿ ಶುಭಾಶಯಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಮುದ್ದೇಬಿಹಾಳ ಕ್ಷೇತ್ರ ಸಮನ್ವಯ ಅಧಿಕಾರಿ ಆರ್‌. ಬಿ.ದಮ್ಮೂರಮಠ ಹಾಗೂ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪರಗಿ ಚೆನ್ನಮ್ಮಳ ಜೀವನ ಸಂದೇಶದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಪ್ರಮುಖರಾದ ಬಾಪುಗೌಡ ಸಂಗನಗೌಡ ಪಾಟೀಲ, ಡಾ.ವಿಜಯಕುಮಾರ ಕಾರ್ಚಿ, ಕಾಶಿನಾಥ ಮುರಾಳ, ಡಾ.ಶ್ರೀಶೈಲ ಹುಕ್ಕೇರಿ, ವೀರೇಶಗೌಡ ಬಾಗೇವಾಡಿ, ಜಗದೀಶ ಬಿಳೇಭಾವಿ,ಕುಮಾರಗೌಡ ಪಾಟೀಲ, ದ್ಯಾಮನಗೌಡ ಪಾಟೀಲ, ಅಪ್ಪು ಪಾಟೀಲ, ಅಶೋಕ ಚಿನಗುಡಿ, ಮುತ್ತು ಕಶಟ್ಟಿ, ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ