ಸೌಂದತ್ತಿ

ಬ್ರಿಜ್ ರಸ್ತೆಯಲ್ಲಿ ಅಪಾಯಕಾರಿ ತಗ್ಗು: ಕೂಡಲೇ ದುರಸ್ತಿಪಡಿಸಲು ಸಾರ್ವಜನಿಕರ ಆಗ್ರಹ

ಬ್ರಿಜ್ ರಸ್ತೆಯಲ್ಲಿ ಅಪಾಯಕಾರಿ ತಗ್ಗು: ಕೂಡಲೇ ದುರಸ್ತಿಪಡಿಸಲು ಸಾರ್ವಜನಿಕರ ಆಗ್ರಹ

ಸವದತ್ತಿ 13 : ತಾಲೂಕಿನ ಇನಾಂಹೊಂಗಲ ಗ್ರಾಮದ ಬಳಿಯ ಬ್ರಿಜ್ ರಸ್ತೆಯಲ್ಲಿ ದೊಡ್ಡದಾದ ತಗ್ಗು-ಗುಂಡಿಗಳು ಬಿದ್ದಿದ್ದು, ಸವದತ್ತಿಯಿಂದ ಧಾರವಾಡ ಕಡೆಗೆ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ಪ್ರತಿದಿನ ಪ್ರಾಣಭಯದಿಂದ ಓಡಾಡುವಂತಾಗಿದೆ.ಸವದತ್ತಿ-ಧಾರವಾಡ ಪ್ರಮುಖ ಮಾರ್ಗವಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಲಘು ಹಾಗೂ ಭಾರಿ ವಾಹನಗಳು ಸಂಚರಿಸುತ್ತವೆ. ಆದರೆ ಇನಾಂಹೊಂಗಲ ಬ್ರಿಜ್ ಬಳಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ದೊಡ್ಡ ಗಾತ್ರದ ಗುಂಡಿಗಳು ಸೃಷ್ಟಿಯಾಗಿವೆ. ನವರಾತ್ರಿ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಯಲ್ಲಮ್ಮದೇವಿಯ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಹಾಗೂ ವಾಹನಗಳು ಇದೇ ಮಾರ್ಗವಾಗಿ ಆಗಮಿಸಬೇಕಿದೆ. ಅಪರಿಚಿತ ಅಥವಾ ಹೊಸದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ರಾತ್ರಿ ವೇಳೆ ಅಥವಾ ಮಳೆಯ ಸಮಯದಲ್ಲಿ ಈ ತಗ್ಗುಗಳನ್ನು ಗಮನಿಸದೆ ಅಪಾಯಕ್ಕೆ ಸಿಲುಕುವ ಸಂಭವ ಹೆಚ್ಚಿದೆ.ಸಾವಿರಾರು ದ್ವಿಚಕ್ರ ವಾಹನ ಸವಾರರು ಮತ್ತು ಆಟೋರಿಕ್ಷಾಗಳು ಇಲ್ಲಿ ಅಪಾಯಾತ್ಮಕವಾಗಿ ಜಾರುತ್ತಿದ್ದು, ಸಣ್ಣಪುಟ್ಟ ಅಪಘಾತಗಳು ನಿತ್ಯದ ಕತೆಯಾಗಿವೆ. ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು, ಕೂಡಲೇ ಎಚ್ಚೆತ್ತುಕೊಂಡು ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಇನಾಂಹೊಂಗಲ ಗ್ರಾಮಸ್ಥರು ಹಾಗೂ ಪ್ರಯಾಣಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ. 


ಸುದ್ದಿ ಓದಿ