ಬೆಳಗಾವಿ

ಬಾಲ್ಯದ ಶಿಕ್ಷಣ ಮಗುವಿನ ಬೆಳವಣಿಯ ಮೂಲಾಧಾರವಾಗಿದೆ :ರಮೇಶ ಅಳಗುಂಡಿ

ಬಾಲ್ಯದ ಶಿಕ್ಷಣ ಮಗುವಿನ ಬೆಳವಣಿಯ ಮೂಲಾಧಾರವಾಗಿದೆ :ರಮೇಶ ಅಳಗುಂಡಿ

ಲೋಕದರ್ಶನ ವರದಿ 

         ಬೆಟಗೇರಿ 15 : ಪ್ರತಿ ಮಗುವಿಗೆ ತನ್ನ ಬದುಕಿನಲ್ಲಿ ಬಾಲ್ಯಾವಸ್ಥೆಯು ಬಂಗಾರಮವಾಗಿದೆ. ಬಾಲ್ಯಾವಸ್ಥೆ ಮಗುವಿನ ಬೆಳವಣಿಯ ಒಂದು ಪ್ರಮುಖ ಹಂತವಾಗಿದೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ಕೊಡುಗೆ ಅಪಾರವಾಗಿದೆ ಎಂದು ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.  

             ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನ.14ರಂದು ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲ್ಯದ ಶಿಕ್ಷಣವು ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಮತ್ತು ಭವಿಷ್ಯದ ಶೈಕ್ಷಣಿಕ ಯಶಸ್ಸಿಗೆ ಮೂಲಾಧಾರವಾಗಿದೆ. ಇದು ಭವಿಷ್ಯದ ಕಲಿಕೆ, ಸಾಮಾಜಿಕ ಸಂವಹನ ಮತ್ತು ವೈಯಕ್ತಿಕ ಬೆಳವಣಿಗೆಗೆ ಅಡಿಪಾಯ ಹಾಕುತ್ತದೆ. ಮಕ್ಕಳ ಹಕ್ಕುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. 

             ಈ ವೇಳೆ ಪಂಡಿತ್ ಜವಾಹರಲಾಲ್ ನೆಹರು ಭಾವ ಚಿತ್ರಕ್ಕೆ ಪೂಜೆ, ಪುಷ​‍್ಾರೆ್ಪನ ಸಮರೆ​‍್ನ ಕಾರ್ಯಕ್ರಮ ನಡೆದ ಬಳಿಕ ಸಿಹಿ ವಿತರಿಸಲಾಯಿತು. ಶಾಲೆಯ ಶಿಕ್ಷಕರಾದ ಸದಾನಂದ ತೆರಣೆ ಅವರು, ಶಾಲಾ ಮಕ್ಕಳ ಸಮಗ್ರ ಬೆಳವಣಿಗೆ, ಪಂಡಿತ್ ಜವಾಹರಲಾಲ್ ನೆಹರು ಮಕ್ಕಳ ಮೇಲೆ ಅವರು ಹೊಂದಿದ್ದ ಅಪಾರ ಪ್ರೀತಿ ಕುರಿತು ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಮಕ್ಕಳ ದಿನಾಚರಣೆ ಪ್ರಯುಕ್ತ ಸಂಭ್ರಮಿಸಿದರು.  

           ಶುಭಾ.ಬಿ., ಈರಣ್ಣ ಪಟಗುಂದಿ, ಪ್ರಕಾಶ ಕುರಬೇಟ, ರಾಕೇಶ ನಡೋಣಿ, ಗಣಪತಿ ಭಾಗೋಜಿ, ಭಾಗ್ಯಶ್ರೀ ನಾಯಕ, ಮಲ್ಹಾರಿ ಪೋಳ, ಸಿರಾಜಅಹ್ಮದ ಜಿಡ್ಡಿಮನಿ, ನಾಗರಾಜ ಅರಳಿಮಟ್ಟಿ, ಮಂಜುನಾಥ ಸವತಿಕಾಯಿ, ಬಸವರಾಜ ಗೋಸಲೆ, ದೀಪಾ ದಾಸಂಗಳಿ, ಸ್ವಾತಿ ಬಡಿಗೇರ ಸೇರಿದಂತೆ ಶಾಲೆಯ ಶಿಕ್ಷಕರು, ಅತಿಥಿಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು. 


ಸುದ್ದಿ ಓದಿ