ಬೆಳಗಾವಿ

ಬೈಲೂರಿನ ಮಠದ ಶಾಂತ ವಾತಾವರಣ ಮತ್ತು ಸ್ವಚ್ಛತೆ ಮನಸೂರೆಗೊಂಡಿದೆ : ಪದ್ಮಶ್ರೀ ಡಾ. ಪ್ರಭಾಕರ್ ಕೋರೆ ಮೆಚ್ಚುಗೆ

ಬೈಲೂರಿನ ಮಠದ ಶಾಂತ ವಾತಾವರಣ ಮತ್ತು ಸ್ವಚ್ಛತೆ ಮನಸೂರೆಗೊಂಡಿದೆ : ಪದ್ಮಶ್ರೀ ಡಾ. ಪ್ರಭಾಕರ್ ಕೋರೆ ಮೆಚ್ಚುಗೆ
The serene atmosphere and cleanliness of the Bailur Math have captivated the mind: Praise from Padma

ಲೋಕದರ್ಶನ ವರದಿ 

           ಚನ್ನಮ್ಮನ ಕಿತ್ತೂರು 16 : ಚನ್ನಬಸವಣ್ಣನವರ ಪುಣ್ಯಕ್ಷೇತ್ರವಾದ ಬೈಲೂರಿನ ಮಠವು ಅತ್ಯಂತ ಸಣ್ಣ ಊರಿನಲ್ಲಿದ್ದರೂ, ಇಲ್ಲಿನ ಸ್ವಚ್ಛತೆ, ಶಿಸ್ತು ಮತ್ತು ಶಾಂತ ವಾತಾವರಣವನ್ನು ನೋಡಿದರೆ ಇದೊಂದು ಅರಮನೆಯಂತಿದೆ. 50 ವರ್ಷಗಳ ನಂತರ ಗುರುಗಳ ಒತ್ತಾಯದ ಮೇರೆಗೆ ಇಲ್ಲಿಗೆ ಬಂದಿರುವುದು ನನಗೆ ಅತ್ಯಂತ ಸಂತೋಷ ಮತ್ತು ಆನಂದವನ್ನು ತಂದಿದೆ" ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ,  ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಹೇಳಿದರು. 

         ತಾಲೂಕಿನ ಬೈಲೂರಿನ ನಿಷ್ಕಲ ಮಂಟಪದಲ್ಲಿ ರವಿವಾರ ಪದ್ಮಶ್ರೀ ಪುರಸ್ಕೃತ ಪುರಸ್ಕೃತ  ಡಾ. ಪ್ರಭಾಕರ ಕೋರೆ ಅವರಿಗೆ  ಅಭಿನಂದನಾ ಗೌರವ ಸಮಾರಂಭ ಮಾತನಾಡಿದ ಅವರು,  ಪ್ರಶಸ್ತಿಯ ಶ್ರೇಯಸ್ಸು ಸಂಸ್ಥೆ ಮತ್ತು ಸಮಾಜಕ್ಕೆ ಸಲ್ಲಿಕೆಯಾಗುತ್ತದೆ.  "ನನಗೆ ದೊರೆತಿರುವ ಪದ್ಮಶ್ರೀ ಪ್ರಶಸ್ತಿಯು ವೈಯಕ್ತಿಕವಾಗಿ ನನಗೆ ಸಿಕ್ಕಿದ್ದಲ್ಲ; ಬದಲಾಗಿ 111 ವರ್ಷಗಳ ಇತಿಹಾಸವಿರುವ ಕೆಎಲ್‌ಇ ಸಂಸ್ಥೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ನನ್ನನ್ನು ಬೆಳೆಸಿದ ಉತ್ತರ ಕರ್ನಾಟಕದ ಸಮಸ್ತ ಜನತೆಗೆ ಸಲ್ಲಬೇಕು" ಎಂದು ಅವರು ವಿನಮ್ರವಾಗಿ ನುಡಿದರು. 

             ಉತ್ತರ ಕರ್ನಾಟಕಕ್ಕೆ 'ಕಿತ್ತೂರು ಕರ್ನಾಟಕ' ಎಂದು ಮರುನಾಮಕರಣ ಮಾಡಲು ತಾವು ನಡೆಸಿದ ನಿರಂತರ ಹೋರಾಟವನ್ನು ಸ್ಮರಿಸಿದ ಅವರು, ಇತ್ತೀಚೆಗೆ ರಾಜ್ಯ ಸರ್ಕಾರವು ಸಾರಿಗೆ ಸಂಸ್ಥೆಯ ಬಸ್‌ಗಳಿಗೆ 'ಕಿತ್ತೂರು ಕರ್ನಾಟಕ' ಎಂದು ಹೆಸರಿಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ 'ಕಿತ್ತೂರು ರಾಣಿ ಚನ್ನಮ್ಮ' ಅವರ ಹೆಸರಿಡಲು ಕೇಂದ್ರ ಸಚಿವರಿಗೆ ಆಗ್ರಹಿಸಲಾಗಿದೆ ಅವರು ಸ್ಪಂಧಿಸಿದ್ದಾರೆ.

          ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.  ರೈತರ ಅಭಿವೃದ್ಧಿಗೆ ಕೃಷಿ ಕಾಲೇಜು ಮತ್ತು ತಂತ್ರಜ್ಞಾನ: ಕೆಎಲ್‌ಇ ಸಂಸ್ಥೆಯ ಅಡಿಯಲ್ಲಿ ಕೃಷಿ ಕಾಲೇಜು ಆರಂಭಿಸಲು ಅನುಮತಿ ದೊರೆತಿರುವುದು ತಮಗೆ ಅತ್ಯಂತ ತೃಪ್ತಿ ನೀಡಿದೆ ಎಂದರು. ರೈತರು ಹಳೆಯ ಪದ್ಧತಿಯನ್ನು ಬಿಟ್ಟು ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಕರೆ ನೀಡಿದರು. 

              ಶ್ರೀಗಳ ಬಸವ ತತ್ವ ಪ್ರಚಾರಕ್ಕೆ ಶ್ಲಾಘನೆ: ಕಳೆದ 25 ವರ್ಷಗಳಿಂದ ಬೈಲೂರು ಶ್ರೀಗಳು ಬಸವಣ್ಣನವರ ತತ್ವಗಳನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಪ್ರಚಾರ ಮಾಡುತ್ತಿರುವುದನ್ನು ಡಾ. ಕೋರೆ ಮುಕ್ತಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಶ್ರೀಗಳ ಬಸವ ತತ್ವ ಪ್ರಚಾರಕ್ಕಾಗಿ ತಾವು ಈ ಹಿಂದೆ ಇನ್ನೋವಾ ಕಾರು ಕೊಡಿಸಿದ್ದ ಹಳೆಯ ನೆನಪುಗಳನ್ನು ಸ್ಮರಿಸಲಾಯಿತು. 

ಬೈಲೂರು ಗ್ರಾಮ ದೇಶದಲ್ಲೇ ಮೊಟ್ಟಮೊದಲ ಅಸ್ಪೃಶ್ಯತೆ ನಿವಾರಣೆಯ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ.

                   ಇಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವೆ ಸಂಪೂರ್ಣ ಸಾಮರಸ್ಯವಿದೆ. "ನಾವು ಬದುಕಿರುವವರೆಗೂ ಬಸವಣ್ಣನವರ ತತ್ವಕ್ಕಾಗಿ ಬದುಕುತ್ತೇವೆ. ಮನುಷ್ಯನಿಗೆ ಧರ್ಮವು ಭಯವಾಗದೆ, ಬದುಕಿಗೆ ದಾರೀದೀಪವಾಗಬೇಕು. ನನ್ನ ಕೊನೆಯ ಉಸಿರು ಇರುವವರೆಗೂ ಬೈಲೂರು ಗ್ರಾಮದ ಸೇವೆಗೆ ನಾನು ಬದ್ಧನಾಗಿದ್ದೇನೆ" ಎಂದು ಸ್ವಾಮೀಜಿ ಭಾವುಕರಾಗಿ ನುಡಿದರು. 

ಮಠದ ವತಿಯಿಂದ ಕಳೆದ 25 ವರ್ಷಗಳಿಂದ ಅತ್ಯಂತ ಕಡಿಮೆ ಶುಲ್ಕದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ಇಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  

                      ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿದರು. ಬೆಳವಿಯ ಶರಣ ಬಸವದೇವರು, ಅಥಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಗಂದಿಗವಾಡದ ಮೃತುಂಜಯ್ಯ ಹಿರೇಮಠ, ಡಾ. ವಿಶ್ವನಾಥ ಪಾಟೀಲ,  ರೋಹಿನಿ ಪಾಟೀಲ, ಶಿವನಗೌಡ ಪಾಟೀಲ, ವಿರೇಶ ಕಂಬಳಿ, ಪಕ್ಕಿರಗೌಡ ಸಿದ್ದನಗೌಡರ, ಉಮೇಶ ಬಾಳಿ, ಶಂಕರ ಬುಡಸ, ಬಸವರಾಜ ಪ್ರಭನ್ನವರ, ಚನ್ನಪ್ಪ ನರಸಣ್ಣವರ, ಎಫ್‌.ಎಸ್‌. ಸಿದ್ದನಗೌಡರ, ಶೀವು ಮೇಟ್ಯಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.  ಮಹೇಶ ಚನ್ನಂಗಿ ಉಪನ್ಯಾಸ ನೀಡಿದರು. ನಾಗೇಶ ಅಜ್ಜವಾಡಿಮಠ ಸ್ವಾಗತಿಸಿದರು. ಶಿಕ್ಷಕ ವಿವೇಕ ಕುರಗುಂದ ನಿರೂಪಿಸಿದರು.  


ಸುದ್ದಿ ಓದಿ