ಯರಗಟ್ಟಿ

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ವಸತಿ ನಿಲಯಗಳ ಪರೀಶೀಲನೆ

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ವಸತಿ ನಿಲಯಗಳ ಪರೀಶೀಲನೆ


           ಯರಗಟ್ಟಿ 17: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ   ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಸತಿ ನಿಲಯಗಳ (ಹಾಸ್ಟೆಲ್) ಮೂಲಭೂತ ಸೌಕರ್ಯಗಳ ಪರೀಶೀಲನೆ ಹಾಗೂ ದೂರುಗಳ ತನಿಖೆಗಾಗಿ ಭೇಟಿ ನೀಡಿದರು. ದೂರುಗಳ ವಿಚಾರಣೆ: ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುವ ಊಟ ಉಪಚಾರ ತಾರತಮ್ಯ, ಕಿರುಕುಳ ಅಥವಾ ದೌರ್ಜನ್ಯದ ಕುರಿತು ದೂರುಗಳು ಬಂದ ಕಾರಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.

                ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಸರ್ಕಾರದ ನಿಯಮಗಳಂತೆ ಆಹಾರ, ಶುಚಿತ್ವ, ಕುಡಿಯುವ ನೀರು ಮತ್ತು ವಸತಿ ವ್ಯವಸ್ಥೆ ಇದೆಯೇ ಎಂದು ಪರೀಶೀಲಿಸಿದರು. ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿವೇತನ ಪುಸ್ತಕಗಳು ಮತ್ತು ಇತರೆ ಸವಲತ್ತುಗಳು ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳೊಂದಿಗೆ ನೇರವಾಗಿ ಮಾತನಾಡಿದರು.

               ಪರೀಶೀಲನೆಯ ವೇಳೆ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದು, ಸಂಬಂಧಪಟ್ಟ ವಾರ್ಡನ್ ಅಥವಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹಾಗೂ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಎಸ್ಪಿಪ್ರತಾಪ್ ಸಿಂಗ್ ತೋರಾಟ ಹೇಳಿದರು. ಈ ವೇಳೆ ಹವಲ್ದಾರ್‌ವಿಠ್ಠಲ ಮಾದರ, ನಿಲಯ ಪಾಲಕಿ ಲಕ್ಷ್ಮಿಬಾಯಿ, ಸಮಾಜ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ಆರ್‌. ಆರ್‌. ಕುಲಕರ್ಣಿ, ಡಿಎಸ್ ಮುಖಂಡ ಸಂತೋಷ ಚನ್ನ ಮೇತ್ರಿ, ಅರುಣ ನೀಲಪ್ಪನವರ, ಲಂಕೇಶ ಮೇತ್ರಿ, ಕರವೇ ಅಧ್ಯಕ್ಷ ರಫೀಕ ಡಿ.ಕೆ,ಫಿರೋಜ್ ಖಾದ್ರಿ ಇದ್ದರು. 


ಸುದ್ದಿ ಓದಿ