ವಿಜಯಪುರ

ಸಮ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರ: ಸಂಗಪ್ಪ ತಡವಲ

ಸಮ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರ: ಸಂಗಪ್ಪ ತಡವಲ
The contribution of the Sharanas to the creation of an egalitarian society is immense: Sangappa Tada


              ದೇವರಹಿಪ್ಪರಗಿ 11 : ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆಯ ಸಭಾ ಭವನದಲ್ಲಿ ಮಂಗಳವಾರದಂದು ವಚನೋತ್ಸವದ ಅಂಗವಾಗಿ ಚನ್ನಬಸವಣ್ಣ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.

            ಕಾರ್ಯಕ್ರಮದಲ್ಲಿ ಬಸವ ಶರಣ ಸಂಗಮ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ ಅವರು ಮಾತನಾಡಿ, ಬಸವಣ್ಣ, ಚನ್ನಬಸವಣ್ಣ ಸೇರಿದಂತೆ ಅನೇಕ ಶರಣರು ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ.

            ಜಾತಿ, ಮತ, ಭೇದಭಾವಗಳನ್ನು ತೊಡೆದುಹಾಕಿ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳ ಮೂಲಕ ಆದರ್ಶ ಸಮಾಜ ನಿರ್ಮಿಸಲು ಪ್ರಯತ್ನಿಸಿದ್ದಾರೆ. ಶರಣರ ವಚನಗಳು ಇಂದಿಗೂ ಸಮಾಜಕ್ಕೆ ದಾರೀದೀಪವಾಗಿವೆ ಎಂದು ಹೇಳಿದರು.

             ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ವ್ಹಿ.ಕೆ. ಪಾಟೀಲ ಅವರು ಚನ್ನಬಸವಣ್ಣನವರ ಜೀವನ, ಆದರ್ಶಗಳು ಹಾಗೂ ಸಮಾಜ ಸುಧಾರಣೆಗೆ ನೀಡಿದ ಕೊಡುಗೆಗಳ ಕುರಿತು ಮಾತನಾಡಿದರು.

             ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಜಿ.ಆರಿ​‍್ಬರಾದಾರ,ಗೋಲ್ಲಾಳಪ್ಪ ಬಿರಾದಾರ, ಸಂಗನಗೌಡ ಪಾಟೀಲ, ಬಸವರಾಜ ದೊಡ್ಡಮನಿ ಸೇರಿದಂತೆ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ