ಕಾನೂನು ಮಹಾವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ
ಲೋಕದರ್ಶನ ವರದಿ
ತಾಳಿಕೋಟಿ 15: ಭಾರತದ ಮೊದಲ ಪ್ರಧಾನ ಮಂತ್ರಿಯಾದ ಜವಾಹರ ಲಾಲ್ ನೆಹರು ಅವರ ಜನ್ಮ ದಿನದ ನಿಮಿತ್ಯವಾಗಿ ಸ್ಥಳೀಯ ಮಾತೃಶ್ರೀ ಕಮಲಾಬಾಯಿ ಸಿದ್ದಪ್ಪ ಕರ್ಚಗಿ ಕಾನೂನು ಮಹಾವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಯನ್ನು ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಅನಾಮಿಕ ಅಗರ್ವಾಲ, ಉಪನ್ಯಾಸಕರಾದ ಗಂಗಾಧರ ಕಸ್ತೂರಿ, ಶೋಭಾ ಪಾಟೀಲ, ಹಣಮಂತ್ರಾಯ ನಾಗೋಡು ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.