ಬಿ.ಎ.ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯ“ಸುವರ್ಣ ಮಹೋತ್ಸವ“ ಆಚರಣೆ ಪೂರ್ವಭಾವಿ ಸಭೆ
ಲೋಕದರ್ಶನ ವರದಿ
ರಾಣೇಬೆನ್ನೂರ : ಸ್ಥಳೀಯ ಬಿ.ಎ.ಜೆ.ಎಸ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯು ಬೆಳೆದು ನಡೆದು ಬಂದು 50 ವರ್ಷಗಳು ಕಳೆದಿದ್ದು ಅದರ ಸವಿನೆನಪಿಗಾಗಿ “ಸುವರ್ಣ ಮಹೋತ್ಸವ “ ವನ್ನು 2028 ರಲ್ಲಿ ನಡೆಸಲುತಿರ್ಮಾನಿಸಲಾಗಿದ್ದುಇದರ ಪ್ರಯುಕ್ತವಾಗಿ ಪೂರ್ವಭಾವಿ ಸಭೆಯು ಹಲಗೇರಿರಸ್ತೆಯಲ್ಲಿಇರುವ ಗಾಯತ್ರಿಕ್ಯಾಂಪಸ ್‌ನಲ್ಲಿರುವಬಿ.ಎ.ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಆಡಳಿತಾಧಿಕಾರಿಗಳಾದ ಡಾ. ಆರ್.ಎಂ. ಕುಬೇರ್ಪನವರಅಧ್ಯಕ್ಷತೆಯಲ್ಲಿಜರುಗಿತು.
ಸಭೆಯಲ್ಲಿ ಶಿಕ್ಷಣ ಸಂಸ್ಥೆಯ ಹುಟ್ಟು, ಬೆಳವಣಿಗೆ ಹಾಗೂ ಆರಂಭದಿಂದಇಲ್ಲಿಯ ವರೆಗೆ ನಡೆದ ಘಟನಾವಳಿಗಳನ್ನು ಸ್ಮರಿಸಿದರು. ಬಿ.ಎ.ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯ“ಸುವರ್ಣ ಮಹೋತ್ಸವ “ವನ್ನು ವಿಜೃಂಭಣೆಯಿಂದಆಚರಿಸಲು ನಿರ್ಧರಿಸಲಾಯಿತು. ಸಮಾರಂಭಕ್ಕೆರಾಷ್ಟ್ರ ನಾಯಕರನ್ನು ವಿವಿಧ ಪ್ರಮುಖ ವ್ಯಕ್ತಿಗಳನ್ನು ಆವ್ಹಾನಿಸಲು ತಿರ್ಮಾನಿಸಿ ಗಣ್ಯರ ಸಮ್ಮುಖದ ಸ್ವಾಗತ ಸಮೀತಿರಚಿಸುವದರೊಂದಿಗೆ ವಿವಿಧ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಯಿತು.
ಬಿ.ಎ.ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯ “ಸುವರ್ಣ ಮಹೋತ್ಸವ” ಸವಿ ನೆನಪಿಗಾಗಿ ಸ್ಮರಣ ಸಂಚಿಕೆ ಸಾಕ್ಷ್ಯಚಿತ್ರ ನಿರ್ಮಾಣ, ಮೊದಲಾದಯೋಜನೆ ಸಿದ್ಧಪಡಿಸಲು ನಿರ್ಣಯಿಸಿದರು. ಹಳೆಯ ಆಡಳಿತ ಮಂಡಳಿ, ಹಳೆಯ ಸಿಬ್ಬಂದಿ ವರ್ಗ, ಹಳೆಯ ವಿದ್ಯಾರ್ಥಿಗಳು, ವಿವಿಧ ಗಣ್ಯವ್ಯಕ್ತಿಗಳು ಆವ್ಹಾನಿಸಬೇಕು ಹಾಗೂ ಬಿ.ಎ.ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಹೋದ ವಿಶಿಷ್ಟ ಸಾಧನೆ ಮಾಡಿದವರನ್ನುಗೌರವಿಸಬೇಕೆಂದುತಿರ್ಮಾನಿಸಲಾಯಿತು. ಹಾಗೂ ಅರ್ಥಪೂರ್ಣ“ಸುವರ್ಣ ಮಹೋತ್ಸವ ” ಆಚರಣೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿತಿರ್ಮಾನಿಸಲಾಯಿತು.
ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಕೆ.ಕೆ. ಹಾವಿನಾಳ ಶೈಕ್ಷಣಿಕ ಸಲಹೆಗಾರರಾದಎಚ್.ಎ. ಭಿಕ್ಷಾವರ್ತಿಮಠ ಹಾಗೂ ಬಿ.ಎ.ಜೆ.ಎಸ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯಎಲ್ಲಾ ಶಾಲಾ ಕಾಲೇಜಿನ ಮುಖ್ಯಸ್ಥರು ಹಾಗೂ ಸಬ್ಬಂದಿವರ್ಗ ಉಪಸ್ಥಿತರಿದ್ದರು. ಆರಂಭದಲ್ಲಿಎಲ್ಲರನ್ನೂ ಸ್ವಾಗತಿಸಿ ಸಭೆಯ ನಿರ್ವಹಣೆಯನ್ನುಡಾ. ದೇವರಾಜ ಹಂಚಿನಮನಿ ನಿರ್ವಹಿಸಿದರು.