ಮಕ್ಕಳ ಬಾಲ್ಯ ಸಂತೋಷದಿಂದ ಕೂಡಿರಬೇಕು - ಸಪ್ನ ಹರಪನಹಳ್ಳಿ
ಸ್ನೇಹ ಬಳಗ ಸಂಸ್ಥೆಯಿಂದ ಮಕ್ಕಳ ದಿನಾಚರಣೆ:
ರಾಣೆಬೆನ್ನೂರು 17 : ಮಕ್ಕಳು ತಮ್ಮ ಬಾಲ್ಯದ ಆಟದ ಶಿಕ್ಷಣ ಪ್ರಗತಿಯಲ್ಲಿ ಸಾಗಬೇಕಾದರೆ ಅವರಲ್ಲಿ ಸದಾವಕಾಲವು, ಉತ್ಸುಕತೆ -ಹುಮ್ಮಸ್ಸು ಸಂತೋಷ ತುಂಬುವ ವಾತಾವರಣ ನಿರ್ಮಾಣವಾಗಬೇಕು.
ಅಂತಹ ವಾತಾವರಣಕ್ಕೆ ಮಕ್ಕಳ ದಿನಾಚರಣೆ ಜವಾಹರಲಾಲ್ ನೆಹರು ಅವರ ಹುಟ್ಟು ಹಬ್ಬದ ನಿಮಿತ್ತದಲ್ಲಿ ಆಚರಿಸುತ್ತಿರುವುದು, ಮಕ್ಕಳಲ್ಲಿ ಹೊಸ ಚೈತನ್ಯ ತರಲಿದೆ ಎಂದು ಸ್ನೇಹ ಬಳಗ ಸಂಸ್ಥೆ ಅಧ್ಯಕ್ಷ ಸ್ವಪ್ನ ದೀಪಕ್ ಹರಪನಹಳ್ಳಿ ಹೇಳಿದರು.
ಅವರು ಶನಿವಾರ ವಾಗೀಶ ನಗರದ ಅಂಗನವಾಡಿ ಕೇಂದ್ರದ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಸ್ನೇಹ ಬಳಗ ಸಂಸ್ಥೆ ಆಯೋಜಿಸಿದ್ದ ಆಟಿಕೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಬಾಲ ಮಕ್ಕಳು ಮುಂದಿನ ಈ ದೇಶದ ನಾಡಿನ ಭವಿಷ್ಯದ ನಾಯಕರು ಅವರ ಹುಟ್ಟುಹಬ್ಬವು ಅತ್ಯಂತ ಸಂಭ್ರಮದಿಂದ ಕೂಡಿರಬೇಕು, ಅದು ಸಂಸ್ಥೆಯ ಉದ್ದೇಶವು ಸಹ ಆಗಿದೆ ಎಂದರು.
ಬಾಲ್ಯದ ಬುದ್ಧಿ ನೂರು ವರ್ಷದ ತನಕ ಎನ್ನುವ ಗಾದೆ ಮಾತು ವಾಸ್ತವಿಕ ಸತ್ಯ. ಮಕ್ಕಳ ಲಾಲನೆ- ಪಾಲನೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ. ಅವರ ಸೇವೆ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶ್ರೀಮತಿ ಪಿ. ಎ. ನಯನ, ಕಾರ್ಯದರ್ಶಿ, ಶ್ರೀಮತಿ ಸಾವಿತ್ರಾ ಚೆಲ್ಲಾಳ, ಶ್ರೀಮತಿ ಶೈಲಾ ಹಿರೇಮಠ, ಶ್ರೀಮತಿ ಅನುಷಾ, ಶ್ರೀಮತಿ ಚೇತನಾ ಮುಂಡಾಸದ, ಅಂಗನವಾಡಿ ಶಿಕ್ಷಕಿಯರಾದ ಸುಜಾತಾ ಉಪ್ಪಾರ, ಶಿಲ್ಪಾಅಡ್ಡಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸ್ನೇಹ ಬಳಗ ಸಂಸ್ಥೆಯ ಪರವಾಗಿ 50ಕ್ಕೂ ಹೆಚ್ಚು ಮಕ್ಕಳಿಗೆ ಸಿಹಿ ಮತ್ತು ಆಟಿಕೆ ಸಾಮಗ್ರಿಗಳನ್ನು ವಿತರಿಸಿ ಶುಭ ಕೋರಿದರು.