ಬೆಳಗಾವಿ

ಬೆಳಗಾವಿಯಲ್ಲಿ ಕನ್ನಡ ಭಾಷಣದೊಂದಿಗೆ ಭಾಷಾ ಬಾಂಧವ್ಯ ಬೇಸೆದ ಮಹಾ ಸಿಎಂ ಫಡ್ನವಿಸ್

ಬೆಳಗಾವಿಯಲ್ಲಿ ಕನ್ನಡ ಭಾಷಣದೊಂದಿಗೆ ಭಾಷಾ ಬಾಂಧವ್ಯ ಬೇಸೆದ ಮಹಾ ಸಿಎಂ ಫಡ್ನವಿಸ್

ಬೆಳಗಾವಿ : “ಮರಾಠಿ ಮತ್ತು ಕನ್ನಡ ಭಾಷೆಗಳು ಸಹೋದರಯರು, ಮಹಾರಾಷ್ಟ್ರ ಮತ್ತು ಕರ್ನಾಟಕ ಸಹೋದರ ಪಡೋಶಿ ರಾಜ್ಯಗಳು, ನಮ್ಮಿಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ಸಂಪೂರ್ಣ ಗೌರವ ಇದೆ.” ಇನ್ನು ನನಗೆ ಹೆಚ್ವಿಗೆ ಕನ್ನಡ ಬರುವದಿಲ್ಲ ಎಂದು ಕನ್ನಡದಲ್ಲಿ ಮಾತನಾಡುವ ಮೂಲಕ ಬೆಳಗಾವಿಯ ನೆಲದಲ್ಲಿ ನಿಂತು ಕನ್ನಡದಲ್ಲಿಯೇ ಭಾಷಣ ಆರಂಭಿಸಿ ಕನ್ನಡದ ಪ್ರೇಮ ಮೆರೆದಿರುವ ಮಹಾರಾಷ್ಟç ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಕನ್ನಡದ ಮೇಲಿನ ತಮ್ಮ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಿದರು. ಅವರ ಈ ನಡೆ ಕನ್ನಡಿಗರ ಗಮನ ಸೆಳೆದಿದ್ದು, ಭಾಷಾ ಸೌಹಾರ್ದತೆ ಮತ್ತು ಉಭಯ ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಯಿತು. ಅಲ್ಲದೆ ಸದಾ ಭಾಷಾ ವಿಷಯವನ್ನು ಕೆದಕಿ ಗಡಿ ಕ್ಯಾತೆ ತೆಗೆಯುತ್ತಿದ್ದ ಎಮ್‌ಇ ಎಸ್ ಪುಂಡರಿಗೆ ನೀತಿ ಪಾಠ ಭೋಧಿಸಿದ್ದಾರೆ.  

ನಗರದ ಧರ್ಮನಾಥ ಭವನದಲ್ಲಿ ಬಿಜೆಪಿ ಪ್ರಜಾಪ್ರಭುತ್ವ ಉಳಿಸಿ ಸಮಾವೇಶದಲ್ಲಿ ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದ ಫಡ್ನವಿಸ್, ಕನ್ನಡ ಮತ್ತು ಮರಾಠಿ ಭಾಷೆಗಳು ಸಹೋದರಿಯರಿದ್ದಂತೆ. ಕರ್ನಾಟಕ ಮತ್ತು ಮಹಾರಾಷ್ಟöç ನೆರೆಯ ಸಹೋದರ ರಾಜ್ಯಗಳಾಗಿದ್ದು, ಎರಡೂ ರಾಜ್ಯಗಳ ಜನರ ನಡುವೆ ಪರಸ್ಪರ ಗೌರವ ಮತ್ತು ಸಾಮರಸ್ಯ ಇರಬೇಕು ಎಂದು ಹೇಳಿದರು. ಬೆಳಗಾವಿಯ ನೆಲದಲ್ಲಿ ನಿಂತು ಭಾಷಾ ಸಾಮರಸ್ಯದ ಸಂದೇಶ ನೀಡಿದ ಅವರು, ಕನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು. ಎರಡೂ ಭಾಷೆಗಳ ಸಂಸ್ಕöÈತಿ, ಪರಂಪರೆ ಹಾಗೂ ಜನರ ಭಾವನೆಗಳಿಗೆ ಗೌರವ ನೀಡುವುದು ಅತ್ಯಂತ ಮುಖ್ಯ ಎಂದರು. 

ಇದೇ ವೇಳೆ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಫಡ್ನವಿಸ್, ಭಾರತದಲ್ಲಿ ದೊಡ್ಡ ಮಟ್ಟದ ನ್ಯಾರೇಟಿವ್ ಯುದ್ಧ ನಡೆಯುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್, ರಾಹುಲ್ ಗಾಂಧಿ ಸೇರಿದಂತೆ ಕೆಲವು ರಾಜಕೀಯ ಶಕ್ತಿಗಳು ಸಂಘಟಿತವಾಗಿ ದೇಶದ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿವೆ. ಇಂತಹ ವ್ಯವಸ್ಥಿತ ಪ್ರಚಾರವನ್ನು ತಡೆಯುವ ಅಗತ್ಯವಿದೆ ಎಂದು ಕಾಂಗ್ರೆಸ್ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

ದೇಶದಲ್ಲಿ ರಾಜಕೀಯ ಅಧಿಕಾರ ಮತ್ತು ಸರ್ಕಾರಗಳು ಬದಲಾಗುವುದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆ. ಆದರೆ ಬಾಂಗ್ಲಾದೇಶ, ನೇಪಾಳ ಮತ್ತು ಪಾಕಿಸ್ತಾನದ ಮಾದರಿಯಲ್ಲಿ ಭಾರತದಲ್ಲಿಯೂ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂಬ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು. ಸ್ಥಳೀಯ ರಾಜಕೀಯ ನಾಯಕರು, ಸಂಘಟನೆಗಳು ಹಾಗೂ ವಿವಿಧ ಶಕ್ತಿಗಳನ್ನು ಬಳಸಿಕೊಂಡು ದೇಶದಲ್ಲಿ ಅಸ್ಥಿರತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನೂ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು. 

ರಾಹುಲ್ ಗಾಂಧಿ ಪ್ರತಿದಿನ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಫಡ್ನವಿಸ್, ಒಂದು ಸುಳ್ಳನ್ನು ನಿರಂತರವಾಗಿ ಹೇಳುತ್ತಾ ಹೋದರೆ ಅದನ್ನೇ ಸತ್ಯವೆಂದು ಜನರು ನಂಬುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಉದ್ದೇಶದಿಂದ ಇಂತಹ ಪ್ರಚಾರ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಭಾರತ ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟöçವಾಗಿ ಹೊರಹೊಮ್ಮಿದೆ. ಏಷ್ಯಾ ಹಾಗೂ ವಿಶ್ವದಲ್ಲಿ ತಮ್ಮ ಪ್ರಾಬಲ್ಯವಿದೆ ಎಂದು ಭಾವಿಸುವ ಕೆಲವು ಶಕ್ತಿಗಳಿಗೆ ಭಾರತದ ಬೆಳವಣಿಗೆ ಮತ್ತು ಮೋದಿ ನಾಯಕತ್ವ ಆತಂಕ ಮೂಡಿಸಿದೆ ಎಂದು ಹೇಳಿದರು. 

ಭಾರತದ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಉಲ್ಲೇಖಿಸಿದ ಅವರು, ಹಿಂದೆ ಭಾರತವನ್ನು ಟೀಕಿಸುತ್ತಿದ್ದ ವಿಶ್ವಬ್ಯಾಂಕ್ ಕೂಡ ಇದೀಗ ದೇಶದ ಬಡತನ ನಿವಾರಣೆ ಮತ್ತು ಅಭಿವೃದ್ಧಿಯ ಬಗ್ಗೆ ಸಕಾರಾತ್ಮಕ ವರದಿಗಳನ್ನು ನೀಡುತ್ತಿದೆ ಎಂದು ತಿಳಿಸಿದರು. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ವಿಶ್ವದ ಪ್ರಮುಖ ಬಲಿಷ್ಠ ರಾಷ್ಟöçಗಳ ಸಾಲಿನಲ್ಲಿ ಮೂರನೇ ಸ್ಥಾನ ತಲುಪುವ ದಿಕ್ಕಿನಲ್ಲಿ ಸಾಗುತ್ತಿದೆ. 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟöçವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದರು. 

  ಈ ಸಂದರ್ಭದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಅಶ್ವಥ್ ನಾರಾಯಣ, ಮಾಜಿ ಶಾಸಕಾರಾದ ಅನಿಲ ಬೆನಕೆ, ಸಂಜಯ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಸುದ್ದಿ ಓದಿ