ಕನಕದಾಸರ ದಾಸ ಸಾಹಿತ್ಯ ಮತ್ತು ಅವರ ತತ್ವ ಸಂದೇಶಗಳು ಸರ್ವಕಾಲಿಕವಾಗಿವೆ: ಶಾಸಕ ಚಂದ್ರು ಲಮಾಣಿ
ಶಿರಹಟ್ಟಿ 28 : ಪಟ್ಟಣದ ಕನಕದಾಸ ವೃತ್ತದಲ್ಲಿನ ಕನಕದಾಸರ ಮೂರ್ತಿಗೆ ತಹಶೀಲ್ದಾರ ಕೆ.ರಾಘವೇಂದ್ರರಾವ್ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು. ಕನಕದಾಸರ ಭಾವಚಿತ್ರ ಹೊತ್ತ ಬೃಹತ್ ಮೆರವಣಿಗೆಯು ಪಟ್ಟಣದ ಬೀದಿ ಬೀದಿಗಳಲ್ಲಿ ಸಂಚರಿಸಿತು. ಡೊಳ್ಳು ಕುಣಿತ, ನಂದಿಕೋಲು ಕುಣಿತ, ಚಂಡಿವಾದ್ಯ ಮೇಳಗಳು ಮೆರವಣಿಗೆಗೆ ಮೆರಗು ತಂದವು.
ನಂತರ ತಹಶೀಲ್ದಾರ ಕಾರ್ಯಾಲಯದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಯಿತು.ವೇದಿಕೆ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಚಂದ್ರು ಲಮಾಣಿ, ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಚಲನಶೀಲವಾದ ನೆಲೆಕಂಡುಕೊಂಡ ಕನಕದಾಸರ ದಾಸ ಸಾಹಿತ್ಯ ಮತ್ತು ಅವರ ತತ್ವ ಸಂದೇಶಗಳು ಸರ್ವಕಾಲಿಕವಾಗಿವೆ.
ಕನಕದಾಸರ ಕಾಲ ದಾಸ ಸಾಹಿತ್ಯದ ಸುವರ್ಣಯುಗ. ವೈಚಾರಿಕ ಮನೋಭಾವದಿಂದ ಸಮಕಾಲೀನ ಬದುಕಿನ ನೈಜ ಚಿತ್ರಣವನ್ನು ಮುಂದಿನ ಜನಾಂಗಕ್ಕೆ ಸಮರ್ಥವಾಗಿ ಕಟ್ಟಿ ಕೊಟ್ಟಿದ್ದಾರೆ. ಈ ಕಾರಣಕ್ಕಾಗಿ ಕನಕರು ದಾಸರಲ್ಲೇ ಶ್ರೇಷ್ಠರು ಎಂದು ಕರೆಯಿಸಿಕೊಂಡಿದ್ದಾರೆ.ಕನಕದಾಸರು ಕವಿ, ದಾರ್ಶನಿಕ, ಸಂತ, ಕಲಾವಿದ, ಸಂಸ್ಕೃತಿ ಚಿಂತಕ, ಸಮಾಜ ಸುಧಾರಕ ಎಲ್ಲವೂ ಆಗಿದ್ದರು. ಸಾಹಿತ್ಯದ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟಿದ್ದರು.
ಮನುಷ್ಯನ ಜೀವನವನ್ನು ಉತ್ತುಂಗಕ್ಕೇರಿಸಲು ಕೀರ್ತನೆಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಮೇಲು-ಕೀಳು ಹಾಗೂ ಜಾತಿ ವ್ಯವಸ್ಥೆ ಕೊನೆಗೊಂಡು, ಸಮಸಮಾಜ ನಿರ್ಮಾಣವಾಗಲಿದೆ. ಇಂತಹ ಮಹಾನ್ ದಾರ್ಶನಿಕರನ್ನು ಒಂದು ಸಮಾಜಕ್ಕೆ ಸಿಮೀತಗೊಳಿಸದೆ ಅವರ ಕೀರ್ತನೆಗಳಲ್ಲಿನ ಮಾನವೀಯ ಮೌಲ್ಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಹಂಚುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕೆ ರಾಘವೇಂದ್ರರಾವ್, ತಾ.ಕುರುಬ ಸಂಘದ ಅಧ್ಯಕ್ಷ ಹೊನ್ನೇಶ ಪೋಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಶಿವರಾಜ ಸೀಮಿಕೇರಿ, ರಾಮಣ್ಣ ದೊಡ್ಡಮನಿ, ಶಿವಮಕುಮಾರ್ ಕಾಶಪ್ಪನವರ, ಪಪಂ ಮುಖ್ಯಾಧಿಕಾರಿ ನಿಲೇಶ ಹಾದಿಮನಿ, ಪಿಎಸ್ಐ ಈರ್ಪ ರಿತ್ತಿ, ಮುಖಂಡರಾದ ಸಂತೋಷ ಕುರಿ, ಹುಮಾಯೂನ್ ಮಾಗಡಿ,
ನಾಗರಾಜ ಲಕ್ಕುಂಡಿ, ಹೇಮಂತ ಕೆಂಗೊಂಡ, ಮಂಜುನಾಥ ಘಂಟಿ, ಆನಂದ ಮಾಳೆಕಪ್ಪ, ಫಕೀರೇಶ ರಟ್ಟಿಹಳ್ಳಿ, ರಾಮಣ್ಣ ಕಂಬಳಿ, ದೀಪು ಕಪ್ಪತ್ತನವರ, ಗೂಳಪ್ಪ ಕರಿಗಾರ, ಮಹೇಂದ್ರ ಉಡಚಣ್ಣವರ, ಬಸವರಾಜ ತುಳಿ, ಶಿವನಗೌಡ ಪಾಟೀಲ, ಎಂ.ಕೆ.ಲಮಾಣಿ, ಶಶಿ ಪೂಜಾರ,ಸೋಮನಗೌಡ ಮರಿಗೌಡ್ರ, ದೇವಪ್ಪ ಬಟ್ಟೂರ ಸೇರಿದಂತೆ ಮುಂತಾದವರು ಇದ್ದರು.