ಹೂವಿನ ಹಡಗಲಿ

ಸೋಗಿ ಗ್ರಾಮ ಕಲೆಗಳ ತವರೂರು - ಡಾ ಕೆ ರುದ್ರ​‍್ಪ

ಸೋಗಿ ಗ್ರಾಮ ಕಲೆಗಳ  ತವರೂರು - ಡಾ ಕೆ ರುದ್ರ​‍್ಪ

              ಹೂವಿನ ಹಡಗಲಿ  28: ತಾಲೂಕಿನ ಸೋಗಿ ಗ್ರಾಮ ಅನೇಕ ಕಲೆಗಳ ತವರೂರು ಎಂದು ಕಸಾಪ ಎರಡನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ ಕೆ ರುದ್ರ​‍್ಪ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ  ಸಿದ್ಧಿವಿನಾಯಕ ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್‌(ರಿ) ಸೋಗಿ ಇವರ ಸಹಯೋಗದಲ್ಲಿಜಾನಪದ ಸಂಗೀತ ಮತ್ತು ಬಯಲಾಟ ಪದಗಳು ಕಾರ್ಯಕ್ರಮ ಸೋಗಿ ಗ್ರಾಮದಲ್ಲಿ ಜರುಗಿತು.ಸಮಾರಂಭ ಮೃದಂಗ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಒಂದರ್ಥದಲ್ಲಿ ಕಲಾಗ್ರಾಮ ಎಂದರು.

              ದೊಡ್ಡಾಟದ ಎ.ಎಂ ಹಾಲಯ್ಯ, ಮಲ್ಲಪ್ಪ ಗವಾಯಿ ಮೊದಲಾದ ಕಲಾವಿದರ ಸೇವೆಯನ್ನು ಸ್ಮರಿಸಿದರು.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಲ್ಲಪ್ಪ ಗವಾಯಿ, ವೀರಗಾಸೆ ಕಲಾವಿದ  ಕರಿಬಸಪ್ಪ ತಮ್ಮ ಕಲೆ ಮೂಲಕ ನಾಡಿನ ಗಮನ ಸೆಳೆದಿದ್ದಾರೆ ಎಂದರು.ಕಸ್ತೂರ​‍್ಪ ಸಂಗಡಿಗರು ದೊಡ್ಡಾಟದ ಪದಗಳನ್ನು ಹಾಗೂ ಶ್ರೀ ರೇಣುಕಾದೇವಿ, ಹಾಗೂ ಗಾಯತ್ರಿ ಸಂಘದ ಮಹಿಳಾ ಕಲಾವಿದರುಸಂಪ್ರದಾಯದ ಹಾಡುಗಳನ್ನು ಹೇಳಿ  ರಂಜಿಸಿದರು.

               ಈ ಸಂದರ್ಭದಲ್ಲಿ ಹಿರಿಯ ದೊಡ್ಡಾಟ ಕಲಾವಿದ ಹಿರೇಗೌಡರ ಚನ್ನಬಸಪ್ಪ ಅವರ ನುಡಿನಮನ ಕಾರ್ಯಕ್ರಮ ಜರುಗಿತು.ಹೆಚ್ ಕಲ್ಲೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಗ್ರಾಮದ ಅನೇಕ ಗಣ್ಯರು ಕಲಾವಿದರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಹೊನ್ನೇಶ್ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ