ಬಳ್ಳಾರಿ

ಸ್ವಾತಂತ್ರ್ಯದ ನಂತರ ಮೂರು ದಶಕಗಳಲ್ಲಿ ಅದ್ಭುತವಾದ ಶೈಕ್ಷಣಿಕ ಪ್ರಗತಿಯಾಗಿದೆ : ಡಾ. ಚನ್ನಬಸವಣ್ಣ

ಸ್ವಾತಂತ್ರ್ಯದ  ನಂತರ ಮೂರು ದಶಕಗಳಲ್ಲಿ  ಅದ್ಭುತವಾದ ಶೈಕ್ಷಣಿಕ ಪ್ರಗತಿಯಾಗಿದೆ  : ಡಾ. ಚನ್ನಬಸವಣ್ಣ
Remarkable educational progress has been achieved in the three decades following independence: Dr.

          ಬಳ್ಳಾರಿ. ನ. 27 : ಕಾವ್ಯ ಹುಟ್ಟುವುದು ಕಷ್ಟ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಥೆಗಳ ಕಣಜವೇ ಇದೆ ಪುಂಕಾನು ಪುಂಕವಾಗಿ   ಒಂದು ರೀತಿಯಲ್ಲಿ   ಒರತೆಯಂತೆ  ಕಥೆಗಾರರು ಹುಟ್ಟಿಕೊಂಡಿದ್ದಾರೆ ಏಳು ಜಿಲ್ಲೆಗಳಲ್ಲಿ ಕತೆಗಾರರಿದ್ದರೂ ರಾಯಚೂರು ಜಿಲ್ಲೆ ಅತಿಹೆಚ್ಚಿನ ಸಾಹಿತಿಗಳನ್ನು ಹೊಂದಿದೆ ಅದರಲ್ಲಿ ಪ್ರಮುಖವಾಗಿ ಶಾಂತರಸ ಅಮರೇಶ್ ನುಗುಡೋಣಿ ಕಲಿಗಣಿನಾಥ ಗುಡದೂರು ಹುಲಿರಾಜ್ ಬಾಣದ ನೀರ್ ಮಾನವಿ  ನಾಗರಾಜ್ ಕೋರಿ ಸೇರಿದಂತೆ ಹಲವರನ್ನು ಹೆಸರಿಸಬಹುದಾಗಿದೆ.

          ಎಂದು ಲೋಹಿಯಾ ಪ್ರಕಾಶನದ ಡಾ.ಕೆ  ಚನ್ನಬಸವಣ್ಣ ತಿಳಿಸಿದರು. ಅವರು ಇಂದು ನಗರದ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಂಸ್ಕೃತಿಕ ಪರಿಷತ್ ವತಿಯಿಂದ  ಸಾಹಿತಿ ಡಾ. ಸಂಪಿಗೆ ನಾಗರಾಜ್ ಅವರ ಬಯಲು ಆಲಯದೊಳಗೆ ಕಾದಂಬರಿ ಕೃತಿಯನ್ನು ಬಿಡುಗಡೆಗೊಳಿಸಿ  ಮಾತನಾಡಿ, ಕಳೆದ ನಾಲ್ಕು ದಶಕಗಳಲ್ಲಿ ಅಗಾಧವಾದ ಕಥಾ ಜಗತ್ತು ಬೆಳದು ನಿಂತಿದೆ ಯಾರೇ ಒಬ್ಬ ಕಥೆಗಾರನು ತನ್ನ ಕಥೆಯು ಪ್ರಜಾವಾಣಿಯಲ್ಲಿ ಪ್ರಕಟಗೊಂಡರೆ ಸಾಕು ಅವನೊಬ್ಬ ಉತ್ತಮ ಕಥೆಗಾರರೆಂದು ನಿರ್ಣಯಿಸಲಾಗುತ್ತದೆ.

              ಎಂದು ಅಭಿಪ್ರಾಯಪಟ್ಟ ಚೆನ್ನಬಸವಣ್ಣ, ಸಾವಿರದ ನೂರು ವರ್ಷಗಳ ಹಿಂದೆ ಕೊಗಳಿಯ  ಶಿವಕೋಟ್ಯಾಚಾರ್ಯ ಅವರು ರಚಿಸಿದ ವಡ್ಡಾರಾಧನೆ ಪ್ರಥಮ ಗದ್ಯಕೃತಿ ಎಂದು ಪರಿಗಣಿಸಲಾಗಿದೆ ಈ ಕೃತಿಯಲ್ಲಿ ಜೈನ ಮುನಿಗಳ ಕುರಿತು ಉಲ್ಲೇಖವಿದ್ದರೂ ಸಹ ಇದೊಂದು ಅತ್ಯುತ್ತಮ ಕುರ್ತಿಯಾಗಿದ್ದು ಜಿಲ್ಲೆ ಹೆಮ್ಮೆ ಪಡುವಂಥ ಕೃತಿಯಾಗಿದೆ ಎಂದರು. ಒಬ್ಬ ಪ್ರಶಿಕ್ಷಕರು ನೂರು ಜನಕ್ಕೆ ಸಮ ಅವರು ಶಿಕ್ಷಣ ಅಥವಾ ಸಾಹಿತ್ಯವನ್ನು 30 ವರ್ಷಗಳ ವರೆಗೆ ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದಾರೆ 64 ವಿದ್ಯೆಗಳಲ್ಲಿ ಅಕ್ಷರ ವಿದ್ಯೆಯೇ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.

              ಸ್ವತಂತ್ರ ನಂತರ ಮೂರು ದಶಕಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಒತ್ತು ನೀಡಿದ್ದರಿಂದ  ಅದ್ಭುತವಾದ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಡಾಕ್ಟರ್ ಸಂಪಿಗೆ ನಾಗರಾಜ್ ಅವರ ಭೂಮಿ ತಾಯವ್ವ ಖಾಲಿ ಕಣ್ಣಿನ ಕಥನ ವೇದಾವತಿ ತೀರದಲ್ಲಿ ಕೃತಿಗಿಂತ ಇದು ಭಿನ್ನವಾಗಿದೆ ಈ ಕೃತಿಯಲ್ಲಿ ಗಡಿಭಾಗದ  ಸಮಸ್ಯೆಗಳ ಅನಾವರಣವಾಗಿದೆ ನಾಗರಾಜ್ ಅವರು ಇನ್ನೆಷ್ಟು ಕೃತಿಗಳನ್ನು ಹೊರ ತರಲಿ ಎಂದು ಆಶಿಸಿದರು. ಬಯಲು ಆಲಯದೊಳಗೆ ಕಾದಂಬರಿಯ ಕುರಿತು ಮಾತನಾಡಿದ ಹಳೆಮನೆ ರಾಜಶೇಖರ್ ಅವರು,

              ಈ ಕಾದಂಬರಿಯಲ್ಲಿ ಮುಗ್ಧತೆ ಮತ್ತು ವಿಲಾಸಿ ಜಗತ್ತಿನ ಅನಾವರಣವಾಗಿದೆ ಇದರ ಜೊತೆಗೆ ಅಂತಕರಣ ಮುಖಾಮುಖಿಗೊಂಡು ಕಾದಂಬರಿ ಓದಿಸಿಕೊಂಡು ಹೋಗುತ್ತದೆ, ಈ ಕಾದಂಬರಿಯಲ್ಲಿ ಮೇಳಯಿಸಿರುವಂತೆ ನಮ್ಮ ಗ್ರಾಮಗಳು  ಅಗಾಧವಾದ ಸಾಂಸ್ಕೃತಿಕ ಮುಗ್ಧತೆ ಅಂತಃಕರಣದ ಸಮೀಕರಣದಿಂದ ಕೂಡಿದೆ ಎಂದು ಕಾದಂಬರಿಯ ಬಗ್ಗೆ ವಿಶ್ಲೇಷಣೆಯನ್ನು ವ್ಯಕ್ತಪಡಿಸಿದರು. ಶಿಕ್ಷಣ ನೀತಿಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತಿಗಳು ಅನುಮಾನದಿಂದ ನೋಡಿದ್ದಾರೆ ಶಿಕ್ಷಣದಲ್ಲಿನ ನಾಲಿಗೆಗಳು ನೈತಿಕ ಮೌಲ್ಯವನ್ನು ಕಳೆದುಕೊಂಡಿದೆ ಎಂದು ಅವರು ವಿಷಾದವನ್ನು ವ್ಯಕ್ತಪಡಿಸಿದರು.   

             ಕಾರ್ಯಕ್ರಮದಲ್ಲಿ ಕನ್ನಡ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿದರು,  ಕಾದಂಬರಿಯ ಬಗ್ಗೆ ಬಾದಾಮಿ ಶಿವಲಿಂಗ ಸೇರಿದಂತೆ ಇತರರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲಿಂಗರಾಜ್ ಪ್ರಾರ್ಥಿಸಿದರೆ ಏಎಂಪಿ ವೀರೇಶ್ ಸ್ವಾಮಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಸತ್ಯಂ ಕಾಲೇಜಿನ ಪ್ರಾಂಶುಪಾಲರಾದ ಎಚ್ ವೀರಭದ್ರ​‍್ಪ ಕೃತಿಕಾರರದ ಸಂಪಿಗೆ ನಾಗರಾಜ್ ಡಾಕ್ಟರ್ ಪಿ ಎಂ ಲಿಂಗರಾಜ್ ವೀರೇಶ್ ಕರಡಗಲ್ ವೆಂಕಟೇಶ್ ಉಪ್ಪಾರ್ ಗಿರಿಜಾಪತಿ , ಡಾ. ದಸ್ತಗಿರಿ ಸಾಬ್ ದಿನ್ನಿ ವೀರೇಂದ್ರ ರವಿಹಾಳ್ ಡಾ. ಶ್ರೀನಿವಾಸಮೂರ್ತಿ ಚಾಂದ್ ಬಾಷಾ ಸಂಡೂರಿನ  ತಿಪ್ಪೇರುದ್ರ ಸೇರಿದಂತೆ  ಕಾಲೇಜಿನ ಹಲವಾರು ಜನ ವಿದ್ಯಾರ್ಥಿಗಳು ಬೋಧಕರು ಬೋಧಕ್ಕೆ ತರ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ