ಹೂವಿನ ಹಡಗಲಿ

ಕನಕದಾಸರ ತತ್ವಾದರ್ಶಗಳನ್ನು ಪಾಲಿಸಿ

ಕನಕದಾಸರ ತತ್ವಾದರ್ಶಗಳನ್ನು ಪಾಲಿಸಿ

ಲೋಕದರ್ಶನ ವರದಿ 

              ಹೂವಿನಹಡಗಲಿ  ನ.27:  ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯದ ಮೂಲಕ ಸಮಾನತೆ, ಮಾನವೀಯತೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದ ಮಹಾನ್ ಸಂತ-ಕವಿ. ಅವರ ತತ್ವಗಳು ಇಂದಿನ ಯುವಜನತೆಗೆಆದರ್ಶವಾಗಿದ್ದು, ಪ್ರತಿಯೊಬ್ಬ ಜೀವನದಲ್ಲಿಅಳವಡಿಸಿಕೊಳ್ಳಬೇಕು ತಾ.ಪಂ.ಇಒ ಪರಮೇಶ್ವರ ಹೇಳಿದರು.

            ಪಟ್ಟಣದ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ  ನಡೆದ ಕನಕದಾಸರ 539ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದರು. ಕನಕದಾಸರು ತಮ್ಮ ಕೀರ್ತನೆಗಳು ಹಾಗೂ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತಿ ವ್ಯವಸ್ಥೆ ಮತ್ತು ಮೇಲು-ಕೀಳು ಎಂಬ ಭಾವನೆಗಳ ವಿರುದ್ಧ ಧ್ವನಿ ಎತ್ತಿದ ಮಹಾನ್ ದಾರ್ಶನಿಕರಾಗಿದ್ದಾರೆ.

                 ಅವರ ತತ್ವಾದರ್ಶಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಬದುಕಿಗೆ ಅರ್ಥ ಬರುತ್ತದೆ ಹೇಳಿದರು.ಸರ್ಕಾರಿ ನೌಕರರರ ಸಂಘದ ತಾಲೂಕು ಅಧ್ಯಕ್ಷ  ಎ.ಕೊಟ್ರಗೌಡ ಮಾತನಾಡಿ, ಎಲ್ಲ ವರ್ಗದ ಮಕ್ಕಳಿಗೂ ಶಿಕ್ಷಣ ದೊರೆತು ಉನ್ನತ ಸ್ಥಾನಕ್ಕೇರಿದಾಗ ಮಾತ್ರ ದಾರ್ಶನಿಕರ ಕನಸು ನನಸಾಗುತ್ತದೆ ಎಂದರು.

              ಶಿಕ್ಷಕ ಬಸವರಾಜ ಕನಕದಾಸರ ಜೀವನ ಚರಿತ್ರೆ ಕುರಿತು ವಿಶೇಷ  ಉಪನ್ಯಾಸ ನಡೆಸಿದರು.ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪರಮೇಶಪ್ಪ, ಪ್ರದೇಶ ಕುರುಬ ಸಂಘದ ನಿರ್ದೇಶಕ ಬಿ.ಹನುಮಂತಪ್ಪ, ತಾಪಂ ಮಾಜಿ ಸದಸ್ಯ ಈಟಿ.ಲಿಂಗರಾಜ, ಪುರಸಭೆ ಮಾಜಿ ಸದಸ್ಯರಾದ ಈಟಿ. ಮಹಾಂತೇಶ, ಹನುಮೇಶ,

            ಎಸ್ಟಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಹಳ್ಳಿಗುಡಿ ವಿಶ್ವನಾಥ, ಬಿಇಒ ಮಂಗಳಾ ಕೆ, ಉಪತಹಸೀಲ್ದಾರ್ ಕೊಟ್ರಮ್ಮ, ಬಿಸಿಎಂ ವಿಸ್ತರಣಾಧಿಕಾರಿ ರಮೇಶ್, ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪ ಹಾಗೂ ಇತರರಿದ್ದರು. 


ಸುದ್ದಿ ಓದಿ