ಕಂಪ್ಲಿ

ಹಾಲುಮತ ಸಮಾಜದಿಂದ ಕನಕದಾಸರ ಜಯಂತಿ ಸಡಗರ ಸಂಭ್ರಮದಿಂದ ಆಚರಣೆ

ಹಾಲುಮತ ಸಮಾಜದಿಂದ ಕನಕದಾಸರ ಜಯಂತಿ ಸಡಗರ ಸಂಭ್ರಮದಿಂದ ಆಚರಣೆ

ಲೋಕದರ್ಶನ ವರದಿ 

            ಕಂಪ್ಲಿ 27:  ತಾಲೂಕಿನ ಎಮ್ಮಿಗನೂರು ಗ್ರಾಮದ ಕನಕದಾಸ ವೃತ್ತದಲ್ಲಿ ಹಾಲುಮತ ಸಮಾಜದಿಂದ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಜಯಂತಿ ಶುಕ್ರವಾರದಂದು ಆಚರಿಸಲಾಯಿತು.

          ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಅಧ್ಯಕ್ಷ ಉಡೆದು ವಿರುಪಾಕ್ಷಪ್ಪ ಮಾತನಾಡಿ ದಾಸಶ್ರೇಷ್ಠ ಸಂತ, ಕವಿ ಮತ್ತು ಸಮಾಜ ಸುಧಾರಕ ಕನಕದಾಸರ ಜನ್ಮದಿನದ ಸ್ಮರಣಾರ್ಥ ಕರ್ನಾಟಕ ಕನಕದಾಸರು ತಮ್ಮ ಕೀರ್ತನೆಗಳು, ಸಾಹಿತ್ಯ ಹಾಗೂ ಸಾಮಾಜಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಸಮಾನತೆ, ಭಕ್ತಿ, ಮಾನವೀಯತೆ ಮತ್ತು ಜಾತಿಭೇದ ನಿವಾರಣೆಯ ಸಂದೇಶ ಸಾರಿದ ಮಹಾನ್ ಸಂತರು. ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರೀದೀಪವಾಗಿವೆ ಎಂದು ಗಣ್ಯರು ಸ್ಮರಿಸಿದರು.

           ನಾಡು ಕಂಡ ಸಂತ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಆದರ್ಶಗಳು ಎಲ್ಲರಿಗೂ ಅನುಕರಣೀಯ.ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನರ ಮನಸ್ಸುಗಳನ್ನು ಬದಲಿಸುತ್ತಾ ಸಮಾಜವನ್ನು ಸರಿದಾರಿಗೆ ತರಲು ಶ್ರಮಿಸಿದರು. ಅವರ ಜೀವನ ಹಾಗೂ ಸಾಹಿತ್ಯ ಎರಡೂ ಉತ್ತಮ ಮಾರ್ಗ ತೋರುತ್ತವೆ ಎಂದು ತಿಳಿಸಿದರು.

            ಈ ಜಯಂತಿಯಲ್ಲಿ ಹಾಲುಮತ ಸಮಾಜದವರು ಡೊಳ್ಳು ಕುಣಿತದೊಂದಿಗೆ  ಗಮನ ಸೆಳೆಯಿತು ಈಸಂದರ್ಭದಲ್ಲಿ ಮುಖಂಡರಾದ ದೊಡ್ಡ ಮನೆ ಗಾದಿಲಿಂಗಪ್ಪ .ಎಮ್ಮೆ ತಿಪ್ಪಯ್ಯ .ಜಂಬಣ್ಣ .ಉಡೆದು ಜಡಿಮೂರ್ತಿ .ಸಾದಪ್ಪ .ಉಡೆದು ಮಾರೆಪ್ಪ .ಅಂಬಣ್ಣ .ಉಳ್ಳೆ ಹನುಮಂತಪ್ಪ. ಮರಿಯಪ್ಪ .ಯುವಕರಾದ ಶರಣಪ್ಪ .ಗಣೇಶ್ .ಮಲ್ಲಿಕಾರ್ಜುನ .ಗಾದಿಲಿಂಗಪ್ಪ. ಕೆಂಚಪ್ಪ .

            ಜಗದೀಶ್ .ಸಂತೋಷ್ .ಕೀರ್ತಿ .ಮಣಿಕಂಠ .ಸಂಜೀವ .ಹೊನ್ನೂರ .ಅಂಜಿನಿ .ಗ್ಯಾಸ್ ನಾಗರಾಜ್ .ನಾಗೇಶ್ .ರೇಣುಕಪ್ಪ .ರಾಜೇಶ್ .ಹುಚ್ಚಪ್ಪ ಮಲ್ಲಿಕಾರ್ಜುನ ಉಡೆದಲಿಂಗಪ್ಪ .ಉಮೇಶ್ .ಮಾಂತೇಶ್ ಕೆ ತಿಪ್ಪಯ್ಯ ಸೇರಿದಂತೆ ಹಾಲುಮತ ಸಮಾಜದ ಮುಖಂಡರು ಯುವಕರು ಪಾಲ್ಗೊಂಡಿದ್ದರು  


ಸುದ್ದಿ ಓದಿ