ರಾಣೆಬೆನ್ನೂರ

ಕನ್ನಡಿಗರು ಕನ್ನಡ ಸಂಸ್ಕೃತಿ ಉಳಿಸಲು ಭವಿಷ್ಯದ ರೂವಾರಿಗಳಾಗಬೇಕು : ಅರುಣಕುಮಾರ ಪೂಜಾರ

ಕನ್ನಡಿಗರು ಕನ್ನಡ ಸಂಸ್ಕೃತಿ ಉಳಿಸಲು ಭವಿಷ್ಯದ ರೂವಾರಿಗಳಾಗಬೇಕು : ಅರುಣಕುಮಾರ ಪೂಜಾರ

               ರಾಣೆಬೆನ್ನೂರು 28 : ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ನಿರಾಭಿಮಾನಿಗಳಾಗದೆ ಸ್ವಾಭಿಮಾನಿಗಳಾಗಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ಮಾಜಿ ಶಾಸಕ ಅರುಣ ಕುಮಾರ ಪೂಜಾರ ಹೇಳಿದರು. ಅವರು ಗುರುವಾರ ರಾತ್ರಿ ನಗರಸಭಾ ಕ್ರೀಡಾಂಗಣದಲ್ಲಿ ಹೆಮ್ಮೆಯ ಕರ್ನಾಟಕ ಸಂಘಟನೆ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಸಂಭ್ರಮ- ಸಾಧಕ ಗಣ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.

                ಸಂಸ್ಕೃತಿ ಮತ್ತು ಸಂಸ್ಕಾರ ನಮ್ಮ ನಾಡಿನ ಪರಂಪರೆ. ಪರಂಪರೆ ಉಳಿದರೇ ನಾವು ಮತ್ತು ಕನ್ನಡಿಗರು ಉಳಿದು ಬೆಳೆಯಲು ಸಾಧ್ಯ.ಪರಂಪರೆ ಉಳಿಯದೆ ಹೋದರೆ ನಮ್ಮತನವನ್ನು ನಾವು ಕಳೆದುಕೊಂಡಂತಾಗುತ್ತದೆ ಎಂದು ಅವರು ವಿಷಾದಿಸಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸ ಪರಂಪರೆ ಇದೆ. ಭಾಷೆ ಮತ್ತು ಸಂಸ್ಕೃತಿ ರಕ್ಷಿಸುವ ಹೂಣೆ ಭವಿಷ್ಯದ ಯುವ ಜನಾಂಗದ ಜೊತೆಗೆ ಇಂತಹ ಕನ್ನಡಪರ ಸಂಘಟನೆಗಳಿಂದಾಗಬೇಕಾಗಿದೆ ಎಂದ ಅವರು, ಎಲ್ಲ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸಮ್ಮಿಲನ ಗೊಂಡಿರುವುದು ಸೌಹಾರ್ದತೆಗೆ ಈ ಅದ್ದೂರಿ ಕಾರ್ಯಕ್ರಮವು ಸಾಕ್ಷಿಯಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.

             ಸಂಘಟನೆಯ ಅಧ್ಯಕ್ಷ ಈರಣ್ಣ ಗೋ ಕೊಂಡಜ್ಜಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಸಪ್ಪ ಯಲ್ಲಪ್ಪ ಕುಸಗೂರ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರವಿರಾಜ ಕೆ. ಕಟ್ಟಿಮನಿ ಮತ್ತು ಕನಕ ಗುರು ಪೀಠ ನಾಮ ನಿರ್ದೇಶಿತ ಮೃತುಂಜಯ ಗುದಿಗೇ ರ ಅವರನ್ನು ಸಾರ್ವಜನಿಕವಾಗಿ, ಅಭಿನಂದಿಸಿ ಸನ್ಮಾನಿಸಲಾಯಿತು.  ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕ ಭರಮಪ್ಪ ಪೂಜಾರ್ ಅವರು ದಿವ್ಯ ಸಾನಿಧ್ಯ  

ವಹಿಸಿದ್ದರು. ರೈತ ಮುಖಂಡರಾದ ಹನುಮಂತಪ್ಪ ಕಬ್ಬಾರ್, ರವೀಂದ್ರ ಗೌಡ ಪಾಟೀಲ, ವಿಶ್ರಾಂತ್ ಶೆಟ್ರು ಸೇರಿದಂತೆ ಮತ್ತಿತರರು ಮಾತನಾಡಿದರು.

              ವೇದಿಕೆಯಲ್ಲಿ ಗಣ್ಯರಾದ ಗೋಪಾಲಪ್ಪ ಕೊಂಡಜ್ಜಿ, ಕುಬೇರ​‍್ಪ ಕೊಂಡಜ್ಜಿ, ಹನುಮಂತಪ್ಪ ಕಸವಾಳ, ನಿತ್ಯಾನಂದ ಕುಂದಾಪುರ, ಮಂಜುನಾಥ ದುಗ್ಗತ್ತಿ, ಕಿರಣ ಗುಳೇದ, ಚೋಳಪ್ಪ ಕಸವಾಳ, ಆನಂದ ಹುಲಬನ್ನಿ, ಪೈ ಭರಮಪ್ಪ ಪೂಜಾರ, ಹುಚ್ಚಪ್ಪ ಮೈಡ್ಲೆರಿ, ರಾಮಣ್ಣ ಕರಡೆಣ್ಣನವರ, ಹನುಮಂತಪ್ಪ ಚಳಗೇರಿ, ಷಣ್ಮುಖಪ್ಪ ಕಂಬಳಿ, ಬೀರ​‍್ಪ ಕೊಂಡಜ್ಜಿ, ಸೋಮಣ್ಣ ಕುರುವತ್ತಿ, ರಾಜು ಮೈಲಾರದ, ಹನುಮಂತಪ್ಪ ದೇವರಗುಡ್ಡ, ಹುಚ್ಚಪ್ಪ ಕುರಡಳ್ಳಪ್ಪನವರ, ಮತ್ತು ಸಂಘಟನೆಯ ಕುಮಾರ ಮಲ್ಲಾಪುರ, ಉಮೇಶ ಕುರುಡಪ್ಪಳ್ಳನವರ, ಹನುಮಂತಪ್ಪ ಕೊಂಡಜ್ಜಿ, ಮಂಜುನಾಥ ಯರಬಾಳ, ನಾರಾಯಣ ಲಕ್ಷ್ಮೇಶ್ವರ, ಮತ್ತಿತರರು ಉಪಸ್ಥಿತರಿದ್ದರು.

              ಕಲಾವಿದ ಲತಾ ಸಂಗಡಿಗರು ಪ್ರಾರ್ಥಿಸಿದರು. ಕುಮಾರ್ ಮಲ್ಲಾಪುರ ಸ್ವಾಗತಿಸಿ, ವಿಜಯಕುಮಾರ ಎಂ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ನಿರೂಪಿಸಿ, ಪ್ರವೀಣ ಸರ್ವಂದ ವಂದಿಸಿದರು. ನಾಲ್ಕು ತಾಸುಗಳ ಕಾಲ ನಡೆದ ಮ್ಯೂಸಿಕ್ ಮೈಲಾರಿ, ಡಾ. ನಾಗಭೂಷಣ, ಲಕ್ಷ್ಮಿ ವಿಜಾಪುರ ಮಂಜು ಕೊಕ್ನೂರ್ ತಂಡದವರ ಜಾನಪದ ಸಂಗೀತ ಕಾರ್ಯಕ್ರಮವು ಯುವ ಸಮುದಾಯವನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿತ್ತು, ಕ್ರೀಡಾಂಗಣವು ಸಾರ್ವಜನಿಕರಿಂದ ತುಂಬಿ ತುಳುಕಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು. 


ಸುದ್ದಿ ಓದಿ