ಸೌಂದತ್ತಿ

ವಿರೂಪಾಕ್ಷ ಮಾಮನಿ ಶೀಘ್ರ ಆರೋಗ್ಯ ಚೇತರಿಕೆಗಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಸಂಕಲ್ಪ ಪಾದಯಾತ್ರೆ ಮತ್ತು ವಿಶೇಷ ಪೂಜೆ

ವಿರೂಪಾಕ್ಷ ಮಾಮನಿ ಶೀಘ್ರ ಆರೋಗ್ಯ ಚೇತರಿಕೆಗಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಸಂಕಲ್ಪ ಪಾದಯಾತ್ರೆ ಮತ್ತು ವಿಶೇಷ ಪೂಜೆ
A *sankalpa* *padayatra* (vow-based pilgrimage on foot) and special *puja* offered to Goddess Sri Re

ಸವದತ್ತಿ  24: ಸರಳತೆ, ಸಜ್ಜನಿಕೆ ಹಾಗೂ ಜನಪರ ಕಾಳಜಿಯ ಮೂಲಕ ಜನಮಾನಸದಲ್ಲಿ ಅಪಾರ ಪ್ರೀತಿ ಮತ್ತು ವಿಶ್ವಾಸ ಗಳಿಸಿರುವ ಬಿಜೆಪಿ ಸವದತ್ತಿ ಮಂಡಲದ ಅಧ್ಯಕ್ಷ ವಿರೂಪಾಕ್ಷ ಮಾಮನಿ ಅವರು ಇತ್ತೀಚೆಗೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದು, ಅವರು ಶೀಘ್ರವಾಗಿ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಬಿಜೆಪಿ ಮುಖಂಡ ಸಂಜೀವಕುಮಾರ ನವಲಗುಂದ ಆಶಿಸಿದರು.ಪಕ್ಷದ ಹಿರಿಯರು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದ ವತಿಯಿಂದ ಸವದತ್ತಿಯಲ್ಲಿ ಸಂಕಲ್ಪ ಪಾದಯಾತ್ರೆ ಕೈಗೊಂಡು, ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.ಇಲ್ಲಿನ ಕೆಂಚಲಾರಕೊಪ್ಪದ ಹನುಮಂತ ದೇವಸ್ಥಾನದಿಂದ ಆರಂಭವಾದ ಈ ಸಂಕಲ್ಪ ಪಾದಯಾತ್ರೆಯು, ಮುಖಂಡರ ಭಾವಚಿತ್ರವನ್ನು ಹಿಡಿದು ಕೊತ್ತಲ ಕೆರೆಮ್ಮದೇವಿ ಹಾಗೂ ಜೊಗಲಭಾವಿ ಸತ್ಯಮ್ಮ ದೇವಿಯ ದರ್ಶನ ಪಡೆಯಿತು. 

 ಬಳಿಕ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನಕ್ಕೆ ತಲುಪಿ, ನಾಯಕರು ಸಂಪೂರ್ಣ ಆರೋಗ್ಯವಂತರಾಗಿ ಮರಳಲಿ ಎಂದು ಭಕ್ತಿಪೂರ್ವಕವಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಂಜೀವಕುಮಾರ ನವಲಗುಂದ ಮಾತನಾಡಿ, ನಮ್ಮ ನಾಯಕರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ, ಮತ್ತೆ ನಮ್ಮೆಲ್ಲರ ನಡುವೆ ಬಂದು ಜನಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂಬುದೇ ನಮ್ಮೆಲ್ಲರ ಹೃದಯದಾಳದ ಹಾರೈಕೆ. ನಾಯಕರೆಂದರೆ ಕೇವಲ ಒಂದು ಸ್ಥಾನವಲ್ಲ, ಸಾವಿರಾರು ಹೃದಯಗಳ ಪ್ರೀತಿ ಮತ್ತು ವಿಶ್ವಾಸದ ಬಂಧ. ನಮ್ಮ ಪ್ರೀತಿಯ ನಾಯಕರು ಮತ್ತೆ ಮೊದಲಿನಂತೆ ಚೈತನ್ಯದಿಂದ ಜನಸೇವೆಗೆ ಮರಳುವ ದಿನಕ್ಕಾಗಿ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ. 

 ತಾಯಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಕೃಪಾಕಟಾಕ್ಷ ಸದಾ ನಮ್ಮ ನಾಯಕನ ಮೇಲಿರಲಿ, ಅವರಿಗೆ ಉತ್ತಮ ಆರೋಗ್ಯ ಮತ್ತು ಶೀಘ್ರ ಗುಣಮುಖತೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.ಈ ಪಾದಯಾತ್ರೆ ಸಂದರ್ಭದಲ್ಲಿ ರಾಜಶೇಖರ ಕಾರದಗಿ, ಡಾ. ನಯನಾ ಭಸ್ಮೆ, ಜಗದೀಶ್ ಕೌಜಗೇರಿ, ಬಸವರಾಜ ಕಾರದಗಿ, ಡಾ. ಹೇಮಂತ್ ಭಸ್ಮೆ, ಜಗದೀಶ್ ಶಿಂತ್ರಿ, ಅರ್ಜುನ ಅಮೂಗಿಮಠ, ಮಲ್ಲಿಕಾರ್ಜುನ ಬೀಳಗಿ, ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ