ಹೂವಿನ ಹಡಗಲಿ

ಕೋಟೆ ವೀರಭದ್ರೇಶ್ವರ ದೇವಸ್ಥಾನ ಕಾರ್ತೀಕೋತ್ಸವಕ್ಕೆ ಚಾಲನೆ

ಕೋಟೆ ವೀರಭದ್ರೇಶ್ವರ ದೇವಸ್ಥಾನ ಕಾರ್ತೀಕೋತ್ಸವಕ್ಕೆ ಚಾಲನೆ


           ಹೂವಿನಹಡಗಲಿ:ನ.11- ಪಟ್ಟಣದ ಕೋಟೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಥಮ ದಿನವಾದ ದೀಪಾವಳಿಯಂದು  ರುದ್ರಾಭಿಷೇಕ ಹಾಗೂ ಕಾರ್ತೀಕೋತ್ಸವ  ಕಾರ್ಯಕ್ರಮಕ್ಕೆ ಸ್ಥಳೀಯ ಶ್ರೀಗವಿಮಠದ ಮ.ನಿ.ಪ್ರ.ಡಾ.ಹಿರಿ ಶಾಂತವೀರ ಮಹಾಸ್ವಾಮಿಗಳು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಬದುಕಿನ ಕತ್ತಲೆ, ಸಂಕಷ್ಟಗಳು ದೂರವಾಗಿ ಭರವಸೆಯ ಬೆಳಕು ಮೂಡಲಿ ಎನ್ನುವ ಆಶಯದೊಂದಿಗೆ ಸಾಂಕೇತಿಕವಾಗಿ ಕಾರ್ತಿಕೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

            ಮಕ್ಕಳಲ್ಲಿ ಧಾರ್ಮಿಕ  ಪ್ರಜ್ಞೆ ಮೂಡಿಸಲು ಪೋಷಕರು ಸೂಕ್ತ ಮಾರ್ಗದರ್ಶನ ಮಾಡಬೇಕು. ಅಷ್ಟಾವರಣ, ಪಂಚಾಚಾರಗಳ ಮಾಹಿತಿ ನೀಡಿ ಪ್ರತಿದಿನ ಲಿಂಗ ಪೂಜೆ ಮಾಡಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದರು. ಪ್ರಾರಂಭದಲ್ಲಿ ಕುಬುಸದ ರುದ್ರ​‍್ಪ ಕುಟುಂಬಸಮೇತರಾಗಿ ಸಮಿತಿಯ ಪರವಾಗಿ ಶ್ರೀಗಳ ಪಾದಪೂಜೆಮಾಡಿ ಭಕ್ತಿ ಸಮರ​‍್ಿಸಿದರು. ಟಿ.ಮಂಜುಳಾ ಪ್ರಾರ್ಥಿಸಿದರು.                       ಅಯ್ಯನಗೌಡರ ಕೊಟ್ರಗೌಡ ಅಭಿಷೇಕ, ಕಾರ್ತಿಕೋತ್ಸವ ಹಾಗೂ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ತಿಕ ಮಾಸದಲ್ಲಿ ಪ್ರತಿದಿನ ಬೆಳಿಗ್ಗೆ 6:00ಗೆ             ಶ್ರೀಸ್ವಾಮಿಗೆ ರುದ್ರಾಭಿಷೇಕ ಹಾಗೂ ಸಂಜೆ 6:30ಕ್ಕೆ ಕಾರ್ತಿಕೋತ್ಸವ ನಡೆಯುವ ಬಗ್ಗೆ ಮಾಹಿತಿ ನೀಡಿದರು.

             ಈ ಸಂದರ್ಭದಲ್ಲಿ ಕೋಟೆ ಶ್ರೀ ವೀರಭದ್ರೇಶ್ವರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಲ್ಲಪ್ಪ ಗಡಿಗಿ, ಕೋಡಿಹಳ್ಳಿ ಮುದುಕಪ್ಪ, ಪಾಟೀಲ್ ವಿಜಯಕುಮಾರಗೌಡ, ಗಡಿಗಿ ಬಸಣ್ಣ,ವೀರೇಂದ್ರ ಪಾಟೀಲ್,ಸಿ.ಎಂ. ನಾಗಭೂಷಣ, ವಾಮದೇವಪ್ಪ, ಮಂಜುನಾಥ ಸೇರಿದಂತೆ ಕೋಟೆಯ ಪ್ರಮುಖರು, ಸಮಿತಿಯ ಸದಸ್ಯರು, ಭಕ್ತರು ಹಾಜರಿದ್ದರು. ಶಿಕ್ಷಕ ಹೊಂಬಾಳಿ ಕೊಟ್ರೇಶ್ ವಂದಿಸಿದರು. ಅರ್ಚಕ ಸಿ.ಎಂ. ವಿಜಯಕುಮಾರ ಮಹಾ ಮಂಗಳಾರತಿ ಮಾಡಿದರು. ನಂತರ ಪ್ರಸಾದ ವಿನಯೋಗಿಸಲಾಯಿತು. 


ಸುದ್ದಿ ಓದಿ