ಬಳ್ಳಾರಿಯ ಸಾಹಿತಿ ಕೆ. ಶಿವಲಿಂಗಪ್ಪಗೆ ಪರಾಗ್ ಆಥರ್ ಪ್ರಶಸ್ತಿ ಪ್ರಧಾನ
ಬಳ್ಳಾರಿ, ನ.28: ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಬಳ್ಳಾರಿಯ ಮಕ್ಕಳ ಸಾಹಿತಿ ಕೆ. ಶಿವಲಿಂಗಪ್ಪ ಹಂದಿಹಾಳು ಅವರಿಗೆ ಮಹಾರಾಷ್ಟ್ರದ ಮುಂಬೈನಲ್ಲಿ ಶುಕ್ರವಾರದಂದು ನಡೆದ ಟಾಟಾ ಟ್ರಸ್ಟ್‌ನ ಪರಾಗ್ ಉತ್ಸವದಲ್ಲಿ ಪ್ರತಿಷ್ಠಿತ ’ಪರಾಗ್ ಆಥರ್ ಪ್ರೈಜ್’ ಪ್ರಶಸ್ತಿ ಪ್ರದಾನ ಮಾಡಲಾಯಿತು .
ಈ ಪ್ರಶಸ್ತಿಯನ್ನು ಟಾಟಾ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ ನೀಡಲಾಗುತ್ತಿದ್ದು, ಮೊದಲ ಪ್ರಶಸ್ತಿಗೆ ಬಳ್ಳಾರಿಯ ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಆಯ್ಕೆಯಾಗಿರುವುದು ಜಿಲ್ಲೆಯ ಸಾಹಿತ್ಯ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಮತ್ತು ಜಿಲ್ಲೆಯ ಸಾಹಿತಿಗಳು ಅತ್ಯಂತ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಹಂದಿಹಾಳ್ ಮಾಡಿರುವ ಗಮನಾರ್ಹ ಕೆಲಸ, ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಸಾಹಿತ್ಯಿಕ ಕೊಡುಗೆ ಹಾಗೂ ಮಕ್ಕಳ ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಶಿವಲಿಂಗಪ್ಪ ಹಂದಿಹಾಳ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ಫಲಕದ ಜೊತೆಗೆ ?2,50,000 ನಗದು ಬಹುಮಾನವನ್ನು ಒಳಗೊಂಡಿದೆ.ಬಳ್ಳಾರಿಯ ಸಾಹಿತ್ಯ ಲೋಕದ ಪ್ರತಿಭೆಯೊಬ್ಬರಿಗೆ ಅಂತರ್ ರಾಜ್ಯ ಮಟ್ಟದಲ್ಲಿ ಮನ್ನಣೆ ದೊರೆತಿರುವುದು ಜಿಲ್ಲೆಯ ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಸಂಗತಿಯಾಗಿದೆ ,
ಶಿವಲಿಂಗಪ್ಪ ಹಂದಿಹಾಳು ಅವರ ಸಾಧನೆಗೆ ಸಾಹಿತಿಗಳಾದ ದಸ್ತಗೀರ್ ಸಾಬ್ ದಿನ್ನಿ , ಸಿದ್ದರಾಮಯ್ಯ ಕಲ್ಮಠ ವೀರೇಂದ್ರ ರಾವಿಹಾಳ್ ಬಾದಾಮಿ ಶಿವಲಿಂಗನಾಯಕ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.