ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಶಿಬಿರ ಯಶಸ್ವಿ
ಹೂವಿನಹಡಗಲಿ : ನ.16- ತಾಲೂಕಿನ ಮಹಾಜನದಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಅಡವಿ ಮಲ್ಲನಕೇರೆಯ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಸುಜಲಾನ್ ಫೌಂಡೇಶನ್ ಪುಣೆ,ನೀಡ್ ಸಂಸ್ಥೆ ರಾಣೆಬೆನ್ನೂರು ಸೇರಿದಂತೆ ನಾನಾ ಸಂಘಟನೆಗಳಿಂದ ಈಚೆಗೆ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಯಶಸ್ವಿಯಾಗಿ ನಡೆಯಿತು.ಸುಜಲಾನ್ ಫೌಂಡೇಶನ್ ಸಹ ವ್ಯವಸ್ಥಾಪಕರಾದ ಸುನೀತಾ ಹಾದಿಮನಿ ಮಾತನಾಡಿ ಸಾರ್ವಜನಿಕ ರಲ್ಲಿ ಕಣ್ಣಿನ ದೃಷ್ಟಿ, ಪರೀಕ್ಷೆ, ಕಣ್ಣಿನ ಪೊರೆ ಚಿಕಿತ್ಸೆ ಯನ್ನು ನೀಡಲಾಗಿದೆ.
ಜತೆಗೆ ಆರೋಗ್ಯ ಬಗ್ಗೆ ಕಳಾಜಿ ವಹಿಸಿ ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು. ನೀಡ್ಸ್ ಸಂಸ್ಥೆಯ ಸಿಇಒ ಎಚ್.ಎಸ್. ಅಕ್ಕಿ ಕಣ್ಣಿನ ಮಹತ್ವದ ಬಗ್ಗೆ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸಿದರು. ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ,ಶಂಕರ ದೃಷ್ಟಿಕೇಂದ್ರ ಹೊಸಪೇಟೆ, ಮಹಾತ್ಮ ಗಾಂಧಿ ಗ್ರಾ. ಪಂ. ಮಹಾಜನದಹಳ್ಳಿ, ಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮೀತಿ ಅಡವಿಮಲ್ಲನಕೇರಿ, ಸುಜಲಾನ್ ಫೌಂಡೇಶನ್ ಪುಣೆ, ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್) ರಾಣೆಬೆನ್ನೂರು,
ಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಂಘ, ನವಸಿರಿ ಸಹಕಾರ ಸಂಘ ನಿ, ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 200ಕ್ಕೂ ಹೆಚ್ಚು ರೋಗಿಗಳ ಕಣ್ಣು ತಪಾಸಣೆ ನಡೆಸಿ, 16 ಜನರ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಯಿತು ಎಂದು ಸುಜಾಲನ್ ಸುನೀತಾ ಹಾದಿಮನಿ,ನೀಡ್ ಸಂಸ್ಥೆಯ ಅಕ್ಕಿ ತಿಳಿಸಿದ್ದಾರೆ. ವೈದ್ಯರು ಚಿಕಿತ್ಸೆ, ತಪಾಸಣೆ ಮಾಡಿದರು.ನೀಡ್ ಸಂಸ್ಥೆಯ ಜಿಲ್ಲಾ ಸಂಯೋಜಕ ಎಂ.ಕರಿಬಸಪ್ಪ, ಮಲ್ಲಿಕಾರ್ಜುನ,ವಿಡಿಸಿಎ ಅದ್ಯಕ್ಷೆ ಶಿಲ್ಪಾ, ನವಸಿರಿ ಸಹಕಾರಿ ಸಂಘದ ಅದ್ಯಕ್ಷ ಸುನೀತಾ ಸೆಟ್ಟರ್, ಸುಜಲಾನ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಸೇರಿದಂತೆ ನಾನಾ ಸಂಘಟನೆ ಪದಾಧಿಕಾರಿಗಳು ಇದ್ದರು.