ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಸಭಾಭವನದಲ್ಲಿ ಮಕ್ಕಳ ದಿನಾಚರಣೆ
ಲೋಕದರ್ಶನ ವರದಿ
ಯರಗಟ್ಟಿ 15 : ಪಾಲಕರು ಮತ್ತು ಶಿಕ್ಷಕರು ಮಕ್ಕಳ ಶ್ರೇಯಸ್ಸಿಗಾಗಿ ಅವರ ಭವಿಷ್ಯಕ್ಕಾಗಿ ಶ್ರಮ ವಹಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮುಖ್ಯಶಿಕ್ಷಕ ಎ.ಎ. ಮಕ್ತಮನವರ ಹೇಳಿದರು.
ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಂಡಿತ ಜವಾಹರಲಾಲ ನೆಹರು ಭಾವ ಚಿತ್ರಕ್ಕೆ ಮಕ್ಕಳು ಪೂಜೆ ಸಲ್ಲಿಸಿ ಕೇಕ ಕತ್ತರಿಸಿದರು.
ಸಿಆರ್ಪಿ ವಸಂತ ಬಡಿಗೇರ, ಎಸ್.ಡಿ.ಎಂ.ಸಿ ಸದ್ಯರಾದ ಫಿರೋಜ ಖಾದ್ರಿ, ಮುದಕಪ್ಪ ತಡಸಲೂರ, ರತ್ನಾ ಹಡಪದ, ಶಿಕ್ಷಕರಾದ ಎಂ. ಎಂ. ಚೀಲದ,, ಎಸ್. ಬಿ. ಮಿಕಲಿ, ಬಿ. ಎಂ. ಸರದಾರ, ಆರ್. ಕೆ. ಹುಣ್ಣಶಿಕಟ್ಟಿ, ರಾಮಕೃಷ್ಣ ಬಳಿಗಾರ, ಬಿ. ಆಯ್. ಹಲಗಲಿ, ಎಸ್. ಎಸ್. ಹೊಸಮನಿ, ವ್ಹಿ. ಆರ್. ಹರ್ಲಾಪೂರ, ಬಿ. ಬಿ. ನೀರ್ವಾಣಿ, ಎಸ್. ಎ. ಪೂಜಾರಿ, ಎಸ್. ಆಯ್. ಹಿರೇಹೊಳಿ ಸೇರಿದಂತೆ ಶಿಕ್ಷರು, ಶಿಕ್ಷಿಯರು ಮತ್ತು ವಿದ್ಯಾರ್ಥಿಗಳು ಇದ್ದರು.