ಕಂಪ್ಲಿ

ಮದ್ಯಪಾನ ದುಶ್ಚಟಗಳಿಂದ ವಿಮುಖರಾಗಬೇಕು : ಟಿ.ಎಚ್‌.ಸುರೇಶಬಾಬು

ಮದ್ಯಪಾನ ದುಶ್ಚಟಗಳಿಂದ ವಿಮುಖರಾಗಬೇಕು : ಟಿ.ಎಚ್‌.ಸುರೇಶಬಾಬು

ಲೋಕದರ್ಶನ ವರದಿ 

             ಕಂಪ್ಲಿ  28:  ಸುಂದರ ಜೀವನಕ್ಕಾಗಿ, ಉತ್ತಮ ಕುಟುಂಬದ ಸುಖಕ್ಕಾಗಿ ಮದ್ಯಪಾನ ಸೇರಿದಂತೆ ವಿವಿಧ ದುಶ್ಚಟಗಳಿಂದ ಪ್ರತಿಯೊಬ್ಬರೂ ವಿಮುಖರಾಗಬೇಕು ಎಂದು ಮಾಜಿ ಶಾಸಕ ಟಿ.ಎಚ್‌.ಸುರೇಶಬಾಬು ತಿಳಿಸಿದರು.

               ಅವರು ಪಟ್ಟಣದ ಶಿಬಿರದಿನ್ನೆ ಮಾರುತಿ ನಗರ ಪುರಸಭೆಯ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ ಕಂಪ್ಲಿ ಯೋಜನಾ ಕಚೇರಿಯಿಂದ ಏರಿ​‍್ಡಸಿದ್ದ 4ನೇ ಹಾಗೂ ಶ್ರೀಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2151ನೇ ಮದ್ಯವ್ಯರ್ಜನ್ಯ ಶಿಬಿರಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿ,

               ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವ್ಯರ್ಜನ ಶಿಬಿರವನ್ನು ಏರಿ​‍್ಡಸುವ ಮೂಲಕ ಸಮಾಜದ ಸುಸ್ಥಿತಿಗೆ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯಾದ್ಯಂತ ಈಗಾಗಲೇ ಸಾವಿರಾರು ಕುಟುಂಬಗಳನ್ನು ಮದ್ಯವ್ಯಸನದಿಂದ ಮುಕ್ತ ಮಾಡುವ ಮೂಲಕ ಸುಂದರ ಸಮಾಜವನ್ನು ನಿರ್ಮಿಸುವಲ್ಲಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.

                 ಪ್ರಾದೇಶಿಕ ನಿರ್ದೇಶಕರಾದ ವೈ.ನಾಗೇಶ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯ ಹಾಗೂ ವಿವಿಧ ರಾಜ್ಯಗಳಲ್ಲಿ ಮಹಿಳೆಯರ ಹಾಗೂ ಪುರುಷರ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಕುಟುಂಬದ ಆರ್ಥಿಕ ಸುಸ್ಥಿರತೆಗೆ ಶ್ರಮಿಸುವ ಜೊತೆಗೆ ಹಲವಾರು ಜನಪರ ಯೋಜನೆಗಳನ್ನು ನೀಡಿದೆ ವಿವರಿಸಿದರು.

                    ಕಾರ್ಯಕ್ರಮದಲ್ಲಿ ಮದ್ಯವ್ಯರ್ಜನ ಶಿಬಿರದ ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಎಸ್‌.ಎಂ.ನಾಗರಾಜ, ಎ.ಸಿ.ದಾನಪ್ಪ ಸೇರಿದಂತೆ ಇತರರು ಮಾತನಾಡಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟಿನ ಕಂಪ್ಲಿ ತಾಲ್ಲೂಕು ಯೋಜನಾಧಿಕಾರಿಗಳಾದ ಎಲ್‌.ರಾಘವೇಂದ್ರ ಮಾತನಾಡಿ ಕಂಪ್ಲಿ ತಾಲ್ಲೂಕಿನಲ್ಲಿ ಇದು ನಾಲ್ಕನೇ ಶಿಬಿರವಾಗಿದ್ದು, ಈಗಾಲಗೇ ನೂರಾರು ಮದ್ಯವ್ಯಸನಿಗಳು ಮದ್ಯಪಾನದಿಂದ ದೂರವಾಗಿದ್ದು, ಉತ್ತಮ ಜೀವನದ ನಡೆಸುತ್ತಿವೆ. 


ಸುದ್ದಿ ಓದಿ