ರಾಗಿ ಖರೀದಿ ಕೇಂದ್ರ ತೆರೆಯಲು ಆಗ್ರಹ
ಲೋಕದರ್ಶನ ವರದಿ
ಹೂವಿನಹಡಗಲಿ 13: ಮುಂಗಾರು 2026-27ನೇ ಸಾಲಿಗೆ ರಾಗಿಯ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 5,202 ತಕ್ಷಣವೇ ನೋಂದಣಿ ಮತ್ತು ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.ತಾಲೂಕಿನಲ್ಲಿ ರೈತರು ಸುಮಾರು 5,670 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದ್ದು, ಸಾಲ ಸೋಲು ಮಾಡಿ ಬೆಳೆ ಬೆಳೆದಿದ್ದಾರೆ.ಮುಕ್ತ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಕಡಿಮೆ ಬೆಲೆಗೆ ರಾಗಿ ಖರೀದಿಸುವ ಸಾಧ್ಯತೆ ಇರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ.
ಸಾಮಾನ್ಯವಾಗಿ ಸರ್ಕಾರವು ಡಿಸೆಂಬರ್‌ನಲ್ಲಿ ನೋಂದಣಿ ಆರಂಭಿಸಿ ಜನವರಿಯಲ್ಲಿ ಖರೀದಿ ಪ್ರಕ್ರಿಯೆ ಶುರುಮಾಡುತ್ತದೆ. ಆದರೆ, ರೈತರ ಆರ್ಥಿಕ ಸಂಕಷ್ಟವನ್ನು ನೀಗಿಸಲು ಈ ಬಾರಿ ನವೆಂಬರ್‌ನಲ್ಲೇ ನೋಂದಣಿ ಮತ್ತು ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ರೈತರುಖರೀದಿ ಮಿತಿ ಸಡಿಲಿಕೆ. ಪ್ರತಿ ಎಕರೆಗೆ ಮತ್ತುಪ್ರತಿ ರೈತನಿಗೆ ನಿಗದಿಪಡಿಸುವ ಗರಿಷ್ಠ ಖರೀದಿ ಮಿತಿಯನ್ನು ಹೆಚ್ಚಿಸಬೇಕು ಹಾಗೂ ಗುಣಮಟ್ಟದ ಹೆಸರಿನಲ್ಲಿ ರೈತರಿಗೆ ತೊಂದರೆ ನೀಡಬಾರದು ಎಂದು ಆಗ್ರಹಿಸಿದರು.'
ಜಿಲ್ಲಾ ಉಪಾಧ್ಯಕ್ಷ ಕೆ ಮಂಜುನಾಥ್ ,ಜಿಲ್ಲಾ ಮಹಿಳಾ ಅಧ್ಯಕ್ಷೆ ಬಿ.ಎಚ್.ಎಂ. ವಿಜಯಲಕ್ಷ್ಮಿ. ರೇಖಾ, ಪಕ್ಕೀರ್ಪ ಪ್ರಧಾನ ಕಾರ್ಯದರ್ಶಿ ಎಂ. ಶಿವರಾಜ ಹೊಳಗುಂದಿ, ಕಬ್ಬು ಬೆಳೆಗಾರ ಮುಖಂಡ ಚಂದ್ರ್ಪ, ದುರುಗಪ್ಪ , ಹೆಚ್. ದೌಲತ ಸಾಬ್ ರವಿಕುಮಾರ್ ಅವರು ಬೇಡಿಕೆಯ ಮನವಿಯನ್ನು ಉಪತಹಸೀಲ್ದಾರರು ಮಲ್ಲಿಕಾರ್ಜುನ ಸಲ್ಲಿಸಿದರು.