ಶಿರಹಟ್ಟಿ

ಬಸವ ಮಂಟಪ ಕೃತಿ ನಿಷೇಧಕ್ಕೆ ಆಗ್ರಹ: ನ.30ರಂದು ಶಿರಹಟ್ಟಿಯಲ್ಲಿ ಪ್ರತಿಭಟನೆ

ಬಸವ ಮಂಟಪ ಕೃತಿ ನಿಷೇಧಕ್ಕೆ ಆಗ್ರಹ: ನ.30ರಂದು ಶಿರಹಟ್ಟಿಯಲ್ಲಿ ಪ್ರತಿಭಟನೆ

             ಶಿರಹಟ್ಟಿ 28 : ಬಸವಣ್ಣನವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿರುವ ‘ಬಸವ ಮಂಟಪ’ ಕೃತಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಹಾಗೂ ಲೇಖಕ ರವಿ ಹಂಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಜಾ ಕ್ರಾಂತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಡಿ.ಕೆ. ಹೊನ್ನಪ್ಪನವರ ಆಗ್ರಹಿಸಿದರು.

                ಬಸವಣ್ಣನವರು ಸಮಾನತೆ, ಕಾಯಕ, ದಾಸೋಹ ಹಾಗೂ ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಮಹಾನ್ ಸಮಾಜ ಸುಧಾರಕರಾಗಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಕೃತಿಯ ರಚನೆ ಖಂಡನೀಯ.

              ಕೂಡಲೇ ‘ಬಸವ ಮಂಟಪ’ ಕೃತಿಯನ್ನು ನಿಷೇಧಿಸಿ, ಲೇಖಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಈ ಬೇಡಿಕೆಗೆ ಆಗ್ರಹಿಸಿ ನ.30ರಂದು ಸೋಮವಾರ ಶಿರಹಟ್ಟಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

               ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಕರ್ತರು, ಬಸವಣ್ಣನವರ ಅನುಯಾಯಿಗಳು ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮುತ್ತು ಭಾವಿಮನಿ,ದಯಾನಂದ ಸೂರಣಾಗಿ, ಹನಮಂತ ದೊಡ್ಡಮನಿ ಮುಂತಾದವರು ಇದ್ದರು, 


ಸುದ್ದಿ ಓದಿ