ನವೋದಯ ಪರೀಕ್ಷೆ : 780 ವಿದ್ಯಾರ್ಥಿಗಳು ಹಾಜರು
ಹೂವಿನಹಡಗಲಿ : ನ.28- ನವೋದಯ ವಸತಿ ಶಾಲೆಯ 6ನೇ ತರಗತಿಗೆ ಪ್ರವೇಶಾತಿ ಕುರಿತು ಶನಿವಾರ ಸ್ಥಳೀಯವಾಗಿ 3 ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆ ಜಿಪಿಜಿ , ಸೊಪ್ಪಿನ ಕಾಳಮ್ಮ ಬಾಲಕಿಯರ ಕಾಲೇಜು ಹಾಗೂ ತುಂಗಭದ್ರಾ ಪ್ರೌಢಶಾಲೆ ಮೂರು ಪರೀಕ್ಷಾ ಕೇಂದ್ರಗಳಲ್ಲಿ ನಿಯೋಜಿಸಲಾಗಿತ್ತು.ಪರೀಕ್ಷೆಗೆ ತಾಲ್ಲೂಕಿನ ನಾನಾ ಶಾಲೆಗಳಿಂದ 862 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಈ ಪೈಕಿ 780 ವಿದ್ಯಾರ್ಥಿಗಳು ಹಾಜರಾಗಿದ್ದರು. 82 ವಿದ್ಯಾರ್ಥಿಗಳು ಗೈರು ಆಗಿದ್ದಾರೆ ಎಂದು ಬಿಇಒ ಮಂಗಳಾ ಕೆ, ಬಿಆರ್ ಸಿ ಕೋಟೆಪ್ಪ ತಿಳಿಸಿದ್ದಾರೆ.ಇದೇ ವೇಳೆ ರವೀಂದ್ರನಾಥ, ಸೂರ್ಯಕಾಂತ ಬಾರಿಕರ ,ಜಿ ಎಂ ಕಾಂತೇಶ್ ,ಸುರೇಶ ಅಂಗಡಿ, ಪ್ರಕಾಶ್ ಕಂಠಿ, ಸೈಕತ್ ಮೆಹತಾ 3 ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.